ಭಾರತದಲ್ಲಿ ನೆಹರು ವಂಶಸ್ಥರನ್ನು ಟೀಕೆ ಮತ್ತು ಹೊಣೆಗಾರಿಕೆಯನ್ನು ಮೀರಿದವರು ಎಂದು ಪರಿಗಣಿಸಲಾಗುತ್ತದೆ. ರಾಜಮನೆತನದ ದರ್ಬಾರ್ಗೆ ವಿಧೇಯವಾಗಿರುವ ಕೆಲವೊಂದು ಮುಖ್ಯವಾಹಿನಿಯ ಮಾಧ್ಯಮಗಳು ಯಾರಾದರೂ ಅವರ ಮೇಲೆ ಬೆರಳನ್ನು ತೋರಿಸಲು ಪ್ರಯತ್ನಿಸಿದಾಗ ಸಮರ್ಥನೆಗಿಳಿಯುತ್ತವೆ. ರಾಜವಂಶವನ್ನು ರಕ್ಷಿಸಲು ಸ್ವತಃ ಫೀಲ್ಡ್ಗೆ ಇಳಿಯುತ್ತವೆ. ಅದೇನೇ ಇದ್ದರೂ, ಈ ರಾಜಮನೆತನದಿಂದ ಸಿಂಹಾಸನವನ್ನು ವಶಪಡಿಸಿಕೊಂಡಿರುವ ಚಾಯ್ ವಾಲಾ ಮೋದಿ, ಎಲ್ಲಾ ಗ್ರಾಮಗಳನ್ನು ವಿದ್ಯುದೀಕರಣಗೊಳಿಸಿದರೂ, ಮಾನವರಹಿತ ರೈಲ್ವೇ ದಾಟುವಿಕೆಗಳನ್ನು ನಿರ್ಮೂಲನೆಗೊಳಿಸಿದರೂ ಟೀಕೆಗಳನ್ನು ಕೇಳಲೇ ಬೇಕು. ಆದರೆ ನೆಹರು-ಗಾಂಧಿ ರಾಜವಂಶವು ತಾನು ಮಾಡಿದ ಭೌತಿಕ ಹಗರಣಗಳ ನಡುವೆಯೂ ಹೊಗಳುವಿಕೆಯನ್ನು ಕೇಳುತ್ತಿದೆ.
ರಾಜೀವ್ ಗಾಂಧಿ ಅವರ ಭ್ರಷ್ಟಾಚಾರದ ವಿಷಯವನ್ನು ಪ್ರಸ್ತಾಪಿಸಿದಾಗ, ದರ್ಬಾರಿಗಳ ಬೆಂಬಲಿಗರು ಎಂದು ಕರೆಯಲ್ಪಡುವವರೆಲ್ಲರೂ ರಾಜೀವ್ ನೆನಪುಗಳ ರಕ್ಷಣೆಗಾಗಿ ಜಿಗಿದು ಬಂದರು. “ಸತ್ತ ವ್ಯಕ್ತಿಯನ್ನು ಟೀಕಿಸಲು ಹೇಗೆ ಸಾಧ್ಯ’ ಎಂದರು. ಆದರೆ ರಾಜೀವ್ ಭ್ರಷ್ಟಾಚಾರಗಳು ಎಲ್ಲರಿಗೂ ಗೊತ್ತಿದ್ದ ವಿಷಯ, ಬೋಪೋರ್ಸ್ ಹಗರಣವನ್ನು ಯಾರೂ ಮರೆತಿಲ್ಲ, 1984ರ ಸಿಖ್ ದಂಗೆ, ಅದರ ಬಗ್ಗೆ ಅವರು ನೀಡಿದ ಹೇಳಿಕೆ, ಭೋಪಾಲ್ ಅನಿಲ ದುರಂತದ ಆರೋಪಿಯನ್ನು ವಿದೇಶಕ್ಕೆ ಹೋಗುವಂತೆ ಮಾಡಿದ್ದು ಎಲ್ಲವೂ ರಾಜೀವ ಅವರು ಸತ್ತ ಬಳಿಕವೂ ಅವರನ್ನು ಕಾಡುತ್ತಿವೆ.
