ನವದೆಹಲಿ: ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್ (ಐಬಿಜಿ) ಅನ್ನು ಪಾಕಿಸ್ಥಾನದ ಮತ್ತು ಚೀನಾದ ಗಡಿಯಲ್ಲಿ ಹೆಚ್ಚಿಸಲು ಭಾರತೀಯ ಸೇನೆ ಯೋಜನೆ ರೂಪಿಸುತ್ತಿದೆ. Integrated Battle Groupsಗಳನ್ನು ಪರೀಕ್ಷೆ ನಡೆಸುವ ಕಾರ್ಯವನ್ನು ಭಾರತೀಯ ಸೇನೆಯ ವೆಸ್ಟರ್ನ್ ಕಮಾಂಡ್ ಮಾಡಿದೆ ಮತ್ತು ಅದರ ಪಾರ್ಮೇಶನ್ ಕಮಾಂಡರ್ಗಳ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡು ಎರಡು ಅಥವಾ ಮೂರು ಐಬಿಜಿಗಳನ್ನು ಹೆಚ್ಚು ಮಾಡುವ ಕಾರ್ಯ ನಡೆಯುತ್ತಿದೆ. ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.
“ವೆಸ್ಟರ್ನ್ ಕಮಾಂಡ್ ಅಡಿಯಲ್ಲಿ ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್ ಪರಿಕಲ್ಪನೆಯನ್ನು ಪರೀಕ್ಷಿಸುವ ಕಾರ್ಯವನ್ನು ನಾವು ನಡೆಸಿದ್ದೇವೆ. ಫಾರ್ಮೇಶನ್ ಮತ್ತು ಉನ್ನತ ಕಮಾಂಡರ್ಗಳ ಪ್ರತಿಕ್ರಿಯೆ ಬಹಳ ಸಕಾರಾತ್ಮಕವಾಗಿದೆ. ಇದರಿಂದಾಗಿ ಅಕ್ಟೋಬರ್ ವೇಳೆಗೆ ಪಾಕಿಸ್ಥಾನ ಗಡಿಯಲ್ಲಿ ಎರಡು ಮೂರು ಐಬಿಜಿಗಳನ್ನು ಹೆಚ್ಚಿಸುವ ಕಾರ್ಯವನ್ನು ನಾವು ಪ್ರಾರಂಭಿಸಲಿದ್ದೇವೆ” ಎಂದು ಸೇನಾ ಮೂಲಗಳು ತಿಳಿಸಿವೆ.
ವರದಿಯ ಪ್ರಕಾರ, ಕಳೆದ ವಾರ ಸೇನಾ ಕೇಂದ್ರ ಕಛೇರಿಯ ಯುದ್ಧ ಕೊಠಡಿಯಲ್ಲಿ ಏಳು ಸೇನಾ ಕಮಾಂಡರ್ಗಳು ಈ ವಿಷಯದ ಬಗ್ಗೆ ಚರ್ಚೆ ನಡೆಸಿದ್ದಾರೆ ಮತ್ತು ಈ ಕಮಾಂಡರ್ಗಳಿಗೆ ಐಜಿಬಿಗಳನ್ನು ಹೆಚ್ಚಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಮೊದಲ ಮೂರು ಐಬಿಜಿಗಳು ವೆಸ್ಟರ್ನ್ ಕಮಾಂಡ್ ಅಡಿಯಲ್ಲಿನ ವಿವಿಧ ಫಾರ್ಮೇಶನ್ಗಳ ಅಂಶಗಳನ್ನು ಹೊಂದಿರುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಐಬಿಜಿಯು ಬ್ರಿಗೇಡ್ ಗಿಂತ ಹೆಚ್ಚು ಚಾಣಾಕ್ಷ್ಯ ಮತ್ತು ಲೆತಲ್ ಫಾರ್ಮೇಶನ್ ಅನ್ನು ಒಳಗೊಂಡಿರುತ್ತದೆ. ಆಫೀಸರ್ ರ್ಯಾಂಕಿನ ಮೇಜರ್ ಜನರಲ್ ಗಳು ಇದರ ನೇತೃತ್ವವನ್ನು ವಹಿಸಲಿದ್ದಾರೆ. ತಲಾ 5000 ಸೈನಿಕರು ಇದರಲ್ಲಿ ಇರಲಿದ್ದಾರೆ. ವರದಿಯ ಪ್ರಕಾರ, ಸೇನೆಯಲ್ಲಿನ ಆಧುನೀಕರಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.
ಐಬಿಜಿಗಳು, ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ವಿಧಾನಗಳಲ್ಲಿ ಭಾರತೀಯ ಸೇನೆಯ ಸಾಂಪ್ರದಾಯಿಕ ಯುದ್ಧ ಹೋರಾಟದ ವಿಧಾನವನ್ನು ಬದಲಾಯಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.