ಗ್ರಾಮೀಣ ಆರ್ಥಿಕತೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಹೊಚ್ಚ ಹೊಸ ಮತ್ತು ಐತಿಹಾಸಿಕ ಪರಿಕಲ್ಪನೆ ಎಂದು ಬಣ್ಣಿಸಬಹುದಾದ ಯೋಜನೆಗಳನ್ನು ತರಲು ನರೇಂದ್ರ ಮೋದಿ ಸರ್ಕಾರವು ಕಾರ್ಯೋನ್ಮುಖವಾಗಿದೆ. ಅದರಲ್ಲಿ ಗೋವು ಕೇಂದ್ರಿತ ಸ್ಟಾರ್ಟ್ ಅಪ್ಗಳು ಪ್ರಮುಖವಾಗಿವೆ. ಕೇವಲ ನಾಲ್ಕು ತಿಂಗಳ ಹಿಂದೆ ಮಧ್ಯಂತರ ಬಜೆಟ್ನಲ್ಲಿ ರೂಪುಗೊಂಡ ರಾಷ್ಟ್ರೀಯ ಕಾಮಧೇನು ಆಯೋಗವು ಗೋ ಕೇಂದ್ರಿತ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ. ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭ್ ಭಾಯ್ ಕತುರಿಯಾ ಅವರ ಪ್ರಕಾರ, ಈ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸುವ ಸಲುವಾಗಿ, ಗೋವು ಆಧಾರಿತ ಉತ್ಪನ್ನಗಳ ಮಾರಾಟಕ್ಕಾಗಿ ಗೋವು ಕೇಂದ್ರಿತ ಸ್ಟಾರ್ಟ್ಅಪ್ಗಳನ್ನು ಸ್ಥಾಪಿಸಲು ಸಿದ್ಧರಿರುವ ಉದ್ಯಮಿಗಳನ್ನು ಪ್ರೋತ್ಸಾಹಿಸುವುದು ಮತ್ತು ಹೊಸ ತಂತ್ರಜ್ಞಾನಗಳನ್ನು ಮತ್ತು ಪರಿಣಿತಿಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತದೆ.
ಹೊಸದಾಗಿ ಸ್ಥಾಪಿಸಲಾದ ಈ ಆಯೋಗವು ಗೋಶಾಲೆಗಳಿಗೆ ಬೆನ್ನೆಲುಬಾಗಿ ನಿಲ್ಲಲ್ಲೂ ಪ್ರಯತ್ನಿಸುತ್ತಿದೆ. ಹಸುಗಳನ್ನು ಸಾಕಲು ಮತ್ತು ಹಸು ಆಧಾರಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಇದು ತಂತ್ರಜ್ಞಾನ ಅಥವಾ ಹಣಕಾಸು ಅಥವಾ ಸಾಲ ಸೌಲಭ್ಯದ ರೂಪದಲ್ಲಿ ಗೋ ಶಾಲೆಗಳಿಗೆ ಸಹಾಯವನ್ನು ಒದಗಿಸುತ್ತದೆ. ಇದರೊಂದಿಗೆ, ಗ್ರಾಮೀಣ ಆರ್ಥಿಕತೆಯಲ್ಲಿ ಉದ್ಯೋಗ ಸೃಷ್ಟಿಯ ಸವಾಲನ್ನು ಎದುರಿಸಲು ಇದು ಪ್ರಯತ್ನಿಸಲಿದೆ. ಪ್ರತಿ ಗ್ರಾಮೀಣ ಮನೆಯಲ್ಲೂ ಕನಿಷ್ಠ ಒಂದು ಹಸು ಇರುವುದನ್ನು ಖಚಿತಪಡಿಸಿಕೊಳ್ಳಲು ಆಯೋಗವು ಯೋಜನೆಗಳನ್ನು ರೂಪಿಸಿದೆ ಎಂದು ಕತುರಿಯಾ ಹೇಳಿದ್ದಾರೆ. ಹೊಸದಾಗಿ ರಚಿಸಲಾದ ಆಯೋಗಕ್ಕೆ ರೂ.500 ಕೋಟಿಯನ್ನು ಬಜೆಟಿನಲ್ಲಿ ಎತ್ತಿಡಲಾಗಿದೆ. ಹಸು ಸಂರಕ್ಷಣೆಗೆ ಪ್ರಾಮುಖ್ಯತೆಯನ್ನು ನೀಡಿ ಕಾರ್ಯನಿರ್ವಹಿಸುವುದು ಈ ಆಯೋಗದ ಕರ್ತವ್ಯವಾಗಿದೆ.
