ವಾರಣಾಸಿ: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಬುದ್ಧಿ ಶುದ್ಧೀಕರಿಸಲಿ ಎಂಬ ಸದುದ್ದೇಶದೊಂದಿಗೆ ವಾರಣಾಸಿಯ ದೇಗುಲವೊಂದರ ಅರ್ಚಕರು ಆಕೆಗೆ ರಾಮಚರಿತ ಮಾನಸ ಪುಸ್ತಕವನ್ನು ಕಳುಹಿಸಿಕೊಟ್ಟಿದ್ದಾರೆ. ಅವಧಿ ಭಾಷೆಯಲ್ಲಿರುವ ಈ ಪುಸ್ತಕ ಶ್ರೀರಾಮನ ಸದ್ಗುಣಗಳನ್ನು ವರ್ಣಿಸುತ್ತದೆ.
ಇತ್ತೀಚಿಗೆ ಮುಕ್ತಾಯವಾದ ಲೋಕಸಭಾ ಚುನಾವಣೆಯ ಸಂದರ್ಭದಿಂದ ಪಶ್ಚಿಮಬಂಗಾಳದಲ್ಲಿ ‘ಜೈ ಶ್ರೀರಾಮ್’ ಎಂಬುದು ತೃಣಮೂಲ ನೇತೃತ್ವದ ಸರ್ಕಾರದ ವಿರುದ್ಧದ ಅತೀದೊಡ್ಡ ಘೋಷಣೆಯಾಗಿ ಹೊರ ಹೊಮ್ಮಿದೆ. ಮಮತಾ ಬ್ಯಾನರ್ಜಿಯವರ ಎದುರೇ ಜನರು ಜೈ ಶ್ರೀರಾಮ್ ಎಂದು ಘೋಷಣೆ ಹಾಕುತ್ತಿದ್ದಾರೆ. ಜೈಶ್ರೀರಾಮ್ ಎಂಬ ಘೋಷಣೆಯ ವಿರುದ್ಧ ಮಮತಾ ಸಮರ ಸಾರಿದ್ದೇ ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗುತ್ತಿದೆ.
ಈ ಹಿನ್ನನೆಯಲ್ಲಿ ವಾರಣಾಸಿಯ ಪಟಲ್ಪುರಿ ದೇಗುಲದ ಮಹಂತ ಬಲಕ್ ದಾಸ್ ಅವರು ರಾಮಚರಿತ ಮಾನಸವನ್ನು ಮಮತಾಗೆ ಕಳುಹಿಸಿದ್ದಾರೆ. ಇದರಲ್ಲಿನ ವಿಚಾರಗಳಿಂದ ಅವರ ಬುದ್ಧಿ ಶುದ್ಧವಾಗುತ್ತದೆ ಎಂಬುದು ಅವರ ನಂಬಿಕೆಯಾಗಿದೆ.
“ಆಕೆಯ ಬುದ್ಧಿ ರಾಮಚರಿತ ಮಾನಸ ಓದುವುದರಿಂದ ಶುದ್ಧವಾಗಲಿದೆ. ಜೈಶ್ರೀರಾಮ್ ಘೋಷಣೆ ಹಾಕುವವರನ್ನು ಅವರು ವಿರೋಧಿಸುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಆಕೆಯ ರಾಮ ವಿರೋಧಿ ಧೋರಣೆ ಒಂದು ದಿನ ಆಕೆಯ ಪತನಕ್ಕೆ ಕಾರಣವಾಗಬಹುದು” ಎಂದಿದ್ದಾರೆ.
ಇತ್ತೀಚಿಗಷ್ಟೇ ಬಿಜೆಪಿ 10,000 ಜೈಶ್ರೀರಾಮ್ ಘೋಷಣೆಯುಳ್ಳ ಅಂಚೆಚೀಟಿಗಳನ್ನು ಮಮತಾಗೆ ಕಳುಹಿಸಿಕೊಡಲು ನಿರ್ಧರಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.