ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಕ್ರಿಯಾಶೀಲ ನಾಯಕನಾಗಿ ಹೊರಹೊಮ್ಮಿದ್ದಾರೆ. ಅವರ ಜನಪ್ರಿಯತೆಯು ಸಾರ್ವಜನಿಕರೊಂದಿಗೆ ಬೆರೆಯುವ ಮೂಲಕ ಹೆಚ್ಚು ಬೆಸೆದುಕೊಂಡಿದೆ. ನಾಯಕ ಮತ್ತು ಸಾರ್ವಜನಿಕರ ನಡುವಿನ ಸಂವಾದವನ್ನು ಉತ್ತೇಜಿಸುವ ಸಲುವಾಗಿ ಮೋದಿಯವರು ತನ್ನ ಮಾತು ಜನರಿಗೆ ತಲುಪುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಹಲವಾರು ಮಹತ್ವದ ಕ್ರಮಗಳನ್ನು ಅವರು ಕೈಗೊಂಡಿದ್ದಾರೆ. ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ಮೂಲಕ ಅವರು ಜನರಲ್ಲಿ ತನ್ನ ಮನಸ್ಸಿನ ಭಾವನೆಯನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ಸಕ್ರಿಯ ಬಳಕೆ, ಸಮಾವೇಶಗಳ ಆಯೋಜನೆ ಮೂಲಕ ಸಾರ್ವಜನಿಕರಿಗೆ ತುಂಬಾ ಹತ್ತಿರವಾಗಿದ್ದಾರೆ. ಮಾತ್ರವಲ್ಲ, ಎನ್ಡಿಎ ಸರಕಾರದ ನೀತಿನಿಯಮಗಳನ್ನು, ಸಾಧನೆಗಳನ್ನು ಹಲವಾರು ಟಿವಿ ಮಾಧ್ಯಮಗಳಿಗೆ ಸಂದರ್ಶನ ನೀಡುವ ಮೂಲಕ ಜನರಿಗೆ ತಲುಪುವಂತೆ ಮಾಡಿದ್ದಾರೆ.
ಪ್ರಿಂಟ್ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳೇ ಇರಲಿ ದೇಶದ ಬಹುತೇಕ ಪ್ರಮುಖ ಮಾಧ್ಯಮಗಳಿಗೆ ಅವರು ಸಂದರ್ಶವನ್ನು ನೀಡಿದ್ದಾರೆ. ಆದರೆ ಕಳೆದ ಐದು ವರ್ಷಗಳಿಂದ ಮೋದಿಯವರು ಒಂದೇ ಒಂದು ಮಾಧ್ಯಮವನ್ನು ದೂರ ಇಟ್ಟಿದ್ದಾರೆ. ಅದುವೇ ಎನ್ಡಿಟಿವಿ ಗ್ರೂಪ್ಸ್. ತಾರತಮ್ಯ ಧೋರಣೆ ಮತ್ತು ಎಡಪಂಥೀಯ ಸಿದ್ಧಾಂತದಿಂದ ಹೊರಗಿರುವ ಜನರ ವಿರುದ್ಧ ದ್ವೇಷ ಕಾರುವುದಕ್ಕೆ ಈ ಚಾನೆಲ್ ಮತ್ತು ಅದರ ಪತ್ರಕರ್ತರು ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಮೋದಿ ಈ ಮಾಧ್ಯಮಕ್ಕೆ ಸಂದರ್ಶನ ನೀಡುವುದರಿಂದ ದೂರವೇ ಉಳಿದಿದ್ದಾರೆ.
