ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಜಯಂತಿಯನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಹಾನ್ ವ್ಯಕ್ತಿಗೆ ಗೌರವಾರ್ಪಣೆಯನ್ನು ಮಾಡಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, ” ವೀರ ಸಾವರ್ಕರ್ ಅವರ ಜಯಂತಿಯ ಹಿನ್ನಲೆಯಲ್ಲಿ ನಾವು ತಲೆಬಾಗಿ ನಮಿಸುತ್ತೇವೆ. ಬಲಿಷ್ಠ ಭಾರತಕ್ಕೆ ಬೇಕಾದ ಧೈರ್ಯ, ದೇಶಭಕ್ತಿ ಮತ್ತು ಹಿಂಜರಿಯದ ಬದ್ಧತೆಯನ್ನು ವೀರ್ ಸಾವರ್ಕರ್ ಸಾಕಾರಗೊಳಿಸಿದ್ದಾರೆ. ಅವರು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಹಲವರಿಗೆ ಸ್ಫೂರ್ತಿ ನೀಡಿದರು” ಎಂದಿದ್ದಾರೆ.
We bow to Veer Savarkar on his Jayanti.
Veer Savarkar epitomises courage, patriotism and unflinching commitment to a strong India.
He inspired many people to devote themselves towards nation building. pic.twitter.com/k1rmFHz250
— Narendra Modi (@narendramodi) May 28, 2019
ಮಾತ್ರವಲ್ಲದೇ, ವೀರ ಸಾವರ್ಕರ್ ವ್ಯಕ್ತಿತ್ವ ವಿವರಿಸುವ, ಅವರಿಗೆ ತಾನು ನಮಿಸುವ ವೀಡಿಯೋವನ್ನು ಮೋದಿ ಹಂಚಿಕೊಂಡಿದ್ದಾರೆ.
ವಿನಾಯಕ ದಾಮೋದರ್ ಸಾವರ್ಕರ್ ಅವರು 1883ರ ಮೇ 28 ರಂದು ಜನಿಸಿದ್ದು, 1966ರ ಫೆ. 26 ರಂದು ಕೊನೆಯುಸಿರೆಳೆದರು. ಬ್ರಿಟಿಷ್ ಆಡಳಿತದಲ್ಲಿ ಅವರು ಎರಡು ಬಾರಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.