ವಿಶ್ವಸಂಸ್ಥೆ: 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ವಿಶ್ವಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ‘ಸೂರ್ಯ ನಮಸ್ಕಾರ’ದ ಭಂಗಿಯನ್ನು ಮತ್ತು ‘ಯೋಗ ಫಾರ್ ಕ್ಲೈಮೇಟ್ ಆ್ಯಕ್ಷನ್’ ಸಂದೇಶವನ್ನು ದೀಪಗಳ ಮೂಲಕ ಬೆಳಗಿಸಿ ಯೋಗ ದಿನಕ್ಕೆ ಚಾಲನೆಯನ್ನು ನೀಡಲಾಗಿದೆ.
ಬುಧವಾರ ಸಂಜೆ ವಿಶ್ವಸಂಸ್ಥೆಯ ನಾರ್ತ್ ಫೇಕಡ್ನಲ್ಲಿ ನಡೆದ ವಿಶೇಷ ಯೋಗ ಸಮಾರಂಭದ ವೇಳೆ ಸೂರ್ಯ ನಮಸ್ಕಾರದ ಭಂಗಿಗಳು ಮತ್ತು ಯೋಗ ಫಾರ್ ಕ್ಲೈಮೇಟ್ ಆ್ಯಕ್ಷನ್ ಸಂದೇಶಗಳನ್ನು ಬೆಳಗಿಸಲಾಗಿದೆ. ಈ ಸಮಾರಂಭದಲ್ಲಿ ವಿಶ್ವಸಂಸ್ಥೆಗೆ ಭಾರತದ ಖಾಯಂ ರಾಯಭಾರಿ ಸೈಯದ್ ಅಕ್ಬರುದ್ದೀನ್, ಉಪ ಖಾಯಂ ಪ್ರತಿನಿಧಿ ರಾಯಭಾರಿ ಕೆ.ನಾಗರಾಜ್ ನಾಯ್ಡು ಮತ್ತು ಭಾರತ ಮಿಶನ್ನ ಇತರ ಅಧಿಕಾರಗಳು ಭಾಗಿಯಾಗಿದ್ದಾರೆ.
ಯುಎನ್ ಸೆಕ್ರೆಟರಿಯೇಟ್ ಕಟ್ಟಡದ ಉತ್ತರ ದಿಕ್ಕಿನ ಮುಂಭಾಗವು ವರ್ಣರಂಜಿತ ಹಿನ್ನೆಲೆಯೊಂದಿಗೆ ಸಂಯೋಜಿಸಲಾದ “ಸೂರ್ಯ ನಮಸ್ಕರ” ಭಂಗಿಯನ್ನು ಬಿಂಬಿಸಿತ್ತು.
ಸೂರ್ಯ ನಮಸ್ಕಾರಕ್ಕೆ ಯೋಗದಲ್ಲಿ ಮಹತ್ವದ ಸ್ಥಾನವಿದೆ. ಪ್ರಧಾನಿ ನರೇಂದ್ರ ಮೋದಿಯವರೂ ಮೊನ್ನೆ ಟ್ವಿಟರ್ ಮೂಲಕ ಸೂರ್ಯ ನಮಸ್ಕಾರದ ಪ್ರಯೋಜನಗಳನ್ನು ತಿಳಿಸಿದ್ದರು ಮತ್ತು ಅದನ್ನು ದಿನಚರಿಯ ಭಾಗವಾಗಿ ಮಾಡುವಂತೆ ಸಲಹೆ ನೀಡಿದ್ದರು.
5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ, ವಿಶ್ವಸಂಸ್ಥೆಯಲ್ಲಿ ಭಾರತ ಮಿಷನ್ ಜೂನ್ 21ರಿಂದ ಎರಡು ದಿನಗಳ ಕಾಲ ವಿಶ್ವದಾದ್ಯಂತ ವಿಭಿನ್ನ ಯೋಗ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಿದೆ.
ಮಾತ್ರವಲ್ಲದೇ ಇಂದು ವಿಶ್ವಸಂಸ್ಥೆಯಲ್ಲಿ “ಯೋಗ ಫಾರ್ ಕ್ಲೈಮೇಟ್ ಆ್ಯಕ್ಷನ್” ಬಗ್ಗೆ ಪ್ಯಾನೆಲ್ ಡಿಸ್ಕಶನ್ ಕೂಡ ಜರುಗಲಿದೆ.
Yoga lights up @UN Headquarters
in the lead up to the 5th International
Day of Yoga at United Nations #YogaDay2019 #yoga4climateaction #IDY2019 @ICCR_Delhi @IndianDiplomacy pic.twitter.com/KynVGIl1C8— India at UN, NY (@IndiaUNNewYork) June 20, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.