ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ಜೂನ್ 30ರಿಂದ ಮತ್ತೆ ಆರಂಭಗೊಳ್ಳಲಿದೆ. ಆಲ್ ಇಂಡಿಯಾ ರೇಡಿಯೋ ಮತ್ತು ಎಫ್ಎಂ ಚಾನೆಲ್ಗಳಲ್ಲಿ ಜೂನ್ 30ರಂದು ಬೆಳಿಗ್ಗೆ 11 ಗಂಟೆಗೆ ಇದು ಪ್ರಸಾರಗೊಳ್ಳಲಿದೆ.
ಕಳೆದ ಅವಧಿಯ ಕೊನೆಯ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮ ಫೆ.24ರಂದು ಪ್ರಸಾರಗೊಂಡಿತ್ತು, ಬಳಿಕ 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಎನ್ಡಿಎ ಸರ್ಕಾರ ಆಡಳಿತಕ್ಕೆ ಬಂದಿದ್ದು, ಮೋದಿಯವರೇ ಪ್ರಧಾನಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರು ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮವನ್ನು ಮುಂದುವರೆಸುತ್ತಿದ್ದಾರೆ.
ಶನಿವಾರ ಟ್ವಿಟ್ ಮಾಡಿರುವ ಪ್ರಧಾನಿಯವರು, “ಜೂನ್ 30ರಂದು ಭಾನುವಾರ ಬೆಳಿಗ್ಗೆ 11.00 ಗಂಟೆಗೆ ನಾವು ಮತ್ತೊಮ್ಮೆ ಭೇಟಿಯಾಗುತ್ತಿದ್ದೇವೆ. ರೇಡಿಯೋಗೆ ಧನ್ಯವಾದಗಳು. ಸಂತೋಷವನ್ನು, ಸಕಾರಾತ್ಮಕತೆಯನ್ನು ಹಂಚಿಕೊಳ್ಳಿ ಮತ್ತು 130 ಕೋಟಿ ಭಾರತೀಯ ಸಂಘಟಿತ ಶಕ್ತಿಯನ್ನು ಸಂಭ್ರಮಿಸಿ. ನಿಮಗೆ ಮನ್ ಕಿ ಬಾತ್ನಲ್ಲಿ ಸಾಕಷ್ಟು ಹೇಳಲು ಇದೆ ಎಂದು ನನಗೆ ತಿಳಿದಿದೆ. ಅದನ್ನು ನಮೋ ಆ್ಯಪ್ ಮೂಲಕ ಹಂಚಿಕೊಳ್ಳಿ” ಎಂದಿದ್ದಾರೆ.
For the #MannKiBaat this month, dial the toll-free number 1800-11-7800 to record your message.
You could also write on the MyGov Open Forum and pen your inputs.
Looking forward to a great interaction. https://t.co/MMDTeO1N5x
— Narendra Modi (@narendramodi) June 15, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.