ಕೊಲಂಬೋ: ಮತ್ತೊಂದು ಅವಧಿಗೆ ಪ್ರಧಾನಿ ಗದ್ದುಗೆ ಏರಲು ಸಜ್ಜಾಗಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಶ್ರೀಲಂಕಾ ಪ್ರಧಾನಮಂತ್ರಿ ರನಿಲ್ ವಿಕ್ರಮಸಿಂಘೆ, ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಅವರು ಟ್ವಿಟ್ ಮಾಡುವ ಮೂಲಕ ಮೋದಿಗೆ ಅಭಿನಂದನೆಗಳನ್ನು ಅರ್ಪಿಸಿದ್ದು, “ಅದ್ಭುತ ಗೆಲುವಿಗೆ ಅಭಿನಂದನೆಗಳು ಸ್ನೇಹಿತ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ನಿಮ್ಮ ನಾಯಕತ್ವವನ್ನು ಈ ಚುನಾವಣಾ ಫಲಿತಾಂಶ ಪುನರ್ ಸ್ಥಾಪಿಸಿದೆ. ಭಾರತ ಮತ್ತು ಇಸ್ರೇಲ್ ನಡುವಣ ಸ್ನೇಹವನ್ನು ಬಲಿಷ್ಠಗೊಳಿಸುವ ಕಾರ್ಯವನ್ನು ಮುಂದುವರೆಸಲಿದ್ದೇವೆ, ವೆಲ್ ಡನ್ ಮೈ ಫ್ರೆಂಡ್” ಎಂದಿದ್ದಾರೆ.
Congratulations, my friend @Narendramodi, on your impressive election victory! The election results further reaffirm your leadership of the world’s largest democracy. Together we will continue to strengthen the great friendship between India & Israel.
Well done, my friend! 🇮🇱🤝🇮🇳 https://t.co/2U5yJmHddS— PM of Israel (@IsraeliPM) May 23, 2019
“ಅದ್ಭುತ ಗೆಲುವು ಸಾಧಿಸಿದ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ನಿಮ್ಮೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇವೆ” ಎಂದು ವಿಕ್ರಮಸಿಂಘೆ ಟ್ವಿಟ್ ಮಾಡಿದ್ದಾರೆ.
Congratulations to @narendramodi on a magnificent victory! We look forward to working closely with you.
— Ranil Wickremesinghe (@RW_UNP) May 23, 2019
ಚುನಾವಣೋತ್ತರ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮಾಲ್ಡೀವ್ಸ್ ಅಧ್ಯಕ್ಷರು ಮೋದಿಯವರಿಗೆ ಅಭಿನಂದನೆಗಳನ್ನು ತಿಳಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.