ಇದೇ ಕಾರಣಕ್ಕೆ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ಅವಮಾನಿಸುವ ಸಲುವಾಗಿ ನಿರಂತರವಾಗಿ ಮೋದಿ ಸರ್ಕಾರ ಮಾಧ್ಯಮಗಳ ಜೊತೆ ಸಂವಾದ ನಡೆಸುತ್ತಿಲ್ಲ ಎಂಬ ಅಪಪ್ರಚಾರವನ್ನು ಮಾಡುತ್ತಾ ಬರುತ್ತಿದೆ. ಆದರೆ ಈ ಪ್ರತಿಪಕ್ಷಗಳು ಮೋದಿಯವರು, ಟ್ರಿಬ್ಯುನ್, ಪಿಟಿಐ, ನೆಟ್ವರ್ಕ್ 18, ಇಂಡಿಯನ್ ಎಕ್ಸ್ಪ್ರೆಸ್, ನ್ಯೂಸ್ ನೇಷನ್, ಇಂಡಿಯಾ ಟುಡೆ, ಝೀ ನ್ಯೂಸ್, ಟೈಮ್ಸ್ ನೌ, ಸಿಎನ್ಎನ್, ಇಂಡಿಯಾ ಟಿವಿ, ರಾಜಸ್ಥಾನ್ ಪತ್ರಿಕಾ, ಹಿಂದೂಸ್ಥಾನ್ ಟೈಮ್ಸ್, ದೈನಿಕ್ ಜಾಗರಣ್, ನಯಿ ದುನಿಯಾ, ಹಿಂದೂಸ್ತಾನ್ ಸಮಾಚಾರ್, ನವಭಾರತ್ ಟೈಮ್ಸ್, ಟೈಮ್ಸ್ ಆಫ್ ಇಂಡಿಯಾ, ಅಮರ್ ಉಜಾಲಾ, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್, ಡಿ.ಡಿ.ನ್ಯೂಸ್, ಯುಎನ್ಐ, ಎಎನ್ಐ, ಎಬಿಪಿ ನ್ಯೂಸ್, ರಿಪಬ್ಲಿಕ್, ಯುವರ್ ಸ್ಟೋರಿ, ಟೈಮ್ ಮ್ಯಾಗಜೀನ್ ಮುಂತಾದ ಮಾಧ್ಯಮಗಳಿಗೆ ನೀಡಿದ ಸಂದರ್ಶನವನ್ನು ಪರಿಗಣಿಸಿಯೇ ಇಲ್ಲ. ಅದಕ್ಕಾಗಿ ಮೋದಿ ಮಾಧ್ಯಮಗಳೊಂದಿಗೆ ಸಂವಾದವನ್ನೇ ನಡೆಸಿಲ್ಲ ಎನ್ನುತ್ತಿಲ್ಲ. ಇದಲ್ಲದೆ, ಇತ್ತೀಚೆಗೆ ಅವರು ಬಾಲಿವುಡ್ನ ಪ್ರಸಿದ್ಧ ನಟ ಅಕ್ಷಯ್ ಕುಮಾರ್ ಅವರೊಂದಿಗೆ ಸ್ನೇಹಪರ ಸಂದರ್ಶನವನ್ನು ನಡೆಸಿದ್ದರು, ಇದರ ಮೂಲಕ ತಮ್ಮ ವೈಯಕ್ತಿಕ ಜೀವನದ ವಿವರಗಳನ್ನು ನಾಗರಿಕರೊಂದಿಗೆ ಹಂಚಿಕೊಂಡಿದ್ದರು.
ಎನ್ಡಿಟಿಗೆ ಸಂದರ್ಶನವನ್ನು ನೀಡಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ವಕ್ತಾರರು ಮೋದಿ ಸರ್ಕಾರ ಮಾಧ್ಯಮ ಸಂವಾದದಿಂದ ಓಡಿಹೋಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇಂಡಿಯನ್ ಎಕ್ಸ್ಪ್ರೆಸ್ ಸೇರಿದಂತೆ ಇತರ ಮಾಧ್ಯಮಗಳ ಸಂದರ್ಶನದಲ್ಲಿ ಮೋದಿವರಿಗೆ ಮುಜಗರ ತರುವ ಪ್ರಶ್ನೆಗಳನ್ನೂ ಕೇಳಲಾಗಿದೆ, ಪ್ರತಿ ಪ್ರಶ್ನೆಗಳಿಗೂ ಮೋದಿ ತಮ್ಮದೇ ಆದ ಧಾಟಿಯಲ್ಲಿ ಉತ್ತರವನ್ನು ನೀಡಿದ್ದಾರೆ. ಎನ್ಡಿಟಿವಿಯನ್ನು ಅವರು ಉತ್ತಮ ಕಾರಣಕ್ಕಾಗಿಯೇ ದೂರವಿಟ್ಟಿದ್ದಾರೆ.
