ಸಾವಿರಾರು ಮೈಲಿಗಳ ಪ್ರಯಾಣವು ಒಂದು ಹೆಜ್ಜೆಯೊಂದಿಗೆ ಆರಂಭಗೊಳ್ಳುತ್ತದೆ. ಕಲ್ಲುಮುಳ್ಳಿನ ಹಾದಿಯಲ್ಲಿ ಪ್ರಯಾಣಿಸುವುದು ಅತ್ಯಂತ ಪ್ರಯಾಸದಾಯಕ ಪ್ರಯಾಣವನ್ನು ನಮ್ಮದಾಗಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರು ಕೂಡ ಕಳೆದ ಐದು ವರ್ಷಗಳಿಂದ ಕಲ್ಲು ಮುಳ್ಳಿನ ಹಾದಿಯನ್ನು ಸವೆಸುತ್ತಿದ್ದಾರೆ. ಇದೀಗ ಅವರಿಗೆ ಮತ್ತೆ 5 ವರ್ಷಗಳ ಅವಕಾಶ ಸಿಕ್ಕಿದೆ. ಮತ್ತದೇ ದಾರಿಯಲ್ಲಿ ಪ್ರಯಾಣವನ್ನು ಆರಂಭಿಸಲಿದ್ದಾರೆ, ಅದು ಆರಾಮದಾಯಕವಾಗಿ ಇಲ್ಲ ಎಂಬುದೂ ನಿಜ.
ಮೋದಿಯವರ ಅರ್ಹತೆಗೆ ಅನುಗುಣವಾಗಿಯೇ ಅವರಿಗೆ ಐತಿಹಾಸಿಕ ಜನಾದೇಶ ದೊರೆತಿದೆ. ಅವರು ನೀಡಿದಂತಹ ಮಹತ್ವಪೂರ್ಣ ಭರವಸೆಗಳನ್ನು ಈಡೇರಿಸುವ ಸಲುವಾಗಿ ಅವರಿಗೆ ಜನರು ಮತ್ತೊಂದು ಅವಕಾಶವನ್ನು ನೀಡಿದ್ದಾರೆ. ಬಿಸಿನೆಸ್ನಲ್ಲಿ ಇರುವುದು ಸರ್ಕಾರದ ಬಿಸಿನೆಸ್ ಅಲ್ಲ ಎಂದು ನಿಯಮವನ್ನು ಪಾಲಿಸಿಕೊಂಡು ಬಂದಿರುವ ಮೋದಿಯವರು ಹಲವಾರು ಉದ್ದಿಮೆಗಳನ್ನು ಖಾಸಗಿಯವರಿಗೆ ನೀಡುವ ಮೂಲಕ ಅದು ಪ್ರಗತಿ ಕಾಣುವಂತೆ ಮಾಡಿದ್ದಾರೆ. 2014ರಲ್ಲಿ ನೀಡಿದ ಹಲವಾರು ಭರವಸೆಗಳನ್ನು ಮೋದಿಯವರು ಈಡೇರಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಲು ಅದು ಕೂಡ ಒಂದು ಕಾರಣವಾಗಿದೆ. ಬಡವರ್ಗದ ಮತ್ತು ಮಧ್ಯಮ ವರ್ಗದ ಜನರಿಗಾಗಿ ಅವರು ಹತ್ತು-ಹಲವಾರು ಕಲ್ಯಾಣ ಯೋಜನೆಗಳನ್ನು ತಂದಿದ್ದಾರೆ. ಉಜ್ವಲ ಯೋಜನೆ, ವಿದ್ಯುತ್ ಪೂರೈಕೆ, ಆಯುಷ್ಮಾನ್ ಯೋಜನೆ, ಜನ್ ಧನ್ ಯೋಜನೆ, ವಸತಿ ನಿರ್ಮಾಣ ಅವರ ದೂರದೃಷ್ಟಿತ್ವಕ್ಕೆ ಒಂದು ರೂಪವನ್ನು ನೀಡಿದೆ. ಭಾರತದಲ್ಲಿ ಪ್ರತಿ ನಿಮಿಷ 44 ಬಡವರು ಬಡತನದಿಂದ ಹೊರಗೆ ಬರುತ್ತಿದ್ದಾರೆ. ಮೋದಿ ಬರುವುದಕ್ಕೂ ಮುನ್ನ ಈ ಸಂಖ್ಯೆ 39 ಆಗಿತ್ತು. ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಭಾರತೀಯರ ಅವಶ್ಯಕತೆಗಳನ್ನು ನಾನು ಪೂರೈಸಿದ್ದೇನೆ. ಮುಂದಿನ 5 ವರ್ಷದಲ್ಲಿ ಅವರ ಆಶೋತ್ತರಗಳನ್ನು ಪೂರೈಸುತ್ತೇನೆ ಎಂದು ಮೋದಿ ಈಗಾಗಲೇ ಹೇಳಿಕೊಂಡಿದ್ದಾರೆ. ಮೋದಿ ಸರಕಾರ ಸಮಾಜದ ಪರವಾದ ಸರಕಾರವಾಗಿದೆ, ನೆಹರು ಸಿದ್ಧಾಂತಗಳಿಂದ ದೂರವಿರುವ ಆಶೋತ್ತರಗಳಿಗೆ ಹೆಚ್ಚಿನ ಗಮನವನ್ನು ನೀಡುತ್ತದೆ. ಮೋದಿ ಬಂದ ಬಳಿಕ ಕೃಷಿ ಸಬ್ಸಿಡಿಯೂ ಸಾರ್ವತ್ರಿಕ ಏರಿಕೆಯನ್ನು ಕಂಡಿದೆ.