ಇದೀಗ ಅವರು ಲಕ್ಷದ್ವೀಪಕ್ಕೆ ಮಾಡಿದ ಪ್ರವಾಸದ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹಳೆಯ ಪತ್ರಿಕೆಯಲ್ಲಿ ಈ ಪ್ರವಾಸದ ಬಗ್ಗೆ ಮಾಡಲಾದ ವರದಿಯನ್ನು ಈಗ ಎಲ್ಲರೂ ಓದುವಂತಾಗಿದೆ. ದೇಶ ಬಡತನದಲ್ಲಿ, ಹಸಿವೆಯಲ್ಲಿ, ನಿರುದ್ಯೋಗದಲ್ಲಿ ಇದ್ದ ಆ ಕಾಲದಲ್ಲಿ ಪ್ರಧಾನಿಯಾಗಿದ್ದವರು ತಮ್ಮ ಕುಟುಂಬದ ಸಮೇತವಾಗಿ, ಅದು ಕೂಡ ಯುದ್ಧ ನೌಕೆಯೊಂದರಲ್ಲಿ ಲಕ್ಷದ್ವೀಪಕ್ಕೆ ಪ್ರವಾಸವನ್ನು ಆಯೋಜಿಸಿದ್ದರು ಎಂಬುದು ಈಗ ಎಲ್ಲರ ಮುಂದೆ ಜಗಜ್ಜಾಹೀರಾಗಿದೆ.
ಈ ದರ್ಬಾರಿಗಳು ಹಗರಣದ ಆರೋಪದ ವಿರುದ್ಧ, ಸಿಖ್ ನರಮೇಧದ ವಿಷಯದ ವಿರುದ್ಧ ಪರಿಪಕ್ವ ಪ್ರತಿಕ್ರಿಯೆಯನ್ನು ನೀಡಿ ಎದುರಿಸುತ್ತಿದ್ದಾರೆ. ‘ಯಾಕೆ ಸತ್ತ ಮನುಷ್ಯನನ್ನು ಅವಮಾನಿಸುತ್ತೀರಿ?, ಆತ ತಾಯಿಯ ಮರಣದ ನೋವಿನಲ್ಲಿದ್ದ ಎಂಬಿತ್ಯಾದಿ ನೆಪಗಳನ್ನು ನೀಡಿ ಆರೋಪ ಮುಕ್ತವಾಗುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರ ವಿದೇಶಿ ಪ್ರವಾಸವನ್ನು, ಪ್ರಧಾನಿ ಧರಿಸುವ ಸೂಟ್ ಅನ್ನು, ಪ್ರಧಾನಿಯ ತಾಯಿಯನ್ನು ಟೀಕೆ ಮಾಡುವುದರಲ್ಲಿ ನಿರತವಾಗಿದ್ದ ಗುಂಪೊಂದು, ಈಗ ತನ್ನ ಅಗಲಿದ ನಾಯಕನ ವೈಭೋವೋಪೇತ ಹಾಲಿಡೇ ಅನ್ನು, ಅದಕ್ಕಾಗಿ ಐಎನ್ಎಸ್ ವಿರಾಟ್ ಅನ್ನು ಬಳಸಿಕೊಂಡಿದ್ದನ್ನು ಸಮರ್ಥಿಸಿಕೊಳ್ಳುತ್ತಿದೆ.
ರಾಜೀವ್ ಮಾಜಿ ಪ್ರಧಾನಿ ಮತ್ತು ಅವರು ಮಾಜಿ ಪ್ರಧಾನಿಗಳ ಮಗ ಎಂಬ ಒಂದೇ ಅರ್ಹತೆಯನ್ನು ಇಟ್ಟುಕೊಂಡು ಅವರ ಪತ್ನಿ ಮತ್ತು ಮಕ್ಕಳು ಕಾಂಗ್ರೆಸ್ ಪಕ್ಷವನ್ನು ಸುಪರ್ದಿಗೆ ತೆಗೆದುಕೊಂಡರು. ಈ ವಿಷಯದಲ್ಲಿ ಮೋದಿಯನ್ನೂ ನಾವು ಸ್ಮರಿಸಬೇಕು, ಯಾಕೆಂದರೆ ರಾಜೀವ್ ಗಾಂಧಿ ಬಗ್ಗೆ ನಾವಿಂದು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಸಲು ಮೋದಿಯೇ ಕಾರಣ.
ನೆನಪಿನಿಂದ ಮರೆಯಾಗಿ ಹೋಗಿದ್ದ ಹೈಪ್ರೊಫೈಲ್ ಪ್ರವಾಸವೊಂದು ಹೇಗೆ ಈಗ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂಬುದನ್ನು ಈಗಿನ ಸನ್ನಿವೇಶ ವಿವರಿಸುತ್ತದೆ. ಮಾಧ್ಯಮವೊಂದು ತನ್ನ ಲೇಖನದಲ್ಲಿ ರಾಜೀವ್ ಗಾಂಧಿ ಮತ್ತು ಕುಟುಂಬದ ಲಕ್ಷದ್ವೀಪ ಪ್ರವಾಸದ ಬಗ್ಗೆ ಎಳೆಎಳೆಯಾಗಿ ವಿವರಿಸಿದೆ, ಐಎನ್ಎಸ್ ವಿರಾಟ್ ಬಳಕೆ ಮಾಡಿದ್ದನ್ನು ಸ್ಪಷ್ಟಪಡಿಸಿದೆ. ತಂಪು ಪಾನೀಯ, ಆಹಾರಗಳನ್ನು ಪೂರೈಸಲು ನೌಕೆ ಬಳಸಿಕೊಂಡಿದ್ದನ್ನು ವಿವರಿಸಿದೆ. ಇದು ಕಾಂಗ್ರೆಸ್ ಪಕ್ಷದ ತಲೆಕೆಡುವಂತೆ ಮಾಡಿದೆ.
