
ನವದೆಹಲಿ: ನವೆಂಬರ್ 14 ರಂದು ಹೈದರಾಬಾದ್ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಭಾರತ್ ಸಮಿಟ್ (Bharat Summit 2026) ಸಂದರ್ಭದಲ್ಲಿ ಇಟಲಿಯ ರಾಜಕಾರಣಿ ಮತ್ತು ಪಾರ್ಟಿ ಆಫ್ ಯುರೋಪಿಯನ್ ಸೋಶಿಯಲಿಸ್ಟ್ಸ್ (PES)ನ ಸೆಕ್ರೆಟರಿ ಜನರಲ್ ಜಿಯಾಕೊಮೊ ಫಿಲಿಬೆಕ್ ಅವರು ನೀಡಿದ ಹೇಳಿಕೆಗಳು ದೊಡ್ಡ ವಿವಾದಕ್ಕೆ ಕಾರಣವಾಗಿವೆ.
ಫಿಲಿಬೆಕ್ ಅವರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಮಾತನಾಡಿದ್ದು, ಭಾರತದಲ್ಲಿ “ಪ್ರಜಾಪ್ರಭುತ್ವದ ಮೇಲೆ ದಾಳಿ” ನಡೆಯುತ್ತಿದೆ ಎಂದು ಹೇಳಿದ್ದಾರೆ, ಕಾಂಗ್ರೆಸ್ ಬಳಸುತ್ತಿರುವ ‘ವೋಟ್ ಚೋರ್, ಗದ್ದಿ ಛೋಡ್’ ಘೋಷಣೆಯನ್ನು ಕೂಗಿದ್ದಾರೆ. ಅದನ್ನು ಇಂಗ್ಲಿಷ್ನಲ್ಲಿ “Vote thief, leave your seat” ಎಂದು ಅನುವಾದಿಸಿಯೂ ಹೇಳಿದ್ದಾರಡ. ರಾಹುಲ್ ಗಾಂಧಿ ಅವರು ಈ ಸಂದರ್ಭದಲ್ಲಿ ನಗುತ್ತಿರುವುದು ವೀಡಿಯೊಗಳಲ್ಲಿ ಕಾಣಿಸಿದೆ.
ಈ ಘಟನೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ವಿದೇಶಿ ರಾಜಕಾರಣಿಗಳಿಗೆ ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ವೇದಿಕೆಯನ್ನು ಕಾಂಗ್ರೆಸ್ ನೀಡಿದೆ ಎಂದು ಟೀಕಿಸಿದೆ. ಇದನ್ನು “ಭಾರತ ವಿರೋಧಿ ಶೃಂಗಸಭೆ” ಎಂದು ಕರೆದಿದೆ.
ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಸರ್ಕಾರದ ಭಾಗವಾಗಿರುವ ಫೋರ್ಜಾ ಇಟಾಲಿಯಾ ಪಕ್ಷದ ನಾಯಕಿ ಡೆಬೊರಾ ಬರ್ಗಮಿನಿ ಅವರು ಫಿಲಿಬೆಕ್ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಈ ಬಗ್ಗೆ ಫೇಸ್ಬುಕ್ ಪೋಸ್ಟ್ ಮಾಡಿರುವ ಅವರು, ಪ್ರಜಾಪ್ರಭುತ್ವದಲ್ಲಿ ಆರೋಪಗಳನ್ನು ಮಾಡುವ ಸ್ವಾತಂತ್ರ್ಯವಿದೆ, ಆದರೆ ಅವುಗಳನ್ನು ಸಾಬೀತುಪಡಿಸಬೇಕು. ಇಟಲಿ ಮತ್ತು ಭಾರತದ ನಡುವೆ “ಸ್ಪೆಷಲ್ ಸ್ಟ್ರಾಟಜಿಕ್ ಪಾರ್ಟ್ನರ್ಶಿಪ್” ಇದೆ. ಅಂತಹ ಸ್ನೇಹಪರ ದೇಶದ ಆಂತರಿಕ ರಾಜಕೀಯ ಚರ್ಚೆಯಲ್ಲಿ ಹಸ್ತಕ್ಷೇಪ ಮಾಡುವುದು ಸೂಕ್ತವಲ್ಲ ಎಂದಿದ್ದಾರೆ.
“97 ಕೋಟಿ ನಾಗರಿಕರು ಮತ ಚಲಾಯಿಸುವ ದೇಶಕ್ಕೆ ಯುರೋಪಿಯನ್ನರು ಪ್ರಜಾಪ್ರಭುತ್ವದ ಪಾಠ ಹೇಳುವುದು ಸರಿಯಲ್ಲ. ಭಾರತಕ್ಕೆ ತನ್ನದೇ ರಾಜಕೀಯ ಸಂಸ್ಥೆಗಳು ಮತ್ತು ನ್ಯಾಯಾಂಗವಿದೆ. ವಿವಾದಗಳನ್ನು ದೇಶದ ಪ್ರಜಾಪ್ರಭುತ್ವದ ನಿಯಮಗಳ ಪ್ರಕಾರ ಪರಿಹರಿಸಬೇಕು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



