ನವದೆಹಲಿ: ಕರ್ಜಿಸ್ತಾನದ ರಾಜಧಾನಿ ಬಿಷ್ಕೆಕ್ ನಲ್ಲಿ ಜರುಗಿದ ಶಾಂಘೈ ಕೊಅಪರೇಶನ್ ಸಮಿತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ಥಾನಕ್ಕೆ ಭಯೋತ್ಪಾದನೆಯ ಬಗೆಗಿನ ದಿಟ್ಟ ಸಂದೇಶವನ್ನು ರವಾನಿಸಿದ್ದು, ಭಾರತ ಭಯೋತ್ಪಾದನಾ ಮುಕ್ತ ಸಮಾಜಕ್ಕಾಗಿ ದೃಢವಾಗಿ ನಿಲ್ಲುತ್ತದೆ ಎಂದಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸಹಕಾರವನ್ನು ಬಲಗೊಳಿಸುವ ಶಾಂಘೈ ಕೊಅಪರೇಶನ್ ಉದ್ದೇಶವನ್ನು ನೆನಪಿಸಿಕೊಟ್ಟ ಮೋದಿ, ಭಯೋತ್ಪಾದನೆಯನ್ನು ಮಟ್ಟ ಹಾಕಲು ಜಾಗತಿಕ ಒಗ್ಗಟ್ಟಿಗೆ ಕರೆ ನೀಡಿದರು.
ಭಯೋತ್ಪಾದನಾ ಕೃತ್ಯಗಳಿಗೆ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ಮತ್ತು ಅದಕ್ಕೆ ಹಣಕಾಸು ನೆರವು ನೀಡುತ್ತಿರುವ ದೇಶಗಳನ್ನೇ ಜವಾಬ್ದಾರನನ್ನಾಗಿಸಬೇಕು ಎಂದು ಮೋದಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಸಮ್ಮುಖದಲ್ಲೇ ಪ್ರತಿಪಾದಿಸಿದರು.
ಭಯೋತ್ಪಾದನೆಯ ವಿರುದ್ಧ ಒಟ್ಟುಗೂಡಿ ಹೋರಾಡಲು ದೇಶಗಳು ತಮ್ಮ ಸಂಕೀರ್ಣ ವ್ಯಾಪ್ತಿಯಿಂದ ಹೊರಬರಬೇಕು ಎಂದರು.
ಶ್ರೀಲಂಕಾಗೆ ಭೇಟಿ ಕೊಟ್ಟಿದ್ದ ವೇಳೆ ಸೈಂಟ್ ಆಂಟೋನಿ ಚರ್ಚ್ ಗೆ ಭೇಟಿ ನೀಡಿದೆ, ಅಲ್ಲಿ ನಾನು ಭಯೋತ್ಪಾದನೆಯ ಕರಾಳ ಮುಖವನ್ನು ಕಂಡೆ ಎಂದು ಹೇಳಿದ್ದಾರೆ.
ಶಾಂಘೈ ಕೊಅಪರೇಶನ್ ಸಮಿತ್ ಚೀನಾ ನೇತೃತ್ವದ 8 ಸದಸ್ಯ ರಾಷ್ಟ್ರಗಳ ಆರ್ಥಿಕ ಮತ್ತು ಸಾಮಾಜಿಕ ಬ್ಲಾಕ್ ಆಗಿದೆ, 2017ರಲ್ಲಿ ಭಾರತ ಮತ್ತು ಪಾಕಿಸ್ಥಾನ ಇದರ ಸದಸ್ಯ ರಾಷ್ಟ್ರಗಳಾದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.