ನವದೆಹಲಿ: ಪಾಕಿಸ್ಥಾನದಿಂದ ರಫ್ತು ಆಗುವ ಎಲ್ಲಾ ಸರಕುಗಳಿಗೆ ಶೇ. 200 ರಷ್ಟು ಸುಂಕ ವಿಧಿಸುವ ಶಾಸನಬದ್ಧ ನಿರ್ಣಯವನ್ನು ರಾಜ್ಯಸಭೆ ಸೋಮವಾರ ಅಂಗೀಕರಿಸಿದೆ.
ಮಸೂರ, ಬೋರಿಕ್ ಆ್ಯಸಿಡ್ ಮತ್ತು ಡಯೋಗ್ನೋಸ್ಟಿಕ್ ಮತ್ತು ಲ್ಯಾಬೋರೇಟರಿ ರೀಗೆಂಟ್ಸ್ಗಳ ಮೇಲಿನ ಮೂಲ ಕಸ್ಟಮ್ ಸುಂಕ(ಬಿಸಿಡಿ)ವನ್ನು ಹೆಚ್ಚಿಸುವ ನಿರ್ಧಾರವನ್ನೂ ಮೇಲ್ಮನೆ ಅಂಗೀಕರಿಸಿದೆ.
ಮಸೂರ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ. 40 ರಿಂದ 50 ಕ್ಕೆ ಏರಿಸಲು ನಿರ್ಣಯದಲ್ಲಿ ತೀರ್ಮಾನಿಸಲಾಗಿದೆ. ಬೋರಿಕ್ ಆ್ಯಸಿಡ್ ಮೇಲಿನ ಸುಂಕವು ಶೇ.17.5 ರಿಂದ 27.5 ಕ್ಕೆ ಏರಿಕೆಯಾಗಿದೆ. ಡಯೋಗ್ನೋಸ್ಟಿಕ್ ವಸ್ತುಗಳಿಗೆ ಶೇ. 20 ರಿಂದ 30 ರವರೆಗೆ ಇರುತ್ತದೆ ಸುಂಕವನ್ನು ಏರಿಸಲಾಗಿದೆ.
ಎರಡು ಶಾಸನಬದ್ಧ ನಿರ್ಣಯಗಳನ್ನು ಹಣಕಾಸು ಸಚಿವ ನಿರ್ಮಾಲ ಸೀತಾರಾಮನ್ ಅವರ ಪರವಾಗಿ ಹಣಕಾಸು ಸಚಿವ ಅನುರಾಗ್ ಠಾಕೂರ್ ಅವರು ಮಂಡಿಸಿದರು ಮತ್ತು ಎರಡೂ ಧ್ವನಿ ಮತಗಳಿಂದ ಅಂಗೀಕರಿಸಲ್ಪಟ್ಟವು.
ಪಾಕಿಸ್ಥಾನ ಮೂಲದ ಅಥವಾ ಅಲ್ಲಿಂದ ನಮ್ಮ ದೇಶಕ್ಕೆ ರಫ್ತಾಗುವ ಎಲ್ಲಾ ಸರಕುಗಳ ಮೇಲೆ ಶೇ.200 ರಷ್ಟು ಕಸ್ಟಮ್ಸ್ ಸುಂಕವನ್ನು ವಿಧಿಸುವ ಸಲುವಾಗಿ, 1975 ರ ಕಸ್ಟಮ್ಸ್ ಸುಂಕ ಕಾಯ್ದೆಯ ಮೊದಲ ಕಲಂ ಅಧ್ಯಾಯ 98 ರ ಅಡಿಯಲ್ಲಿ ಹೊಸ ಸುಂಕ ಐಟಂ 9806 00 00 ಅನ್ನು ಸೇರಿಸಲು 2019 ರ ಫೆಬ್ರವರಿಯ ಅಧಿಸೂಚನೆಯನ್ನು ಅಂಗೀಕರಿಸಲಾಗಿತ್ತು.
ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ನಿರ್ಣಾಯಕ ಕ್ರಮಗಳನ್ನು ಕೈಗೊಂಡ ಭಾರತ, ಆ ದೇಶಕ್ಕೆ ವ್ಯಾಪಾರಕ್ಕಾಗಿ ನೀಡಿದ್ದ ಅತ್ಯಂತ ಪರಮಾಪ್ತ ರಾಷ್ಟ್ರ ಸ್ಥಾನಮಾನವನ್ನು ರದ್ದುಗೊಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.