ನವದೆಹಲಿ: ಭಾರತೀಯ ವಾಯುಪಡೆಯು ತನ್ನ ಬಲವನ್ನು ವೃದ್ಧಿಸಿಕೊಳ್ಳಲು ಮತ್ತು ಪಾಕಿಸ್ತಾನ ಹಾಗೂ ಚೀನಾದ ಬೆದರಿಕೆಗಳನ್ನು ಸಮರ್ಥವಾಗಿ ನಿಭಾಯಿಸಲು ರಷ್ಯಾದಿಂದ ಹೆಚ್ಚುವರಿಯಾಗಿ 18 ಸುಖೋಯ್ ಸು -30 ಎಂಕೆಐ ಮಲ್ಟಿರೋಲ್ ಫೈಟರ್ಸ್ ಮತ್ತು 21 ಮೈಕೋಯಾನ್ ಮಿಗ್ -29 ಏರ್ ಸುಪಿರಿಯಾರಿಟಿ ಜೆಟ್ಗಳನ್ನು ಖರೀದಿ ಮಾಡಲು ಭಾರತ ನಿರ್ಧಾರ ಮಾಡಿದೆ. ವಾಯುಸೇನೆ ಈಗಾಗಲೇ 272 ಸು -30 ಎಂಕೆಐಗಳ ಅನುಮೋದಿತ ಶಕ್ತಿಯನ್ನು ಹೊಂದಿದೆ ಮತ್ತು 69 ಮಿಗ್ -29 ಯುಪಿಜಿಗಳನ್ನು ಸಹ ಕಾರ್ಯಾಚರಿಸುತ್ತಿದೆ.
ಚೀನಾ ಮತ್ತು ಪಾಕಿಸ್ಥಾನದೊಂದಿಗೆ ಎರಡು ಆಯಾಮದ ಯುದ್ಧಗಳು ಸಂಭವಿಸಿದ ಸಮಯದಲ್ಲಿ, ಶತ್ರುಗಳನ್ನು ಸಮರ್ಥವಾಗಿ ಎದುರಿಸಲು ಭಾರತೀಯ ವಾಯುಸೇನೆಗೆ 42 ಸ್ಕ್ವಾಡ್ರನ್ಗಳು ಬಹುಮುಖ್ಯವಾಗುತ್ತವೆ. ಆದರೆ, ಹಳೆಯ ಮಿಗ್ -21 ಮತ್ತು ಮಿಗ್ -27 ವಿಮಾನಗಳು ನಿವೃತ್ತಿಗೊಳಿಸುತ್ತಿರುವುದರಿಂದ ಪ್ರಸ್ತುತ ಕೇವಲ 31 ಸ್ಕ್ವಾಡ್ರನ್ಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಹೆಚ್ಚುವರಿಯಾಗಿ ಸು -30 ಎಂಕೆಐ ಮತ್ತು ಮಿಗ್ -29 ಜೆಟ್ಗಳು ವಾಯುಸೇನೆಗೆ ಸೇರ್ಪಡೆಗೊಂಡರೆ ಅದು ವಾಯುಸೇನೆಯ ಫೈಟರ್ ಫ್ಲೀಟ್ಗೆ ಇನ್ನೂ ಎರಡು ಸ್ಕ್ವಾಡ್ರನ್ಗಳನ್ನು ಸೇರಿಸುತ್ತವೆ.
“ಭಾರತವು ಹೆಚ್ಚುವರಿಯಾಗಿ 18 ಸು -30 ಎಂಕೆಐ ಕಿಟ್ಗಳು ಮತ್ತು 20 ಕ್ಕೂ ಹೆಚ್ಚು ಆಧುನೀಕೃತ ಮಿಗ್ -29 ವಿಮಾನಗಳಿಗಾಗಿ ವಿನಂತಿಯನ್ನು ನೀಡಿದೆ ಎಂದು ರಷ್ಯಾದ ಫೆಡರಲ್ ಸರ್ವಿಸ್ ಫಾರ್ ಮಿಲಿಟರಿ-ಟೆಕ್ನಿಕಲ್ ಕೋಆಪರೇಷನ್ (ಎಫ್ಎಸ್ಎಂಟಿಸಿ) ಉಪನಿರ್ದೇಶಕ ವ್ಲಾಡಿಮಿರ್ ಡ್ರೋಜೋವ್ ಸೋಮವಾರ ಮಾಸ್ಕೋದಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಮಹಾರಾಷ್ಟ್ರದ ನಾಸಿಕ್ನ ತನ್ನ ಓಜರ್ ಪ್ಲಾಂಟಿನಲ್ಲಿ ಈ ಕಿಟ್ಗಳಲ್ಲಿನ ಸುಖೋಯ್ ಟ್ವಿನ್ಜೆಟ್ ಮಲ್ಟಿರೋಲ್ ಏರ್ ಸುಪಿರಿಯಾರಿಟಿ ಫೈಟರ್ಸ್ಗಳನ್ನು ಜೋಡಿಲಿದೆ. ಮಿಗ್ ವಿಮಾನವು ರಷ್ಯಾದಿಂದ ಹಾರಾಟಕ್ಕೆ ಸಜ್ಜುಗೊಂಡೇ ಭಾರತಕ್ಕೆ ಬರಲಿದೆ.
ಮೊದಲ ಸು -30 ಎಂಕೆಐ ಯುದ್ಧವಿಮಾನವು 2002ರ ಸೆಪ್ಟೆಂಬರ್ 27 ರಂದು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡಿತ್ತು ಮತ್ತು ಅಂದಿನಿಂದ ಇದುವರೆಗೆ 259 ಸುಖೋಯ್ ಯುದ್ಧ ವಿಮಾನ ಸೇರ್ಪಡೆಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.