ಭಾರತೀಯ ಸೇನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸೇನೆಯ ಹೆಮ್ಮೆಯ ಎಕೆ 47 ರೈಫಲ್ಗಳು ತಾಂತ್ರಿಕ ಸುಧಾರಣೆಗಳನ್ನು ಪಡೆಯಲು ಸಿದ್ಧವಾಗಿವೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ. ವರದಿಯ ಪ್ರಕಾರ, ತಾಂತ್ರಿಕ ಫ್ಯಾಶ್ ಲೈಟ್, ಫೈಬರ್ ಬಲವರ್ಧಿತ ಪಿಸ್ತೂಲ್ ಗ್ರಿಪ್, ಸ್ವಿಂಗ್ ಸ್ವಿವೆಲ್ ಅಟ್ಯಾಚ್ಮೆಂಟ್, ಪಾಲಿಮರ್ ಹಳಿಗಳು, ರಬ್ಬರ್ನಿಂದ ನಿರ್ಮಿತ ಪಿಸ್ತೂಲ್ ಫೋರ್ ಫ್ರಾಂಟ್ ಗ್ರಿಪ್, ಚೀಕ್ ರೆಸ್ಟ್, ಪಾಯಿಂಟಿಂಗ್ ಗ್ರಿಪ್, ವಿಸ್ತರಿಸಬಹುದಾದ ಬಟ್ ಸ್ಟಾಕ್ ಮತ್ತು ಅಗತ್ಯಬಿದ್ದಾಗ ಫೀಲ್ಡ್ನಲ್ಲೇ ರೈಫಲ್ಗೆ ಅಟ್ಯಾಚ್ ಮಾಡಬಹುದಾದ ಸೈಡ್ ಮೌಂಟ್ ಇತ್ಯಾದಿಗಳನ್ನು ಒಳಗೊಂಡ “ವೆಪನ್ ಸ್ಪೆಷಾಲಿಟಿ ಕಿಟ್”ಗಳನ್ನು ಹೊಂದಲು ಈಗಾಗಲೇ ಸೇನೆಯು ಪ್ರಕ್ರಿಯೆಯನ್ನು ಆರಂಭಿಸಿದೆ.
“ಸನ್ನಿವೇಶದ ಬದಲಾವಣೆ ಮತ್ತು ಭಯೋತ್ಪಾದಕರು ಅಳವಡಿಸಿಕೊಂಡಿರುವ ತಂತ್ರಗಳಲ್ಲಿನ ಬದಲಾವಣೆಗಳಿಂದಾಗಿ, ಸೇನಾ ಪಡೆಗಳ ಕಾರ್ಯಾಚರಣಾ ಕೌಶಲ್ಯವನ್ನು ವೃದ್ಧಿಸಲು ಮತ್ತು ತುರ್ತಾಗಿ ಟಾರ್ಗೆಟ್ ಅನ್ನು ಸದೆಬಡಿಯುವಂತೆ ಮಾಡಲು ನೈಟ್ ಸೈಟ್, ಹಾಲೋಗ್ರಾಫಿಕ್ ಸೈಟ್, ಫ್ಲ್ಯಾಶ್ ಲೈಟ್ ಮತ್ತು ಲೇಸರ್ ಬೀಮ್ ವ್ಯವಸ್ಥೆಗಳೊಂದಿಗೆ ಎಕೆ -47 ಅನ್ನು ಮಾರ್ಪಡಿಸುವ ಅವಶ್ಯಕತೆ ಇದೆ ”ಎಂದು ಭಾರತೀಯ ಸೇನೆಯು ಮಾಡಿರುವ ಮನವಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಈ ವೆಪನ್ ಸ್ಪೆಷಲ್ ಕಿಟ್ಗಳು, ಎಕೆ -47 ರೈಫಲ್ನ ಅಸ್ತಿತ್ವದಲ್ಲಿರುವ ಭಾಗಗಳನ್ನು ಬದಲಾಯಿಸಲು ಬಳಸಬಹುದಾದ ಭಾಗಗಳನ್ನು ಒಳಗೊಂಡಿರುತ್ತದೆ. ಇದರಿಂದ ಸೇನೆಯು “ಶಸ್ತ್ರಾಸ್ತ್ರದ ಉಪಯುಕ್ತತೆಯನ್ನು ಹೆಚ್ಚಿಸಬಹುದು ಮತ್ತು ಫೈರಿಂಗ್ಗೆ ಅನುಕೂಲಕರವಾಗಿ ಇದನ್ನು ಪರಿವರ್ತಿಸಬಹುದು ಮತ್ತು ಕಾರ್ಯಾಚರಣೆಯ ಸಫಲತೆಯ ಅವಕಾಶವನ್ನು ಹೆಚ್ಚಿಸಬಹುದು” ಎಂದು ಆರ್ಎಫ್ಐ ಹೇಳಿದೆ. ಈ ಹೊಸ ಭಾಗಗಳನ್ನು ಕಾರ್ಯಾಚರಣೆಯ ಸಂದರ್ಭ ನುರಿತ ತಂತ್ರಜ್ಞರ ಸಹಾಯವಿಲ್ಲದೆಯೂ ಅಳವಡಿಸಿಕೊಳ್ಳಬಹುದು.
