ಭಾರತದಲ್ಲಿನ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅದರ ನಾಯಕರು ತಮ್ಮ ವೋಟ್ ಬ್ಯಾಂಕುಗಳಿಗೆ ತಮಗೇ ಮತ ನೀಡಲು ಯಾಚಿಸುವ ಸಲುವಾಗಿ ಧಾರ್ಮಿಕ ಧ್ರುವೀಕರಣವನ್ನು ಮಾಡುತ್ತಾರೆ, ಇದರ ಮೂಲಕವೇ ತಮ್ಮ ರಾಜಕೀಯವನ್ನು ಕ್ರೋಢೀಕರಿಸುತ್ತಾರೆ.
ಉದಾಹರಣೆಗೆ, ದಯೋಬಂದಿನಲ್ಲಿ 2019ರ ಎಪ್ರಿಲ್ 6 ರಂದು 25 ವರ್ಷಗಳ ಬಳಿಕ ನಡೆದ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷದ ಜಂಟಿ ಸಮಾವೇಶದಲ್ಲಿ ಮಾಯಾವತಿ ಮುಸ್ಲಿಮರಿಗೆ ಬಹಿರಂಗ ಮನವಿಯನ್ನು ಮಾಡಿಕೊಂಡು ‘ಕಾಂಗ್ರೆಸ್ಸಿಗೆ ಬೆಂಬಲ ನೀಡುವ ಮೂಲಕ ಮುಸ್ಲಿಂ ಮತಗಳು ಹಂಚಿ ಹೋಗುವಂತೆ ಮಾಡಬೇಡಿ. ಬಿಜೆಪಿ ವಿರುದ್ಧ ಹೋರಾಡುತ್ತಿರುವುದು ಮೈತ್ರಿಯೇ ಹೊರತು ಕಾಂಗ್ರೆಸ್ ಅಲ್ಲ. ಮೈತ್ರಿ ಜಯ ಗಳಿಸಬಾರದು ಎಂಬುದು ಕಾಂಗ್ರೆಸ್ಸಿನ ಗುರಿಯಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗೆ ಸಹಾಯ ಮಾಡಲು ಬಯಸುತ್ತಿದೆ” ಎಂದಿದ್ದರು.
ಮಾಧ್ಯಮಗಳ ವರದಿಯ ಪ್ರಕಾರ, ಪಶ್ಚಿಮಬಂಗಾಳದ ಇಮಾಮ್ ಮತ್ತು ಮೌಲ್ವಿಗಳು ಅಖಿಲ ಭಾರತ ಮಿಲ್ಲಿ ಕೌನ್ಸಿಲ್ ಬ್ಯಾನರ್ ಅಡಿಯಲ್ಲಿ ಭಾರತದಾದ್ಯಂತದ ಇಮಾಮ್ ಮತ್ತು ಧರ್ಮಗುರುಗಳಿಗೆ ಪತ್ರವನ್ನು ಬರೆದು ಮುಸ್ಲಿಮರನ್ನು ‘ಜಾತ್ಯತೀತ’ ಪಕ್ಷಗಳಿಗೆ ಮತ ಚಲಾಯಿಸುವಂತೆ ಮನವಿ ಮಾಡಿ ಎಂದು ಸೂಚಿಸಿದ್ದಾರೆ. ಮಾತ್ರವಲ್ಲ, ಇವರು ತಮ್ಮ ಸಮುದಾಯದ ಸದಸ್ಯರನ್ನು ಪ್ರೇರೇಪಿಸಲು ಧರ್ಮೋಪದೇಶವನ್ನೂ ಬಳಸುತ್ತಾರೆ.
ಪಶ್ಚಿಮ ಬಂಗಾಳವೊಂದರಲ್ಲೇ ಸುಮಾರು 10,000 ಪತ್ರಗಳನ್ನು ಇಸ್ಲಾಮಿಕ್ ಸಂಸ್ಥೆಯು ಕಳುಹಿಸಿಕೊಟ್ಟಿದೆ. ರೆಡ್ ರೋಡಿನಲ್ಲಿ ಈದ್ ನಮಾಜ್ ನೇತೃತ್ವವನ್ನು ವಹಿಸುವ ಈ ಸಂಸ್ಥೆಯ ಅಧ್ಯಕ್ಷ ಇಮಾಮ್ ಖ್ವಾರಿ ಫಾಜ್ಲೂರ್ ರಹಮಾನ್ ಮತ್ತು ಉಪಾಧ್ಯಕ್ಷ ಮೌಲಾನಾ ಶಫೀಕ್ ಕಾಸ್ಮೀ ಅವರುಗಳ ಸಹಿಯನ್ನು ಈ ಪತ್ರ ಹೊಂದಿದೆ. ಒಂದು ಇಸ್ಲಾಮಿಕ್ ತತ್ವವನ್ನು ಇವರು ಉಲ್ಲೇಖ ಮಾಡಿ, ಒಂದು ವೇಳೆ ಮುಸ್ಲಿಮರಿಗೆ ರಾಜಕೀಯ ಅರಿವು ಇಲ್ಲದೇ ಇದ್ದರೆ ಅವರು ದಿನಕ್ಕೆ ಐದು ಬಾರಿ ನಮಾಝ್ ಮಾಡಿಯೂ ಪ್ರಯೋಜನವಿಲ್ಲ’ ಎಂದಿದ್ದಾರೆ.
