ನವದೆಹಲಿ: ಈ ವರ್ಷ ಭಾರತವು ಯುಕೆಯನ್ನು ಹಿಂದಿಕ್ಕೆ ವಿಶ್ವದ ಐದನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಮತ್ತು 2025ರ ವೇಳೆಗೆ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು IHS Markit ತನ್ನ ವರದಿಯಲ್ಲಿ ತಿಳಿಸಿದೆ.
2019 ರ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಎರಡನೇ ಅವಧಿಗೆ ಪುನರಾಯ್ಕೆಯಾದ ಬಳಿಕ, ಹಣಕಾಸು ಸಚಿವಾಲಯವು ಮಂಡನೆಗೊಳಿಸಿದ ವಾರ್ಷಿಕ ಆರ್ಥಿಕ ಸಮೀಕ್ಷೆಯು 2025 ಕ್ಕೆ ತನ್ನ ಆರ್ಥಿಕ ಮಾರ್ಗಸೂಚಿಯನ್ನು ಪ್ರಕಟಿಸಿದೆ.
2019 ರಲ್ಲಿ 3 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿರುವ ಭಾರತವನ್ನು, 2025 ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಪರಿವರ್ತಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ, ಇದು ಭಾರತವನ್ನು ವಿಶ್ವದ ಉನ್ನತ-ಮಧ್ಯಮ-ಆದಾಯ ದೇಶಗಳ ಸ್ಥಾನಕ್ಕೆ ಏರಿಸಲಿದೆ ಎಂದು ವರದಿ ಅಭಿಪ್ರಾಯಿಸಿದೆ.
IHS Markit 2019ರ ವರದಿಯಲ್ಲಿ, ಭಾರತವು ಯುಕೆಯನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅಂದಾಜಿಸಲಾಗಿದೆ ಮತ್ತು 2025 ರಲ್ಲಿ ಭಾರತದ ಜಿಡಿಪಿ 5.9 ಟ್ರಿಲಿಯನ್ ಯುಎಸ್ಡಿ ತಲುಪಲಿದೆ ಎಂಬ ಮುನ್ಸೂಚನೆಯನ್ನೂ ನೀಡಲಾಗಿದೆ, ಇದು ಜಪಾನಿನ ಜಿಡಿಪಿಯನ್ನು ಮೀರಿಸಿ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲಿದೆ ಎಂದು ತಿಳಿಸಲಾಗಿದೆ.
ಅಲ್ಲದೆ, 2019ರಲ್ಲಿ 1.9 ಟ್ರಿಲಿಯನ್ ಡಾಲರ್ ಇರುವ ಭಾರತೀಯ ಗ್ರಾಹಕ ಮಾರುಕಟ್ಟೆಯ ಗಾತ್ರವು 2025 ರ ವೇಳೆಗೆ 3.6 ಟ್ರಿಲಿಯನ್ ಡಾಲರ್ಗೆ ಏರಿಕೆಯಾಗುವ ಮುನ್ಸೂಚನೆ ಇದೆ ಎಂದು ತಿಳಿಸಿದೆ.
“ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಶ್ರೇಯಾಂಕದಲ್ಲಿ ಭಾರತವು ಏರುತ್ತಲೇ ಇರುವುದರಿಂದ, ಜಾಗತಿಕ ಜಿಡಿಪಿ ಬೆಳವಣಿಗೆಯ ವೇಗಕ್ಕೆ ಅದು ನೀಡುತ್ತಿರುವ ಕೊಡುಗೆಗಳು ಕೂಡ ಹೆಚ್ಚಾಗುತ್ತದೆ. ಮಾತ್ರವಲ್ಲದೇ, ಅದರ ಗ್ರಾಹಕ ಮಾರುಕಟ್ಟೆಯ ಗಾತ್ರವು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವುದರಿಂದ, ಏಷ್ಯಾ-ಪೆಸಿಫಿಕ್ ಪ್ರದೇಶದ ಪ್ರಮುಖ ಆರ್ಥಿಕ ಬೆಳವಣಿಗೆಯ ಎಂಜಿನ್ಗಳಲ್ಲಿ ಒಂದಾಗಿ ಭಾರತವು ಹೆಚ್ಚು ಮಹತ್ವದ ಪಾತ್ರವನ್ನು ವಹಿಸುತ್ತದೆ, ಇದು ಏಷ್ಯಾದ ಪ್ರಾದೇಶಿಕ ವ್ಯಾಪಾರ ಮತ್ತು ಹೂಡಿಕೆಯ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ”ಎಂದು IHS Markit ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.