ಮುಂಬಯಿ: ಮುಂಬಯಿ ಮತ್ತು ಅಹ್ಮದಾಬಾದ್ ನಡುವೆ ಸಂಚರಿಸಲಿರುವ ದೇಶದ ಮೊತ್ತ ಮೊದಲ ಬುಲೆಟ್ ರೈಲು ಯೋಜನೆಯು ನಾಲ್ಕು ಥೀಮ್ ಆಧಾರಿತ ನಿಲ್ದಾಣಗಳನ್ನು ಹೊಂದಲಿದೆ. ನಗರವನ್ನು ಸಂಕೇತಿಸುವ ಥೀಮ್ ಅನ್ನು ಒಳಗೊಂಡ ರೈಲು ನಿಲ್ದಾಣಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.
ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್ (NHSRCL) ಟ್ವಿಟರ್ ಮೂಲಕ ಈ ಘೋಷಣೆಯನ್ನು ಮಾಡಿದ್ದು, ಬುಲೆಟ್ ರೈಲಿನ ಸೂರತ್ ರೈಲು ನಿಲ್ದಾಣದ ಥೀಮ್ ಅನ್ನು ಪ್ರಕಟ ಮಾಡಿದೆ.
4 out of 12 stations of Bullet Train India will have a theme symbolic to their respective city, which is driving curiosity amongst the nation. Read the comic strip to know what would be the design theme for Surat! #NHSRCL #BulletTrainIndia. pic.twitter.com/riLgZ4wefA
— NHSRCL (@nhsrcl) May 9, 2019
ವಜ್ರದ ಉದ್ಯಮಕ್ಕೆ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಸೂರತ್ನಲ್ಲಿನ ರೈಲು ನಿಲ್ದಾಣ ವಜ್ರದ ಆಕಾರದಲ್ಲಿ ಇರಲಿದೆ ಎಂದು ತಿಳಿಸಿದೆ.
“ಮುಂಬಯಿ-ಅಹ್ಮದಾಬಾದ್ ಹೈ ಸ್ಪೀಡ್ ರೈಲ್ ಕಾರಿಡಾರಿನ ಪ್ರತಿ ರೈಲು ನಿಲ್ದಾಣವನ್ನು ಭೂಪ್ರದೇಶದ, ಆರ್ಥಿಕ ಮೂಲಸೌಕರ್ಯ, ಸಂಸ್ಕೃತಿ ಮತ್ತು ಹಲವಾರು ಆಯಾಮಗಳ ಅಧ್ಯಯನವನ್ನು ಆಧರಿಸಿ ಆಯ್ಕೆ ಮಾಡಲಾಗಿದೆ’ ಎಂದು NHSRCL ಟ್ವಿಟ್ ಮೂಲಕ ತಿಳಿಸಿದೆ.
ಹೈ-ಸ್ಪೀಡ್ ರೈಲ್ ಕಾರ್ಪೋರೇಶನ್ ಯೋಜನೆಯ ಉದ್ದ 508.17 ಕಿಲೋಮೀಟರ್ ಇರಲಿದೆ, ಮಹಾರಾಷ್ಟ್ರ, ಗುಜರಾತ್, ದಾದ್ರಾ, ನಗರ್ ಹವೇಲಿ ಮೂಲಕ ಇದು ಸಂಚರಿಸಲಿದೆ. ಈ ಯೋಜನೆಯ 12 ಪ್ರಸ್ತಾಪಿತ ರೈಲು ನಿಲ್ದಾಣಗಳೆಂದರೆ, ಮುಂಬಯಿ, ಥಾಣೆ, ವಿರಾರ್, ಬೋಯಿಸರ್, ವಪಿ, ಬಿಲಿಮೊರಾ, ಸೂರತ್, ಭರೂಚ್, ವಡೋದರಾ, ಆನಂದ್ / ನಾಡಿಯಾ, ಅಹ್ಮದಾಬಾದ್ ಮತ್ತು ಸಬರ್ಮತಿ. ಈ 12 ಪ್ರಸ್ತಾವಿತ ನಿಲ್ದಾಣಗಳನ್ನು ಪೂರ್ಣಗೊಳಿಸಲು ಆಗಸ್ಟ್ 2022ರ ಟಾರ್ಗೆಟ್ ಅನ್ನು ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.