ಕೋಲ್ಕತ್ತಾ: ಪ್ರಸ್ತುತ ಅಮೆರಿಕಾ ಮತ್ತು ಭಾರತದ ನಡುವಣ ವ್ಯಾಪಾರವು 145 ಬಿಲಿಯನ್ ಡಾಲರ್ನಷ್ಟಿದ್ದು, ಇದು 2023-24ರ ವೇಳೆಗೆ 500 ಬಿಲಿಯನ್ ಡಾಲರಿಗೆ ಏರಿಕೆಯಾಗಲಿದೆ ಎಂದು ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ (IACC) ಶುಕ್ರವಾರ ಹೇಳಿದೆ.
ಇ-ಕಾಮರ್ಸ್ ಮತ್ತು ಹೂ ಟ್ರಾಫಿಕ್ ವಿಷಯಗಳು ಉಭಯ ದೇಶಗಳ ನಡುವಣ ವ್ಯಾಪಾರವನ್ನು ಕುಂಠಿತಗೊಳಿಸುವ ಸಾಧ್ಯತೆ ಇರುವುದರಿಂದ, ಈ ಸಮಸ್ಯೆಗಳನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಯುಎಸ್ ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.
“ಪ್ರಸಕ್ತ ಇಂಡೋ-ಯುಎಸ್ ದ್ವಿಪಕ್ಷೀಯ ವ್ಯಾಪಾರವು $142.1 ಬಿಲಿಯನ್ ಇದೆ ಮತ್ತು ಇದು 2023-24ರ ವೇಳೆಗೆ $500 ಬಿಲಿಯನ್ಗೆ ಹೋಗಬಹುದು ಎಂದು ನಾವು ನಿರೀಕ್ಷೆ ಮಾಡಿದ್ದೇವೆ. ಇ-ಕಾಮರ್ಸ್, ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸ್ (ಜಿಎಸ್ಪಿ) ಮತ್ತು ವೈದ್ಯಕೀಯ ಉಪಕರಣ ಮುಂತಾದ ಅಲ್ಪಾವಧಿಯ ಸಮಸ್ಯೆಗಳತ್ತ ಗಮನ ನೀಡುವ ಅಗತ್ಯವಿದೆ” ಎಂದು ಐಎಸಿಸಿ ಅಧ್ಯಕ್ಷ ಎಸ್. ಕೆ. ಸರ್ಕಾರ್ ಹೇಳಿದ್ದಾರೆ.
ಈ ತಿಂಗಳ ಕೊನೆಯಲ್ಲಿ ಅಮೆರಿಕಾದಿಂದ ಭಾರತಕ್ಕೆ ವೈದ್ಯಕೀಯ ಪರಿಕರಗಳ ಆಮದು ಅಗ್ಗವಾಗಬಹುದು ಎಂದು ಅವರು ನಿರೀಕ್ಷೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.