ನವದೆಹಲಿ: ಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಹಸಿರು ಪರಿಸರ ವ್ಯವಸ್ಥೆಯನ್ನು ವೃದ್ಧಿಸುವ ಸಲುವಾಗಿ ರುದ್ರಾಕ್ಷಿ ಮರಗಳನ್ನು ಬೆಳೆಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಶುದ್ಧ ಗಂಗಾ ಮಿಶನ್ (NMCG) ಅಡಿಯಲ್ಲಿ ‘ಉತ್ತರಾಖಂಡದಲ್ಲಿ ರುದ್ರಾಕ್ಷಿ ಮರಗಳ ನೆಡುವಿಕೆ’ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುವ ಸಲುವಾಗಿ ಎಚ್ಸಿಎಲ್ ಫೌಂಡೇಶನ್ ಮತ್ತು INTACH ನಡುವೆ ತಿಳುವಳಿಕೆ ಒಪ್ಪಂದ ಪತ್ರಕ್ಕೆ ಸಹಿ ಬಿದ್ದಿದೆ.
ಉತ್ತರಾಖಂಡದ ಗಂಗಾ ಜಲಾನಯನ ಪರಿಸರದಲ್ಲಿ ಸುಮಾರು 10 ಸಾವಿರ ರುದ್ರಾಕ್ಷಿ ಮರಗಳನ್ನು ನೆಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಸ್ಥಳಿಯರ, ಇತರ ಪಾಲುದಾರರ ಸಹಕಾರವನ್ನು ಪಡೆಯಲು ನಿರ್ಧರಿಸಲಾಗಿದೆ. ರುದ್ರಾಕ್ಷಿ ಮರಗಳು ಸ್ಥಳಿಯರ ಆದಾಯವನ್ನೂ ಹೆಚ್ಚಳ ಮಾಡಲಿವೆ.
ಗಂಗಾ ಪರಿಸರದ 97 ನಗರ ಮತ್ತು 4,465 ಗ್ರಾಮಗಳಲ್ಲಿ ಶುದ್ಧ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ಸಲುವಾಗಿ ಸಮಗ್ರ ಮತ್ತು ಸುಸ್ಥಿರ ಪರಿಹಾರವನ್ನು ನೀಡಲು ನಮಾಮಿ ಗಂಗೆ ಮಿಶನ್ ಮುಂದಾಗಿದೆ. ಅರಣ್ಯ ಬೆಳೆಸುವಿಕೆಯ ಕಾರ್ಯ ಮತ್ತು ಶುದ್ಧ ಗಂಗಾ ಮಿಶನ್ ಜೊತೆ ಜೊತೆಗೆ ಸಾಗಲಿದೆ ಎಂದು ಸಹಿ ಹಾಕುವ ಸಂದರ್ಭದಲ್ಲಿ NMCG ನಿರ್ದೇಶಕ ರಾಜೀವ್ ಮಿಶ್ರಾ ಹೇಳಿದ್ದಾರೆ.
‘An initiative towards a greener ecosystem in Ganga Basin’
A MoU was signed between NMCG, @HCL_Foundation and @INTACHIndia for taking up a project of ‘Plantation of Rudraksh Trees in Uttarakhand’ as part of CSR initiative under the #NamamiGange Programme. pic.twitter.com/P3KLFpFlfu
— Namami Gange (@cleanganganmcg) May 14, 2019
While the project aims at planting 10,000 Rudraksh trees in the catchment area of river Ganga in Uttarakhand in association with local community and other stakeholders, it will also help in generating income for people residing in those areas. The tripartite MoU was signed by pic.twitter.com/Tu8z3BdDo4
— Namami Gange (@cleanganganmcg) May 14, 2019
ಭಾರತ ಸರ್ಕಾರದ ಮುಂದಾಳತ್ವದಲ್ಲಿ ಭಾರತ ಸರ್ಕಾರವು ಶುದ್ಧ ಪರಿಸರ ವ್ಯವಸ್ಥೆ ವೃದ್ಧಿಸುವ ಗುರಿ ಹೊಂದಿರುವ ಈ ಯೋಜನೆಯ ಮುಂದಾಳತ್ವವನ್ನು ವಹಿಸಲಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಿಂದಾಗಿ ಈ ಯೋಜನೆಗೆ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಲಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.