ತಟಸ್ಥ ಧೋರಣೆಯಿಂದ ತುಂಬ ದೂರವೇ ಇರುವ ಎನ್ಡಿಟಿವಿ, ತನ್ನ ವೈಯಕ್ತಿಕ ಅಜೆಂಡಾವನ್ನು ಸಾಧಿಸುವುದರಲ್ಲಿ ನಿಸ್ಸೀಮ. 2002ರ ಗೋಧ್ರಾ ಗಲಭೆಯ ಬಗೆಗಿನ ಎನ್ಡಿಟಿವಿ ಕವರೇಜ್ ಅನ್ನು ಹಲವು ಮಂದಿ ಪ್ರಶ್ನಿಸಿದ್ದಾರೆ. ಆಗ ಎನ್ಡಿಟಿವಿಯಲ್ಲಿ ಕೆಲಸ ಮಾಡುತ್ತಿದ್ದ ಬರ್ಖಾ ದತ್ ದಂಗೆಯ ಬಗ್ಗೆ ಅನೈತಿಕ ವರದಿಗಳನ್ನು ಮಾಡಿದರು. ಹನುಮಾನ್ ದೇಗುಲ ನಾಶಪಡಿಸಲಾಗಿದೆ ಎಂದು ಸುಳ್ಳು ಘೋಷಣೆ ಮಾಡಿದರು, ಸೂರತ್ ಡೈಮಂಡ್ ಮಾರುಕಟ್ಟೆ ಪೊಲೀಸ್ ಮುಕ್ತವಾಗಿದೆ ಎಂದು ಸಾರಿದ್ದರು. ಈ ಮೂಲಕ ದಂಗೆಕೋರರಿಗೆ ರಕ್ಷಣೆ ಇಲ್ಲದ ಜಾಗಗಳ ಬಗ್ಗೆ ಮಾಹಿತಿಯನ್ನು ರವಾನಿಸಿದರು. ಈ ಸಂದರ್ಭದಲ್ಲಿ ಚಾನೆಲ್ ತನ್ನ ಮೂಲಕ ನೈತಿಕತೆಯನ್ನು ಎತ್ತಿ ಹಿಡಿಯುವಲ್ಲಿ ಸಂಪೂರ್ಣ ವಿಫಲಗೊಂಡಿತ್ತು. ದಂಗೆಯಂತಹ ಸಂದರ್ಭದಲ್ಲಿ ದಂಗೆಕೋರರ ಧರ್ಮ, ಜಾತಿಯನ್ನು ಉಲ್ಲೇಖ ಮಾಡಿ ವರದಿ ಮಾಡುವುದು ನೈತಿಕತೆಯಲ್ಲ. ಆದರೆ ಎನ್ಡಿಟಿವಿ ಅದನ್ನು ಮಾಡಿದೆ. ಇದರಿಂದಾಗಿ ಗುಜರಾತ್ ಸರ್ಕಾರ ಅದರ ಪ್ರಸಾರವನ್ನು ಅನಿವಾರ್ಯವಾಗಿ ತಡೆ ಹಿಡಿಯಬೇಕಾಯಿತು. ಎನ್ಡಿಟಿವಿಯ ಗುಜರಾತ್ ದಂಗೆಯ ಬಗೆಗಿನ ವರದಿಯನ್ನು ಮಧು ಪೂರ್ಣಿಮಾ ಕಿಶ್ವರ್ ಅವರು ತಮ್ಮ “Modi, Muslims, and Media: Voices from Narendra Modi’s Gujarat” ಪುಸ್ತಕದಲ್ಲಿ ಅತ್ಯಂತ ತೀಕ್ಷ್ಣವಾಗಿ ಟೀಕೆ ಮಾಡಿದ್ದಾರೆ.