ಮಮತಾ ಬ್ಯಾನರ್ಜಿ ಅವರಿಗೆ ಮುಸ್ಲಿಮರ ಮೇಲಿನ ಪ್ರೀತಿ ಎಲ್ಲರಿಗೂ ತಿಳಿದ ವಿಷಯ, ಅಧಿಕಾರಕ್ಕಾಗಿ ಅವರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಮಮತಾ ಇಮಾಮ್ ಮತ್ತು ಮೌಲ್ವಿಗಳಿಗೆ ಭತ್ಯೆಗಳನ್ನೂ ನೀಡುತ್ತಾರೆ. ಸ್ಕಾರ್ಫ್ ಹಾಕಿಕೊಂಡು ನಮಾಝ್ ಅನ್ನು ಮಾಡುತ್ತಾರೆ. ಬಂಗಾಳಿಯೊಂದಿಗೆ ಅರಬ್ಬಿಯನ್ನು ಮಿಕ್ಸ್ ಮಾಡಿ ಸಭೆ, ಸಮಾರಂಭಗಳಲ್ಲಿ ಮಾತನಾಡುತ್ತಾರೆ.
ಭಾರತೀಯ ರಾಜಕೀಯದಲ್ಲಿ ಮತ್ತೊಂದೆಂದರೆ ಓವೈಸಿ ಸಹೋದರರ ಉದಯ. ಇವರು ಮುಸ್ಲಿಮರ ವೋಟುಗಳು ತಮ್ಮ ಅಭ್ಯರ್ಥಿಗಳಿಗೇ ಸಿಗುವಂತೆ ಮಾಡಲು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಕೆಲವೊಂದು ಮಾಧ್ಯಮಗಳು ಇವರನ್ನು ಮುಸ್ಲಿಮರ ಧ್ವನಿ ಅಂತಲೂ ಕರೆಯುತ್ತದೆ. ಜಾತ್ಯಾತೀತ ಎಂದು ಹೇಳಿಕೊಂಡರೂ ಮುಸ್ಲಿಂ ಮತ್ತು ದಲಿತರನ್ನು ಉದ್ಧರಿಸದ ಪಕ್ಷಗಳ ವಿರುದ್ಧ ಹೋರಾಡುವ ಸೇನಾನಿ ಎಂಬಂತೆ ಇವರನ್ನು ಬಿಂಬಿಸುತ್ತಾರೆ.
ನವಜೋತ್ ಸಿಂಗ್ ಸಿಧು, ಬಿಜೆಪಿಯಲ್ಲಿದ್ದು ಬಳಿಕ ಕಾಂಗ್ರೆಸ್ ಪಕ್ಷ ಸೇರಿ ಈಗ ಪಂಜಾಬಿನ ಪ್ರವಾಸೋದ್ಯಮ ಸಚಿವನಾಗಿರುವ ಸಿಧು ಈಗ ಕಾಂಗ್ರೆಸ್ಸಿನ ಸ್ಟಾರ್ ಕ್ಯಾಂಪೇನರ್ ಆಗಿದ್ದು, ಅಲ್ಪಸಂಖ್ಯಾತರ ಮತ ಗಳಿಸಲು ಧಾರ್ಮಿಕತೆಯನ್ನು ಎಳೆದು ತರುತ್ತಿದ್ದಾರೆ. ಸೆಕ್ಯೂಲರ್ ಎನ್ನುತ್ತಲೇ ಧಾರ್ಮಿಕವಾಗಿ ಮತ ಕೇಳುತ್ತಿದ್ದಾರೆ. 2019ರ ಎಪ್ರಿಲ್ 16ರಂದು ಬಿಹಾರದ ಕಾತಿಹಾರಿನಲ್ಲಿ ಮಾತನಾಡಿದ್ದ ಸಿಧು, ಮುಸ್ಲಿಮರಿಗೆ “ನೀವು ಶೇ.64ರಷ್ಟು ಪ್ರಮಾಣದಲ್ಲಿ ಇದ್ದೀರಾ, ಇಲ್ಲಿ ನೀವೇ ಬಹುಸಂಖ್ಯಾತರು. ನೀವು ಒಗ್ಗಟ್ಟಾದರೆ ಮೋದಿಯನ್ನು ಸೋಲಿಸಬಹುದು. ಸಿಕ್ಸ್ ಬಾರಿಸಬಹುದು. ಮೋದಿ ಬೌಂಡರಿಯ ಹೊರಗಡೆ ನಿಲ್ಲುತ್ತಾರೆ” ಎಂದಿದ್ದರು. ಇದಕ್ಕಾಗಿ ಚುನಾವಣಾ ಆಯೋಗ ಅವರನ್ನು 72 ಗಂಟೆಗಳ ಕಾಲ ಪ್ರಚಾರದಿಂದ ನಿರ್ಬಂಧ ಮಾಡಿತ್ತು.