ದಿನಕ್ಕೆ ಅರ್ಧ ಡಾಲರ್ ಸಂಪಾದನೆ ಮಾಡುವವರೆಗೆ, ಬಯಲುಶೌಚವನ್ನು ಮಾಡುವವರೆಗೆ, ನೀರಿಗಾಗಿ ಮೈಲಿಗಟ್ಟಲೆ ನಡೆಯುವವರೆಗೆ, ಮಧ್ಯಾಹ್ನದ ಊಟಕ್ಕೆ ತಂಗಳನ್ನವನ್ನು ಸೇವಿಸುವವರೆಗೆ, ಬ್ಯಾಂಕ್ ಸಾಲ ತೀರಿಸಲಾಗದೆ ವಿಷ ಕುಡಿಯುವವರೆಗೆ, ವಾಸಿಸಲು ಮನೆಯಿಲ್ಲದೆ ರೈಲ್ವೆ ಫುಟ್ ಫಾತ್ನಲ್ಲಿ ಮಲಗುವವರೆಗೆ ನಮ್ಮ ಆಶೋತ್ತರಗಳು ಈಡೇರುವುದಿಲ್ಲ. ಆದರೆ ನಮ್ಮ ರಾಜಕಾರಣಿಗಳು ಮತ್ತು ನಿಯಮ ರೂಪಿಸುವವರು ಸುರಕ್ಷಿತವಾಗಿರುತ್ತಾರೆ. ಆದರೆ ಮೋದಿಯವರು ಬಂದ ಬಳಿಕ ಈ ಚಿತ್ರಣ ಬದಲಾಗಿದೆ. ಜನರ ಅವಶ್ಯಕತೆಗಳನ್ನು ಮೊದಲು ಪೂರೈಸಲು ಹೆಚ್ಚಿನ ಒತ್ತನ್ನು ನೀಡಿದ್ದಾರೆ. ವಸತಿ ನಿರ್ಮಾಣವನ್ನು ಕ್ಷಿಪ್ರ ಗೊಳಿಸಿದ್ದಾರೆ. ಎಲ್ಲರಿಗೂ ಶೌಚಾಲಯ ಲಭಿಸುವಂತೆ ಮಾಡುತ್ತಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಜನರ, ಮಕ್ಕಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಆಯುಷ್ಮಾನ್ ಅಂತಹ ಯೋಜನೆಗಳನ್ನು ತಂದಿದ್ದಾರೆ. ದೇಶ ಒಂದು ಅಭಿವೃದ್ಧಿಯಾಗಬೇಕಾದರೆ ಶಾಂತಿ ಕಾನೂನು-ಸುವ್ಯವಸ್ಥೆ ಸಮರ್ಪಕವಾಗಿರುವುದು ಅತ್ಯಂತ ಅವಶ್ಯಕ. ಮೋದಿಯವರ ಆಡಳಿತದಲ್ಲಿ ಯಾವುದೇ ರೀತಿಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬಂದಿಲ್ಲ. ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಜಮ್ಮು ಕಾಶ್ಮೀರ ವಿವಾದವನ್ನು ಅವರು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ. ಉರಿ ಮತ್ತು ಬಾಲಕೋಟ್ ಮೇಲಿನ ಯಶಸ್ವಿ ದಾಳಿಯು ಭಯೋತ್ಪಾದನೆಯನ್ನು ಪ್ರಾಯೋಜನೆ ಮಾಡುತ್ತಿರುವ ಪಾಕಿಸ್ಥಾನಕ್ಕೆ ಹೇಗೆ ಉತ್ತರಿಸಬೇಕೆಂಬುದನ್ನು ತಿಳಿಸಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿಯವರು ಭಾರತದ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಅತ್ಯಂತ ಸಮರ್ಥ ವಿದೇಶಿ ನಿಯಮವನ್ನು ಪಾಲಿಸುವ ಮೂಲಕ ಅವರು ಹಲವಾರು ವಿಷಯಗಳಲ್ಲಿ ಭಾರತಕ್ಕೆ ಜಯ ಸಿಗುವಂತೆ ಮಾಡಿದ್ದಾರೆ. ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆ, ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಸಂಸ್ಥಾಪಕ ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿರುವುದು, ದೋಕ್ಲಾಂ ಬಿಕ್ಕಟ್ಟು ಅತ್ಯಂತ ಶಾಂತಿಯುತವಾಗಿ ಅಂತ್ಯಗೊಂಡಿದ್ದು ಮೋದಿ ಅವರ ಸಮರ್ಥ ವಿದೇಶಿ ನೀತಿಯನ್ನು ಸಾರಿ ಸಾರಿ ಹೇಳುತ್ತದೆ.
ಮುಂದಿನ ಐದು ವರ್ಷಗಳ ಅವಧಿಯಲ್ಲಿ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನು ಮೋದಿಯವರು ಈಡೇರಿಸುತ್ತಾರೆ ಎಂಬ ಭರವಸೆ ಸಮಸ್ತ ನಾಗರಿಕರಲ್ಲಿ ಇದೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ 35 ಎ ಮತ್ತು 370 ವಿಧಿಯನ್ನು ಸಂವಿಧಾನದಿಂದ ತೆಗೆದುಹಾಕುವಲ್ಲಿ ಅವರು ಪ್ರಯತ್ನ ನಡೆಸಲಿದ್ದಾರೆ. ಆದ್ಯತೆಯ ಮೇರೆಗೆ ಅವರು ಒಂದೊಂದೇ ಭರವಸೆಗಳನ್ನು ಈಡೇರಿಸುವುದು ಬಹುತೇಕ ಖಚಿತ. ಈ ಹಾದಿಯಲ್ಲಿ ಅವರ ಪ್ರಯಾಣ ಆರಾಮದಾಯಕವಾಗಿ ಇಲ್ಲ ಎಂಬುದು ನಿಜ. ಆದರೆ ಪರಿಶ್ರಮಿ ಆಗಿರುವ ಅವರು ಕಠಿಣ ಹಾದಿಯನ್ನು ತಲುಪುತ್ತಾರೆ ಎಂಬುದು ಕೂಡ ಅಷ್ಟೇ ನಿಜವಾದ ಮಾತು. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಫಕೀರ ತನ್ನ ಉಳಿವಿಗಾಗಿ ಅಲ್ಲ, ನಮ್ಮೆಲ್ಲರ ಉಳಿವಿಗಾಗಿ ಖಂಡಿತ ಹೋರಾಟ ನಡೆಸುತ್ತಾರೆ. ಮೊದಲ ಅವಧಿಯಲ್ಲಿ ಅವರು ಮಹತ್ವದ ವಿಷಯಗಳತ್ತ ಗಮನ ಹರಿಸಿದ್ದಾರೆ. ಇನ್ನೊಂದು ಅವಧಿಯಲ್ಲಿ ಅವರು ಅತ್ಯಂತ ಮಹತ್ವಪೂರ್ಣ ಅಂಶಗಳತ್ತ ಗಮನ ಹರಿಸುತ್ತಾರೆ ಎಂಬುದು ಎಲ್ಲರ ನಂಬಿಕೆ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.