ವಿಷ್ಣುವಿನ ಪರಮ ಭಕ್ತನಾದ ದೇವರ್ಷಿ ನಾರದರಿಲ್ಲದೆ ಹಿಂದೂ ಪುರಾಣಗಳು ಸಂಪೂರ್ಣಗೊಳ್ಳುವುದಿಲ್ಲ. ಸಂಚಾರಿ ಸಂಗೀತಗಾರನಾಗಿ, ಕಥೆ ಹೇಳುವವನಾಗಿ, ಜ್ಞಾನೋದಯ ನೀಡುವವನಾಗಿ ನಾರದರು ನಮಗೆ ಪುರಾಣಗಳಲ್ಲಿ ಕಾಣಿಸುತ್ತಾರೆ. ಅವರನ್ನು ವಿಶ್ವದ ಮೊದಲ ಪತ್ರಕರ್ತನೆಂದು ಪರಿಗಣಿಸಬಹುದು. ದೇವರಿಗೆ ವರದಿ ಒಪ್ಪಿಸುವ ಕರ್ತವ್ಯ ಅವರದ್ದಾಗಿತ್ತು, ದೇವರು ಮತ್ತು ರಾಕ್ಷಸರೊಂದಿಗೆ ಉತ್ತಮ ಸಂವಹನ ಮತ್ತು ಸಂಪರ್ಕವನ್ನು ಅವರು ಇಟ್ಟುಕೊಂಡಿದ್ದರು. ಪ್ರತಿ ಆಗು ಹೋಗುಗಳ ಬಗೆಗಿನ ಸ್ಪಷ್ಟವಾದ ಜ್ಞಾನ, ಮಾಹಿತಿ ಅವರಿಗಿತ್ತು.
ನಾರದರು ಹಾಸ್ಯ ಪ್ರಜ್ಞೆವುಳ್ಳವರು ಮತ್ತು ಪಂಡಿತರು ಎಂಬುದು ಕಥೆಗಳಿಂದ ತಿಳಿದು ಬರುತ್ತದೆ. ವಿಷ್ಣುವನ್ನು ತನ್ನ ಭಕ್ತಿ ಗೀತೆಗಳ ಮೂಲಕ ವೈಭವೀಕರಿಸುವ ಪವಿತ್ರಾತ್ಮರು ಎಂದು ನಾರದರನ್ನು ಪರಿಗಣಿಸಲಾಗುತ್ತದೆ. ಸದಾ ಹರಿ ಮತ್ತು ನಾರಾಯಣ ಭಜನೆಯನ್ನೇ ಉಸಿರಾಡುತ್ತಿದ್ದ ಅವರು, ಭಕ್ತಿ ಯೋಗವನ್ನು ಪ್ರತಿಬಿಂಬಿಸುತ್ತಾರೆ. ನಾರದ ಭಕ್ತಿ ಯೋಗವು ಅವರನ್ನು ಒಳಗೊಂಡದ್ದಾಗಿದೆ. ಅವರ ಬಗೆಗಿನ ಇತರ ಕೃತಿಗಳೆಂದರೆ-ನಾರದಾ ಪುರಾಣ, ನಾರದಾಸ್ಮೃತಿ. ಇದು ನ್ಯಾಯವನ್ನು ಪ್ರತಿಪಾದಿಸುತ್ತವೆ.
ನಾರದರ ಆಧ್ಯಾತ್ಮಿಕ ಜ್ಞಾನೋದಯದ ಕಥೆಯನ್ನು ಭಾಗವತ ಪುರಾಣ ಸಾರಿ ಹೇಳುತ್ತದೆ. ನಾರದರು ದೇವತೆಗಳಿಗೆ ಮಾಹಿತಿ ಒದಗಿಸುವ ಪ್ರಾಥಮಿಕ ಮೂಲವಾಗಿದ್ದರು ಮತ್ತು ಭೂಮಿ ಮೇಲಿನ ಮೊದಲ ಪತ್ರಕರ್ತರಾಗಿದ್ದರು ಎಂಬುದು ಇಲ್ಲಿ ತಿಳಿದು ಬರುತ್ತದೆ.
ನಾರದ ಮುನಿಗಳ ಪ್ರಸ್ತುತತೆಯು ಸುರಾಜ್ಯ, ಪತ್ರಿಕೋದ್ಯಮ, ಸಂವಹನ, ಸಂಪರ್ಕ ಇವುಗಳ ಸಂಬಂಧಿತ ಚರ್ಚೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ವಸಾಹತು ಮನಃಸ್ಥಿತಿಯಿಂದ ಹೊರಬರಲು, ಅವ್ಯವಸ್ಥೆಯ ರಾಜ್ಯ ವ್ಯವಸ್ಥೆಯನ್ನು ಸರಿಪಡಿಸಲು, ಪತ್ರಿಕಾ ಧರ್ಮವನ್ನು ಪುನಃ ಸ್ಥಾಪಿಸಲು ನಾರದ ಮುನಿಗಳು ಇಂದು ಎಂದಿಗಿಂತಲೂ ಪ್ರಸ್ತುತವಾಗಿದ್ದಾರೆ.
ನಾರದ ಭಕ್ತಿಸೂತ್ರದ 75-77 ಶ್ಲೋಕಗಳಲ್ಲಿ ವಿಸ್ತೃತ ಚರ್ಚೆಯ ನಿರುಪಯುಕ್ತತೆಯನ್ನು ಹೇಳಲಾಗಿದೆ. ಇದು ಭಕ್ತಿಯೋಗದ ಅನುಷ್ಠಾನಕ್ಕೆ ಮಾತ್ರ ಅನ್ವಯವಾಗದೇ ಮಾಧ್ಯಮ ರಂಗಕ್ಕೂ ಅನ್ವಯವಾಗುವಂತಿದೆ ಎಂದು ಪ್ರೊ. ಬ್ರಿಜ್ಕಿಶೋರ್ ಕುಟಿಯಾಲ ಅಭಿಪ್ರಾಯಪಡುತ್ತಾರೆ. ಕೊನೆಗೊಳ್ಳದ ಮತ್ತು ಉಪಯೋಗರಹಿತ ಟಿ.ವಿ. ಚರ್ಚೆಗಳ ಇಂದಿನ ದಿನಗಳಲ್ಲಿ ಈ ಅಭಿಪ್ರಾಯ ಬಲಗೊಳ್ಳುತ್ತಿದೆ.
ವೈಶಾಖ ಕೃಷ್ಣ ದ್ವಿತೀಯದಂದು, ಅಂದರೆ ಇಂದು ನಾರದ ಜಯಂತಿಯನ್ನು ಆಚರಿಸಲಾಗುತ್ತದೆ. ವಿಶ್ವಸಂವಾದ ಕೇಂದ್ರ ಕರ್ನಾಟಕದ ವತಿಯಿಂದ ಅವಧಾನ ಕಲೆಯಲ್ಲಿ ಖ್ಯಾತರಾದ ಶತಾವಧಾನಿ ಡಾ. ರಾ. ಗಣೇಶ್ ಅವರು ವೀಡಿಯೋ ಮೂಲಕ ತಮ್ಮ ನಾರದರನ್ನು ನಾವ್ಯಾಕೆ ಸ್ಮರಿಸಿಕೊಳ್ಳಬೇಕು ಎಂಬ ಸಂದೇಶವನ್ನು ವಿಸ್ತಾರವಾಗಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.