ನವದೆಹಲಿ: ಅಭಿವೃದ್ಧಿ ಮತ್ತು ಎಲ್ಲಾ ಸದಸ್ಯರುಗಳ ಅಂತರ್ಗತ ಪ್ರಯೋಜನಕ್ಕಾಗಿ ವಿಶ್ವ ವ್ಯಾಪಾರ ಸಂಸ್ಥೆ (WTO) ಅನ್ನು ಬಲಪಡಿಸಲು ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂಬುದಾಗಿ 17 ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಪ್ರತಿಪಾದಿಸಿವೆ.
ಈ ರಾಷ್ಟ್ರಗಳು ನವದೆಹಲಿಯಲ್ಲಿ ಮಂಗಳವಾರ ಸಮಾಪನಗೊಂಡ ಎರಡು ದಿನಗಳ ಮಿನಿಸ್ಟ್ರಿಯಲ್ ಸಭೆಯಲ್ಲಿ 13 ಅಂಶಗಳನ್ನೊಳಗೊಂಡ ಘೋಷಣೆಗೆ ಸಹಿಯನ್ನು ಹಾಕಿವೆ.
ದೇಶಗಳಲ್ಲಿ ಈಜಿಪ್ಟ್, ಬಾರ್ಬಡೋಸ್, ಜಮೈಕಾ, ಮಲೇಷ್ಯಾ, ಭಾರತ, ಇಂಡೋನೇಷ್ಯಾ ಮತ್ತು ದಕ್ಷಿಣ ಆಫ್ರಿಕಾಗಳು ಸೇರಿದಂತೆ ಒಟ್ಟು 22 ದೇಶಗಳು ಈ ಸಭೆಯಲ್ಲಿ ಭಾಗವಹಿಸಿದ್ದವು.
ವಿಶ್ವ ವ್ಯಾಪಾರ ಸಂಸ್ಥೆಯ ಸುಧಾರಣೆಯ ಪ್ರಕ್ರಿಯೆಯು ಅಭಿವೃದ್ಧಿಯನ್ನು ತನ್ನ ಪ್ರಮುಖ ಅಂಶವಾಗಿಟ್ಟುಕೊಂಡಿರಬೇಕು, ಅಂತರ್ಗತ ಬೆಳವಣಿಗೆಗೆ ಉತ್ತೇಜನ ನೀಡಬೇಕು ಮತ್ತು ಅಭಿವೃದ್ಧಿಶೀಲ ಸದಸ್ಯರ ಹಿತಾಸಕ್ತಿ ಮತ್ತು ಕಾಳಜಿಗಳನ್ನು ಸಂಪೂರ್ಣವಾಗಿ ಪರಿಗಣಿಸಬೇಕು ಎಂಬುದನ್ನು ಈ ದಾಖಲೆ ಹೇಳುತ್ತದೆ.
ದಾಖಲೆಗೆ ಸಹಿ ಮಾಡಿದ ಸದಸ್ಯ ರಾಷ್ಟ್ರಗಳು, ವಿಶ್ವ ವ್ಯಾಪಾರ ಸಂಸ್ಥೆಯ ಮೇಲ್ಪಟ್ಟ ಮಂಡಳಿಯಲ್ಲಿನ ಹುದ್ದೆಯನ್ನು ತುಂಬುವಂತೆ ಮನವಿ ಮಾಡಿಕೊಂಡವು. ಇಲ್ಲವಾದರೆ ಬಿಕ್ಕಟ್ಟು ನಿರ್ವಹಣಾ ಯಾಂತ್ರಿಕತೆಯೂ ಸಂಪೂರ್ಣ ಬಲಹೀನವಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದವು.
ಯಾವುದೇ ವಿಳಂಬವಿಲ್ಲದೆ ಸವಾಲುಗಳನ್ನು ಬಗೆಹರಿಸಿಕೊಳ್ಳಲು ರಚನಾತ್ಮಕವಾಗಿ ತೊಡಗಿಸಿಕೊಳ್ಳುವಂತೆ ಎಲ್ಲಾ ಸದಸ್ಯರಲ್ಲಿಯೂ ಮನವಿಯನ್ನು ಮಾಡಿಕೊಳ್ಳಲಾಯಿತು. ವಿವಿಧ ಸಮಾನ ಹಿತಾಸಕ್ತಿಯ ವಿಷಯಗಳಲ್ಲಿ ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಸಂಪರ್ಕಿಸಲು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಒಪ್ಪಿಗೆ ಸೂಚಿಸಿದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.