ಕೊಪ್ಪಳ: ಕೊಪ್ಪಳ ಜಿಲ್ಲೆಯ 6 ವರ್ಷದ ಬಾಲಕಿ ಭಾಗ್ಯಶ್ರೀ ಕಳೆದ ಒಂದು ವಾರದಿಂದ ತನ್ನ ಅನಾರೋಗ್ಯ ಪೀಡಿತ ತಾಯಿಯ ಹಸಿವನ್ನು ನೀಗಿಸುವ ಸಲುವಾಗಿ ಭಿಕ್ಷಾಟನೆ ನಡೆಸುತ್ತಿದ್ದಾಳೆ. ಆಕೆಯ ಕರುಣಾಜನಕ ಸ್ಥಿತಿಯನ್ನು ಕಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದೀಗ ತಾಯಿ ಮತ್ತು ಮಗಳ ನೆರವಿಗೆ ಧಾವಿಸಿದೆ.
“ನನಗೆ ತಂದೆ ಇಲ್ಲ, ತಾಯಿ ಮಾತ್ರ ಇದ್ದಾರೆ. ಅವರು ಗುಣಮುಖರಾಗಬೇಕು ಎಂಬುದು ನನ್ನ ಆಸೆ. ನನ್ನ ಬಳಿ ಹಣ ಇಲ್ಲ. ಹೀಗಾಗಿ ಜನರ ಬಳಿ ಹಣ ಕೇಳಿ ತಾಯಿಗೆ ಆಹಾರ ನೀಡುತ್ತಿದ್ದೇನೆ” ಎಂದು ಭಾಗ್ಯಶ್ರೀ ಹೇಳಿದ್ದಾಳೆ.
ವಿಪರೀತ ಮದ್ಯಸೇವನೆ ಮಾಡುತ್ತಿದ್ದ ಹಿನ್ನಲೆಯಲ್ಲಿ ಈಕೆಯ ತಾಯಿ ದುರ್ಗಮ್ಮ ಆಸ್ಪತ್ರೆಯ ಪಾಲಾಗಿದ್ದಾಳೆ. ಆಕೆಯ ಮದ್ಯ ಸೇವನೆಯ ಚಟದಿಂದಲೇ ಗಂಡ ಆಕೆಯನ್ನು ತೊರೆದಿದ್ದಾನೆ ಎನ್ನಲಾಗಿದೆ.
Koppal: A 6-year-old girl has been begging since the past week to feed her mother who is admitted to a hospital after she fell ill due to alcoholism. State Women & Child Welfare Department will now pay for the medical treatment of the woman & the education of the girl. #Karnataka pic.twitter.com/sdAeljrbOh
— ANI (@ANI) May 28, 2019
ಆಸ್ಪತ್ರೆಯ ಸುತ್ತಮುತ್ತ ಭಿಕ್ಷಾಟನೆ ನಡೆಸಿ ಭಾಗ್ಯಶ್ರೀ ತನ್ನ ತಾಯಿ ಆಹಾರ ಒದಗಿಸುತ್ತಿದ್ದಾಳೆ, ಮಾತ್ರವಲ್ಲ ತಾಯಿಯನ್ನು ಸ್ವಚ್ಛತೆ, ಆರೈಕೆ ಮಾಡುತ್ತಿದ್ದಾಳೆ. ಆಸ್ಪತ್ರೆಗೆ ಬರುವ ಜನರು ಈಕೆಯನ್ನು ಗಮನಿಸಿದ್ದಾರೆ. ಈ ಬಗ್ಗೆ ಆಸ್ಪತ್ರೆ ಆಡಳಿತಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಬಳಿಕ ವಿಷಯ ಸಿಎಂ ಕಛೇರಿಯವರೆಗೂ ತಲುಪಿದ್ದು, ಅಲ್ಲಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಾಯಿ ಮಗಳ ಬಗ್ಗೆ ಕಾಳಜಿ ವಹಿಸಲು ಸೂಚನೆ ನೀಡಿದೆ.
ಇದೀಗ ಬಾಲಕಿಯ ಶಿಕ್ಷಣದ ವೆಚ್ಚವನ್ನು ಭರಿಸಲು, ದುರ್ಗಮ್ಮಳ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಇಲಾಖೆ ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.