ನವದೆಹಲಿ: ಟ್ವಿಟರ್ನಲ್ಲಿ 11 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ದೇಶದ ಮೊದಲ ರಾಷ್ಟ್ರೀಯ ಪಕ್ಷ ಎಂಬ ಹೆಗ್ಗಳಿಕೆಗೆ ಬಿಜೆಪಿ ಪಾತ್ರವಾಗಿದೆ. 5.14 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಎರಡನೇ ಸ್ಥಾನವನ್ನು ಪಡೆದಿದೆ.
ರಾಜಕೀಯ ಪಕ್ಷಗಳಿಗೆ ಟ್ವಿಟರ್, ಫೇಸ್ಬುಕ್ಗಳೂ ಹೆಚ್ಚು ಪ್ರಭಾವಿ ಡಿಜಿಟಲ್ ಕ್ಯಾಂಪೇನಿಂಗ್ ವೇದಿಕೆಗಳಾಗಿ ಪರಿಣಮಿಸಿವೆ. ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯ ರಾಜಕೀಯ ವಿಷಯಗಳು ಚರ್ಚಿತಗೊಳ್ಳುತ್ತಿವೆ. ಹೊಸ ಪೀಳಿಗೆಯನ್ನು ತಲುಪಲು ಇವುಗಳು ಹೆಚ್ಚು ಸಹಕಾರಿ ಎಂಬುದನ್ನು ಎಲ್ಲಾ ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಂಡಿವೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಸಂದೇಶಗಳನ್ನು ಜನರಿಗೆ ತಲುಪಿಸಲು ಅತ್ಯಧಿಕ ಪ್ರಮಾಣದಲ್ಲಿ ಫೇಸ್ಬುಕ್, ಟ್ವಿಟರ್ ಬಳಕೆ ಮಾಡುತ್ತಿವೆ. ಅದರಲ್ಲೂ ಬಿಜೆಪಿ ಹಿಂದಿನಿಂದಲೂ ಹೆಚ್ಚು ಪ್ರಭಾವಶಾಲಿಯಾಗಿ ಸೋಶಿಯಲ್ ಮೀಡಿಯಾವನ್ನು ಬಳಕೆ ಮಾಡುತ್ತಾ ಬಂದಿದೆ. ಇದು ಅದಕ್ಕೆ ಹೆಚ್ಚು ಲಾಭದಾಯಕವಾಗಿಯೂ ಪರಿಣಮಿಸಿದೆ. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ಹಿಂಬಾಲಕರ ವಿಷಯದಲ್ಲಿ ಇನ್ನೂ ತುಂಬಾ ಹಿಂದುಳಿದಿದೆ.
ಈ ಕುರಿತು ಬಿಜೆಪಿ ಟ್ವೀಟ್ ಮಾಡಿ, ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು ಎಂದು ಸಂತಸವನ್ನು ಹಂಚಿಕೊಂಡಿದೆ.
BJP crosses the milestone of 11 million followers on Twitter. Thank you for your support. #JitegaModiJitegaBharat pic.twitter.com/CrTiDVO8qQ
— BJP (@BJP4India) May 10, 2019
ಬಿಜೆಪಿ 2010ರ ಅಕ್ಟೋಬರ್ ತಿಂಗಳಿನಿಂದಲೇ ಟ್ವಿಟರ್ನಲ್ಲಿ ಸಕ್ರಿಯವಾಗಿದೆ, ಕಾಂಗ್ರೆಸ್ 2013 ರಿಂದ ಟ್ವಿಟರ್ ಅನ್ನು ಬಳಕೆ ಮಾಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ನಲ್ಲಿ 47.2 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 9.4 ಮಿಲಯನ್ ಹಿಂಬಾಲಕರನ್ನು ಹೊಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.