ಹಸು ಸಾಕಾಣಿಕೆಯನ್ನು ಗ್ರಾಮೀಣ ಆರ್ಥಿಕತೆಯಲ್ಲಿ ಉದ್ಯೋಗ ಸೃಷ್ಟಿಸುವ ಒಂದು ದೊಡ್ಡ ಸಾಧನವನ್ನಾಗಿ ಪರಿವರ್ತಿಸಲು ಮೋದಿ ಸರ್ಕಾರವು ಪ್ರಯತ್ನಿಸುತ್ತಿದೆ. ಕತುರಿಯಾ ಪ್ರಕಾರ, ಉದ್ಯೋಗವನ್ನು ಅರಸಿಕೊಂಡು ಹೆಚ್ಚಿನ ಗ್ರಾಮೀನ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿರುವುದರಿಂದ, ಗೋ ಸಾಕಾಣಿಕೆಯನ್ನು ಪರ್ಯಾಯ ಉದ್ಯೋಗವನ್ನಾಗಿಸಲು ಸರ್ಕಾರ ಬಯಸುತ್ತಿದೆ. ಇದರಿಂದ ವಲಸೆ ತಪ್ಪಬಹುದು ಎಂಬ ಆಶಯವಿದೆ. ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುವ ಸಲುವಾಗಿ ಕೃಷಿಗೆ ಪೂರಕ ಅಂಶವಾಗಿ ಗೋವು ಪಾಲನೆ ಪರಿಚಯಿಸಲು ಮೋದಿ ಸರ್ಕಾರ ಬಯಸಿದೆ. ಗೋವು ಪಾಲನೆಯ ನಿಜವಾದ ಸಾಮರ್ಥ್ಯವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂಬ ಉದ್ದೇಶದಿಂದ, ಸರ್ಕಾರವು ಸಾಲ ಸೌಲಭ್ಯದ ರೂಪದಲ್ಲಿ ಹಸು ಸಾಕಾಣಿಕೆಯಲ್ಲಿ ತೊಡಗಿರುವ ಉದ್ಯಮಿಗಳಿಗೆ ನೆರವು ನೀಡುವುದಲ್ಲದೆ, ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಮಾರುಕಟ್ಟೆಗೆ ಸುಲಭವಾಗಿ ಪ್ರವೇಶಿಸುವಂತೆ ಮಾಡಲು ಸಹಾಯ ಮಾಡುತ್ತಿದೆ.
ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷರ ಪ್ರಕಾರ, ಹಸು ಸಾಕಾಣಿಕೆಯ ನಿಜವಾದ ಸಾಮರ್ಥ್ಯವನ್ನು ಇದುವರೆಗೂ ನಮ್ಮ ದೇಶದಲ್ಲಿ ಅರಿತುಕೊಳ್ಳಲಾಗಿಲ್ಲ. ಹಸುವಿನ ಮಲದಿಂದ ಸಾವಯವ ಗೊಬ್ಬರ ಮತ್ತು ಕಾಗದವನ್ನು ಉತ್ಪಾದಿಸುವುದು, ಹಸುವಿನ ಮೂತ್ರದಿಂದ ಸಾಬೂನು ಮತ್ತು ಸೊಳ್ಳೆ ನಿವಾರಕಗಳನ್ನು ತಯಾರಿಸುವಂತಹ ಹೊಸ ತಂತ್ರಗಳನ್ನು ಜನಪ್ರಿಯಗೊಳಿಸಲು ಮತ್ತು ವಿಸ್ತರಿಸಲು ಸಾಕಷ್ಟು ಪ್ರಯತ್ನಗಳನ್ನೂ ಮಾಡಲಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಹಸು ಆಧಾರಿತ ಉತ್ಪನ್ನಗಳನ್ನು ಮಾರಾಟ ಮಾಡುವ ಕ್ಷೇತ್ರದಲ್ಲಿ ಕೆಲವು ಎನ್ಜಿಒಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ . ಆದರೆ ಆಯೋಗವು ಈ ಕ್ಷೇತ್ರವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಈ ವಿಷಯದಲ್ಲಿ ಸ್ಟಾರ್ಟ್ ಅಪ್ ಸಂಸ್ಕೃತಿಯನ್ನು ಪರಿಚಯಿಸಲು ಯೋಜಿಸುತ್ತಿದೆ. ದೊಡ್ಡ ಪ್ರಮಾಣದ ಮಾರುಕಟ್ಟೆ ಮತ್ತು ಹಸು ಆಧಾರಿತ ಉತ್ಪನ್ನಗಳ ವಿತರಣೆಯನ್ನು ರೂಪಿಸಲು ಅದು ಪ್ರಯತ್ನಿಸುತ್ತಿದೆ. ಹಸುವಿನ ಮೂತ್ರದಲ್ಲಿ ಕಾರ್ಯನಿರ್ವಹಿಸುವ ಬಯೋ ಗ್ಯಾಸ್ ಪ್ಲಾಂಟ್ಗಳನ್ನು ಸ್ಥಾಪಿಸುವ ಮೂಲಕ ದೊಡ್ಡ ದೊಡ್ಡ ಉದ್ಯಮಿಗಳು ಕೂಡ ಈ ಯೋಜನೆಯಲ್ಲಿ ಭಾಗಿಯಾಗಬಹುದು ಎಂದು ಕತುರಿಯಾ ಹೇಳುತ್ತಾರೆ.
ಹಸು ಆಧಾರಿತ ಉತ್ಪನ್ನಗಳ ಮಾರಾಟ ಮತ್ತು ಹಸು ಸಾಕಾಣಿಕೆಗೆ ಭವಿಷ್ಯದಲ್ಲಿ ಭಾರೀ ಅವಕಾಶಗಳಿವೆ. ಜೈವಿಕ ಅನಿಲದ ಸಾಮರ್ಥ್ಯದೊಂದಿಗೆ, ಈ ವಲಯವು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಹಿಂದಿನ ಸರ್ಕಾರಗಳು ಈ ವಲಯವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲು ಎಂದಿಗೂ ಪ್ರಯತ್ನವನ್ನು ನಡೆಸದ ಕಾರಣ ಈ ವಲಯದಲ್ಲಿ ಉನ್ನತವಾದುದನ್ನು ಸಾಧಿಸುವ ನಮ್ಮ ಅವಕಾಶಗಳು ತಪ್ಪಿಹೋಗಿವೆ. ಆದರೆ ಈಗ, ದೊಡ್ಡ ಉದ್ಯಮಿಗಳು ಮತ್ತು ಸ್ಟಾರ್ಟ್ ಅಪ್ ಗಳು ಈ ವಲಯದಲ್ಲಿ ಹೂಡಿಕೆ ಮಾಡುತ್ತಿರುವುದರಿಂದ, ಗ್ರಾಮೀಣ ಆರ್ಥಿಕತೆಯು ಪ್ರಮುಖ ಉತ್ತೇಜನವನ್ನು ಪಡೆದುಕೊಳ್ಳಲು ಸಜ್ಜಾಗಿದೆ. ಹೊಸದಾಗಿ ಸ್ಥಾಪನೆಗೊಂಡಿರುವ ರಾಷ್ಟ್ರೀಯ ಕಾಮಧೇನು ಆಯೋಗವು, ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುವ ಸಲುವಾಗಿ ಗೋವು ಕೇಂದ್ರಿತ ಉದ್ಯಮಗಳನ್ನು ಪ್ರೋತ್ಸಾಹಿಸುತ್ತಿರುವ ಮೋದಿ ಸರ್ಕಾರದ ಯೋಜನೆಗಳಲ್ಲಿ ದೊಡ್ಡ ಪಾತ್ರವನ್ನು ನಿಭಾಯಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.