ಎನ್ಡಿಟಿವಿ ಈಗಲಾದರೂ ಬುದ್ಧಿ ಕಲಿತಿದೆ ಎಂದು ಅಂದುಕೊಂಡರೆ ಅದು ತಪ್ಪು. 2016ರಲ್ಲಿ ಎನ್ಡಿಟಿವಿ ಹಿನ್ನಡೆಯನ್ನು ಅನುಭವಿಸಬೇಕಾಯಿತು, ನವೆಂಬರ್ 9ರಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಯಲವು ಅದರ ಪ್ರಸಾರವನ್ನು ಸ್ಥಗಿತಗೊಳಿಸುವಂತೆ ಸೂಚನೆಯನ್ನು ನೀಡಿತ್ತು. ಜನವರಿಯಲ್ಲಿ ನಡೆದ ಪಠಾನ್ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯ ಬಗ್ಗೆ ಪ್ರಸಾರ ಮಾಡುವ ಸಂದರ್ಭದಲ್ಲಿ ಅದು ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನು ಪ್ರಸಾರ ಮಾಡಿತ್ತು. ದಾಳಿ ನಡೆದ ವಾಯುನೆಲೆ ದಾಳಿಯ ನಿಖರ ಸ್ಥಳವನ್ನು ಅದು ನೇರ ಪ್ರಸಾರಗೊಳಿಸಿತ್ತು. ಇಂತಹ ಮಾಹಿತಿಗಳನ್ನು ಹೊರ ಹಾಕುವುದರಿಂದ ರಾಷ್ಟ್ರೀಯ ಭದ್ರತೆಗೆ ಮಾರಕವಾಗಬಲ್ಲದು, ಭಯೋತ್ಪಾದಕರು ಈ ಮಾಹಿತಿಯನ್ನು ಪಡೆದು ದುಷ್ಕೃತ್ಯಕ್ಕೆ ಸಂಚು ರೂಪಿಸುವ ಅಪಾಯವೂ ಇದೆ. ಇದು ಸಚಿವಾಲಯದ ಕೆಂಗಣ್ಣಿಗೆ ಕಾರಣವಾಗಿತ್ತು.
ಇಂತಹ ನಿದರ್ಶನಗಳು ರಾಷ್ಟ್ರದ ಬಾಹ್ಯ ಮತ್ತು ಆಂತರಿಕ ಭದ್ರತೆಗೆ ಬೆದರಿಕೆಯೊಡ್ಡಿದರೂ, ಪರಿಸ್ಥಿತಿಯನ್ನು ಬಿಗಡಾಯಿಸಬಹುದು ಎಂದು ತಿಳಿದಿದ್ದರೂ ಮಾಧ್ಯಮ ಪಕ್ಷಪಾತ ವರದಿಯನ್ನು ಮಾಡಿತ್ತು. ಇದರಿಂದಾಗಿ ಮೋದಿ ಸರಕಾರವು ಆ ಚಾನೆಲ್ ಅನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿತು. 2014 ರ ಚುನಾವಣೆ ವೇಳೆ ಚಾನೆಲ್ಗೆ ಸಂದರ್ಶನ ಮಾಡುವ ಅವಕಾಶವನ್ನು ಮೋದಿ ನೀಡಿದರು. ಆ ಸಮಯದಲ್ಲಿ, ಅವರ ನೀತಿಗಳನ್ನು ಮತ್ತು ಸರ್ಕಾರವನ್ನು ಜಾರಿಗೆ ತರಲು ಅವರು ಮಾಡಿದ ಪ್ರಯತ್ನಗಳನ್ನು ಸಂಪೂರ್ಣವಾಗಿ ಕಡೆಗಣಿಸಿ, ಕೇವಲ 2002 ರಲ್ಲಿ ಏನಾಯಿತು ಎಂಬ ಬಗ್ಗೆಯೇ ಎನ್ಡಿಟಿವಿ ಆಸಕ್ತಿಯನ್ನು ಹುಟ್ಟಿಸಿಕೊಂಡಿತು. ನರೇಂದ್ರ ಮೋದಿ ಸುಪ್ರೀಂಕೋರ್ಟ್ ಮೂಲಕ ಆರೋಪ ಮುಕ್ತರಾದರೂ ಚಾನೆಲ್ ತನ್ನನ್ನು ತಾನು ಸುಪ್ರೀಂಕೋರ್ಟ್ಗಿಂತಲೂ ಮೇಲೆ ಅಂದು ಕೊಂಡಿತು. ಎನ್ಡಿಟಿವಿ ಪತ್ರಕರ್ತ ವಿಜಯ್ ತ್ರಿವೇದಿ ಅವರು ಮೋದಿ ಬಗ್ಗೆ ಕೆಟ್ಟ ವದಂತಿಗಳನ್ನು ಹಬ್ಬಿಸಲು ಪ್ರಯತ್ನಿಸಿದರು. ಹೀಗಾಗಿ ಮೋದಿ ಎನ್ಡಿಟಿವಿಗೆ ಸಂದರ್ಶನ ಅಥವಾ ಪ್ರತಿಕ್ರಿಯೆ ನೀಡದಿರುವ ನಿರ್ಧಾರವನ್ನು ತೆಗೆದುಕೊಂಡರು.