ಚುನಾವಣಾ ಆಯೋಗದ ನಿರ್ಬಂಧದಿಂದ ಕುಪಿತಗೊಂಡು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಷಕಾರಿದ ಸಿಧು, ಮೋದಿಯನ್ನು ರಾಷ್ಟ್ರದ್ರೋಹಿ, ಸುಳ್ಳುಗಾರ, ವಿಭಜಕ, ಬ್ಯುಸಿನೆಸ್ ಮ್ಯಾನೇಜರ್ ಎಂದೆಲ್ಲಾ ಟೀಕಿಸಿದರು. ಮಾತ್ರವಲ್ಲ ‘ಕಡಿಮೆ ರೊಟ್ಟಿ ಮಾಡುವ ಮತ್ತು ಅಕ್ಕ ಪಕ್ಕದವರಿಗೆ ತಿಳಿಯಲಿ ತಾನು ಕೆಲಸ ಮಾಡುತ್ತಿದ್ದೇನೆಂದು ಹೆಚ್ಚು ಸದ್ದು ಮಾಡುವ ಮದುಮಗಳು’ ಎಂದು ಮೋದಿಯನ್ನು ವ್ಯಂಗ್ಯವಾಡಿದ್ದರು.
ಭಾರತದಲ್ಲಿ ಬಿಜೆಪಿ ಪಕ್ಷ ಉದಯವಾದಾಗಿನಿಂದ ರಾಜಕೀಯವನ್ನು ಜಾತ್ಯಾತೀತತೆ ಮತ್ತು ಕೋಮುವಾದಿತನ ಎಂದು ಇಬ್ಭಾಗಗೊಳಿಸಲಾಗಿದೆ. ಇದು ಭವಿಷ್ಯದಲ್ಲಿ ರಾಜಕೀಯದ ಗುಣಮಟ್ಟವನ್ನು ಹೀನಾಯ ಸ್ಥಿತಿಗೆ ಕೊಂಡೊಯ್ಯಬಹುದು. ರಾಜಕೀಯ ಕ್ರೋಢೀಕರಣಕ್ಕಾಗಿ ಪಕ್ಷಗಳು ಧರ್ಮ, ಜಾತಿಗಳನ್ನು ವಿಭಜಿಸುತ್ತಾ ಬರುತ್ತಿರುವುದು ಆತಂಕಕಾರಿ.
ಭಾರತವನ್ನು ಮಾರ್ಕ್ ತ್ವಾನಿ ಎಂಬಾತ, ‘ಮಾನವ ಜನಾಂಗದ ತೊಟ್ಟಿಲು, ಮಾನವ ಭಾಷೆಯ ಜನ್ಮಸ್ಥಳ, ಇತಿಹಾಸಗಳ ತಾಯಿ, ದಂತಕಥೆಗಳ ಅಜ್ಜಿ, ಸಂಪ್ರದಾಯಗಳ ಮುತ್ತಜ್ಜಿ. ಮನುಷ್ಯನ ಇತಿಹಾಸದಲ್ಲಿ ಹೆಚ್ಚು ಮೌಲ್ಯಯುತ ಮತ್ತು ಅತ್ಯಂತ ರಚನಾತ್ಮಕ ವಸ್ತು ಭಾರತದಲ್ಲಿ ಅಮೂಲ್ಯವಾಗಿದೆ” ಎಂದಿದ್ದಾನೆ. ಆದರೆ ವಿಪರ್ಯಾಸವೆಂದರೆ, ಆಧುನಿಕ ಭಾರತದ ರಾಜಕಾರಣಿಗಳು ಭಾರತದ ಆನುವಂಶಿಕ ಶ್ರೇಷ್ಠತೆಯನ್ನು ವಿನಾಶಗೊಳಿಸುತ್ತಿದ್ದಾರೆ ಎಂಬುದು.
“ದೂರದೃಷ್ಟಿಯುಳ್ಳ ಶ್ರೇಷ್ಠ ನಾಯಕರನ್ನು ಹೊಂದಿದ ಶ್ರೇಷ್ಠ ನಾಗರಿಕರು ಮಾತ್ರ ಶ್ರೇಷ್ಠ ರಾಷ್ಟ್ರವನ್ನು ನಿರ್ಮಾಣ ಮಾಡಬಲ್ಲರು. ದುರ್ಬಲ ನಾಯಕನನ್ನು ಹೊಂದಿದ ಶ್ರೇಷ್ಠ ನಾಗರಿಕರಿಗೆ ಶ್ರೇಷ್ಠ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗಲಾರದು” ಎಂಬ ಮಾತನ್ನು ನಾವು ಸರಿಯಾಗಿ ನೆನಪಿಟ್ಟುಕೊಳ್ಳಬೇಕು. ನಮ್ಮ ಆಯ್ಕೆ ಎಲ್ಲರನ್ನೂ ಸಮಾನವಾಗಿ ಕಂಡು ಸರ್ವರ ಏಳಿಗೆಗೆ ಶ್ರಮಿಸುವ ಬಲಿಷ್ಠ ನಾಯಕನೇ ಆಗಿರಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.