ವಿಶ್ವಸಂಸ್ಥೆ: ನಿಸರ್ಗ ಸುಸ್ಥಿರತೆಗೆ ಭಾರತ ಅವಿರತವಾಗಿ ಶ್ರಮಿಸುತ್ತಿದೆ, ಭಾರತೀಯರ ದಿನನಿತ್ಯದ ಜೀವನಶೈಲಿ ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ. ವಿಶ್ವಸಂಸ್ಥೆಯ ಸಾರ್ವತ್ರಿಕ ಪರಿಸರ ಅನ್ವೇಷಣೆಗೂ ಭಾರತ ಕೊಡುಗೆಗಳನ್ನು ನೀಡುತ್ತಿದೆ.
‘ವಿಶ್ವ ಪರಿಸರ ದಿನ’ವನ್ನು ನಾಳೆ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಪರಿಸರ ಸುಸ್ಥಿರತೆಗಾಗಿ ಏಕ-ಬಳಕೆಯ ಪ್ಲ್ಯಾಸ್ಟಿಕ್ ಅನ್ನು ರದ್ದುಪಡಿಸಲು ಭಾರತವು ಬೆಂಬಲ ನೀಡಿದೆ. ಏಕ ಬಳಕೆ ಪ್ಲಾಸ್ಟಿಕ್ ಅನ್ನು ತೆಗೆದುಹಾಕುವಲ್ಲಿನ ವಿಶ್ವಸಂಸ್ಥೆಯ ಬದ್ಧತೆಯನ್ನು ಬೆಂಬಲಿಸುವುದಾಗಿ ಭಾರತವು ಪ್ರತಿಜ್ಞೆ ಮಾಡಿದೆ. ವಿಶ್ವಸಂಸ್ಥೆಯಲ್ಲಿ ಪ್ರತಿಜ್ಞೆ ಸ್ವೀಕಾರ ಮಾಡುವ ಸಂದರ್ಭದಲ್ಲಿ ಭಾರತವು ಸುಸ್ಥಿರತೆಯ ಬಗೆಗಿನ ಮಹಾತ್ಮ ಗಾಂಧೀಜಿಯವರ ದೂರದೃಷ್ಟಿಯ ಸಂದೇಶದೊಂದಿಗೆ ಹತ್ತಿ ಚೀಲಗಳನ್ನು ವಿತರಿಸಿದೆ.
India acts in support of @ UN efforts.
No to Single Use Plastics @UN in New York. pic.twitter.com/M0ssfNKb23— Syed Akbaruddin (@AkbaruddinIndia) June 3, 2019
2018 ರ ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಭಾರತವು, 2022 ರ ಹೊತ್ತಿಗೆ ದೇಶದಿಂದ ಏಕ ಬಳಕೆಯ ಪ್ಲಾಸ್ಟಿಕ್ಗಳನ್ನು (ಕ್ಯಾರಿ ಚೀಲಗಳು, ಸ್ಟ್ರಾಗಳು ಮತ್ತು ನೀರಿನ ಬಾಟಲಿಗಳಂತಹ ವಸ್ತುಗಳು) ಸಂಪೂರ್ಣವಾಗಿ ತೊಡೆದುಹಾಕುವ ವಾಗ್ದಾನ ಮಾಡಿದೆ. 2022ರ ವೇಳೆಗೆ ದೇಶವು ಸ್ವಾತಂತ್ರ್ಯ ಪಡೆದು 75 ವರ್ಷಗಳು ಪೂರೈಸಲಿದೆ.
ಆ ದಿನ ಮಾತನಾಡಿದ್ದ ಅಂದಿನ ಪರಿಸರ ಸಚಿವ ಡಾ. ಹರ್ಷವರ್ಧನ್ ಅವರು, 2022ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರ ನವಭಾರತದ ಪರಿಕಲ್ಪನೆಯನ್ನು ಪ್ರಸ್ತಾಪಿಸುತ್ತಾ, “ನಮ್ಮ ದೇಶದಿಂದ ಏಕ ಬಳಕೆಯ ಪ್ಲಾಸ್ಟಿಕ್ಗಳನ್ನು ತೊಡೆದು ಹಾಕುತ್ತೇವೆ ಎಂಬ ದೃಢ ಪ್ರತಿಜ್ಞೆಯನ್ನು ಮಾಡುತ್ತೇವೆ” ಎಂದಿದ್ದರು.
ಈ ಬಾರಿಯೂ ತನ್ನ ಪ್ರತಿಜ್ಞೆಯನ್ನು ಭಾರತ ಪುನರುಚ್ಚರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.