“ವೆಪನ್ ಸ್ಪೆಷಲ್ ಕಿಟ್”ಗಳ ಖರೀದಿಯಿಂದಾಗಿ ಭಾರತೀಯ ಸೇನೆಯು ತನ್ನ ಹಳೆಯ ಶಸ್ತ್ರಾಸ್ತ್ರಗಳಿಂದಾಗಿ ಎದುರಿಸುತ್ತಿರುವ ಕೆಲವು ಕಾರ್ಯಾಚರಣಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಎಕೆ-47 ರೈಫಲ್ಗಳನ್ನು ಸುಧಾರಣೆ ಮಾಡುವುದರಿಂದ ಕಾಶ್ಮೀರದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಸೇನೆಗೆ ಹೆಚ್ಚಿನ ಉತ್ತೇಜನವನ್ನು ಸಿಗುತ್ತದೆ. ಪ್ರಸ್ತುತ, ಭಾರತೀಯ ಸೇನೆಯು ಐಎನ್ಎಸ್ಎಎಸ್ ರೈಫಲ್ಗಳನ್ನು ಕೂಡ ಹೊಂದಿದೆ. 5.56 ಕ್ಯಾಲಿಬರ್ ಇಂಡಿಯನ್ ಸ್ಮಾಲ್ ಆರ್ಮ್ಸ್ ಸಿಸ್ಟಮ್ (ಐಎನ್ಎಸ್ಎಎಸ್) ಅನ್ನು ಪರಿಣಾಮಕಾರಿಯಾಗಿ ಸೇನಾ ಸೇವೆಗೆ ಪರಿಚಯಿಸಲಾಗಿದೆ ಮತ್ತು ಇದು 1999 ರಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೂ, ಈ ರೈಫಲ್ ಕೆಲವು ವಿನ್ಯಾಸ ನ್ಯೂನತೆಗಳನ್ನು ಹೊಂದಿದೆ ಮತ್ತು ಸಾಮೂಹಿಕ ಉತ್ಪಾದನೆಯ ಸಮಯದಲ್ಲಿ ಕಳಪೆ ಗುಣಮಟ್ಟದ ನಿಯಂತ್ರಣಕ್ಕೆ ತುತ್ತಾಗುತ್ತಿದೆ. ಡಿಆರ್ಡಿಒನ ಪ್ರಯತ್ನದ ಹೊರತಾಗಿಯೂ, ಇದಕ್ಕೆ ನಿರೀಕ್ಷೆಗಳನ್ನು ತಲುಪಲು ಸಾಧ್ಯವಾಗಲಿಲ್ಲ. ಡಿಆರ್ಡಿಒವು INSAS- INSAS 1C ಮತ್ತು Ghatak ನ ನವೀಕರಿಸಿದ ಆವೃತ್ತಿಗಳನ್ನು ಪರಿಚಯಿಸಿದರೂ ಕೂಡ, ಹೆಚ್ಚಿನ ವ್ಯತ್ಯಾಸವನ್ನು ಕಾಣಲು ಸಾಧ್ಯವಾಗಿಲ್ಲ. ಇದರ ಮೂಲ ವಿನ್ಯಾಸವು ಹಿಂದಿನ ಪೀಳಿಗೆಯ ತಂತ್ರಜ್ಞಾನವನ್ನು ಆಧರಿಸಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ರಕ್ಷಣಾ ಸ್ವಾಧೀನ ಮಂಡಳಿಯು 2019 ರ ಜನವರಿ 16 ರಂದು ಫಾಸ್ಟ್ ಟ್ರ್ಯಾಕ್ ಖರೀದಿಯನ್ನು ಅಂಗೀಕರಿಸಿತು, ಇದರಿಂದಾಗಿ 72,400 ಸ್ವಿಝ್ SIG-716 ಆಕ್ರಮಣಶೀಲ ರೈಫಲ್ಗಳನ್ನು ಕ್ಷಿಪ್ರಗತಿಯಲ್ಲಿ ಖರೀದಿಸಲು ಹಸಿರು ನಿಶಾನೆ ದೊರೆಯಿತು. ಸೇನೆಯ ಇನ್ಫಾಂಟ್ರಿ ಪಡೆಗಳಿಗಾಗಿ 650,000 ಕಲಾಶ್ನಿಕೋವ್ ಎಕೆ-103 ಆಕ್ರಮಣಶೀಲ ರೈಫಲ್ಗಳನ್ನು ಭಾರತದಲ್ಲೇ ಉತ್ಪಾದಿಸಲು ಅನುವು ಮಾಡಿಕೊಡುವ ಒಪ್ಪಂದಕ್ಕೆ ಸಹಿ ಹಾಕಲು ಭಾರತ ಮತ್ತು ರಷ್ಯಾ ಈಗಾಗಲೇ ಸಜ್ಜಾಗಿವೆ. ಇದು ಭಾರತದ ಇನ್ಫಾಂಟ್ರಿ ಪಡೆಗಳ ಅಗತ್ಯಗಳನ್ನು ಪೂರೈಸುವುದು ಮಾತ್ರವಲ್ಲದೇ, ‘ಮೇಕ್ ಇನ್ ಇಂಡಿಯಾ’ ಯೋಜನೆಗೂ ಹೆಚ್ಚಿನ ಉತ್ತೇಜನವನ್ನು ನೀಡಲಿದೆ. ಪ್ರಸ್ತುತ ಸಶಸ್ತ್ರ ಪಡೆಗಳು ಬಳಸುತ್ತಿರುವ ಐಎನ್ಎಸ್ಎಎಸ್ ಮತ್ತು ಎಕೆ-47 ರೈಫಲ್ಗಳನ್ನು ಹಂತಹಂತವಾಗಿ ರಿಪ್ಲೇಸ್ ಮಾಡುವ ಎಕೆ -103 ರೈಫಲ್ಗಳನ್ನು ಕೂಡ ಉತ್ಪಾದಿಸುವ ಯೋಜನೆಯನ್ನು ಭಾರತ ಹಾಕಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.