ಕೊನೆಯದಾಗಿ ಬಿಜೆಪಿಗೆ ಎನ್ಡಿಟಿವಿ ಭ್ರಮನಿರಸವಾಗುವಂತೆ ಮಾಡಿದ್ದು, ಸುಷ್ಮಾ ಸ್ವರಾಜ್ ಅವರ ಬಗ್ಗೆ ಸುಳ್ಳು ಟ್ವಿಟ್ ಅನ್ನು ಮಾಡಿ. ಮೋದಿಯವರ ವಾರಣಾಸಿ ಅಭ್ಯರ್ಥಿತನವನ್ನು ಸುಷ್ಮಾ ಪ್ರಶ್ನೆ ಮಾಡಿದ್ದಾರೆ ಎಂದು ಸಾರುವ ಟ್ವಿಟ್ ಅನ್ನು ಎನ್ಡಿಟಿವಿ ಪ್ರಕಟಿಸಿತ್ತು. ಬಳಿಕ ಎನ್ಡಿಟಿವಿ ಮತ್ತು ಬರ್ಖಾ ದತ್ತ್ ಇದಕ್ಕಾಗಿ ಕ್ಷಮೆಯಾಚನೆ ಮಾಡಿದರೂ ಬಿಜೆಪಿ ಮಾತ್ರ ಈ ವಾಹಿನಿಯ ಸಹವಾಸ ನಮಗೆ ಬೇಡ ಎಂಬ ನಿರ್ಧಾರಕ್ಕೆ ಬಂದಿತು. ಅಲ್ಲಿಂದ ಯಾವೊಬ್ಬ ಬಿಜೆಪಿ ನಾಯಕರೂ ಈ ವಾಹಿನಿಗೆ ಸಂದರ್ಶನವನ್ನು ನೀಡಿಲ್ಲ.
ಎನ್ಡಿಟಿವಿಯ ಸ್ಥಾಪಕಿ ರಾಧಿಕಾ ರಾಯ್ ಅವರು ತಮ್ಮ ಪತಿಯೊಂದಿಗೆ ವಾಹಿನಿಯ ಶೇ. 29.18ರಷ್ಟು ಷೇರನ್ನು ಹೊಂದಿದ್ದಾರೆ. ಆಕೆ ಸಿಪಿಎಂ ನಾಯಕಿ ಬೃಂದಾ ಕಾರಟ್ ಅವರ ಸಹೋದರಿಯಾಗಿದ್ದಾರೆ. ಕಾಂಗ್ರೆಸ್ ಸಂಸದ ನವೀನ್ ಜಿಂದಾಲ್ ಅವರ ಮಾವ ಅಭಯ್ ಓಸ್ವಾಲ್ ಅವರು ಇದರಲ್ಲಿ ಶೇ.14ರಷ್ಟು ಷೇರು ಹೊಂದಿದ್ದಾರೆ. ಇಂತಹ ಸಂಬಂಧಗಳನ್ನು ಹೊಂದಿರುವ, ತಪ್ಪು ವರದಿಗಳನ್ನು ಮಾಡುತ್ತಿರುವ ವಾಹಿನಿಗೆ ಸಂದರ್ಶನ ನೀಡುವ ಮೂಲಕ ಸಮಯವನ್ನು ವ್ಯರ್ಥಗೊಳಿಸದಿರಲು ಬಿಜೆಪಿ ನಿರ್ಧರಿಸಿದೆ. ಕಾನೂನಾತ್ಮಕವಾಗಿ ಮತ್ತು ತಟಸ್ಥವಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಪ್ರಮುಖ ಮಾಧ್ಯಮಗಳಿಗೆ ಸಂದರ್ಶನವನ್ನು ನೀಡುವ ಮೂಲಕ ಮೋದಿ ಸರ್ಕಾರ ಪಾರದರ್ಶಕತೆ ನಿರ್ವಹಣೆ ಮಾಡಿದೆ ಮತ್ತು ನಾಗರಿಕರಿಗೆ ಎಲ್ಲಾ ಮಾಹಿತಿಯನ್ನು ರವಾನಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.