ತನ್ನ ಅತ್ತೆ ಮನೆಯವರಿಗಾಗಿಯೇ ರಾಜೀವ್ ಗಾಂಧಿ ಲಕ್ಷದ್ವೀಪವನ್ನು ಆರಿಸಿಕೊಂಡರು ಎಂದು ಹೇಳಲಾಗುತ್ತಿದೆ. ಅಲ್ಲಿ ಅಲ್ಕೋಹಾಲ್, ವಿದೇಶಿಗರ ಆಗಮನಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಈ ಪ್ರವಾಸಕ್ಕೆ ತಗುಲಿದ ಖರ್ಚನ್ನು ಕೂಡ ಸರ್ಕಾರದ ಖಜಾನೆಯಿಂದಲೇ ಭರಿಸಲಾಗಿತ್ತು ಎಂದೂ ಹೇಳಲಾಗುತ್ತಿದೆ, ಎಂಜಿನಿಯರ್ ಮತ್ತು ಕಾರ್ಮಿಕರನ್ನು ಬಳಸಿಕೊಂಡು ಗಾಂಧಿ ಪರಿವಾರಕ್ಕೆ ಅನುಕೂಲವಾಗುವಂತೆ ಸೌಲಭ್ಯಗಳನ್ನು ಮಾಡಿಸಿಕೊಡಲಾಗಿತ್ತು, ಹೆಲಿಪ್ಯಾಡ್, ಹಟ್ಮೆಂಟ್, ಕ್ವಾಟ್ರೆಸ್ಗಳನ್ನು ಇಲ್ಲಿ ರಚನೆ ಮಾಡಲಾಗಿತ್ತು, ಮೀನು, ತೆಂಗಿನ ಕಾಯಿ ಎಲ್ಲವನ್ನೂ ಏರ್ ಲಿಫ್ಟ್ ಮಾಡಲಾಗಿತ್ತು ಎಂದೂ ಹೇಳಲಾಗಿದೆ.
ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಸರ್ಕಾರದ ಸಂಪನ್ಮೂಲವನ್ನು ಬಳಸಿಕೊಂಡು ರಾಜೀವ್ ಗಾಂಧಿ ಅವರು ಈ ಪ್ರವಾಸವನ್ನು ಏರ್ಪಡಿಸಿದ್ದು ಈಗ ದೊಡ್ಡ ಮಟ್ಟದಲ್ಲೇ ಚರ್ಚೆಯಾಗುತ್ತಿದೆ. ಆದರೆ ಗಾಂಧೀ ಕುಟುಂಬವನ್ನು ಸಮರ್ಥಿಸಿಕೊಳ್ಳುವ ದರ್ಬಾರಿಗಳಿಗೆ ಅವರು ಏನು ಮಾಡಿದರೂ ಸರಿ ಅನಿಸುತ್ತದೆ. ಪ್ರಿಯಾಂಕ ವಾದ್ರಾ ಉಡುವ ಸೀರೆ, ಆಕೆಯ ನಗು, ರಾಹುಲ್ ತಮ್ಮ ತಾಯಿಯನ್ನು ತಬ್ಬಿ ಹಿಡಿದುಕೊಳ್ಳುವುದು ಎಲ್ಲವನ್ನೂ ಅವರು ದೊಡ್ಡ ಸುದ್ದಿಯಾಗಿಸುತ್ತಾರೆ. ಆದರೆ ಅವರು ನಡೆಸಿದ ಪಾಪ ಕರ್ಮಗಳ ಬಗ್ಗೆ ಮಾತ್ರ ಯಾರೊಬ್ಬರೂ ತುಟಿಪಿಟಿಕ್ ಅನ್ನುವಂತಿಲ್ಲ. ಮುಗಿಬಿದ್ದು ಅರಚಲು ಆರಂಭಿಸುತ್ತಾರೆ.
ಗಾಂಧೀ ಕುಟುಂಬವನ್ನು ಕೆಲವು ಮಾಧ್ಯಮಗಳು, ಗಾಂಧಿ ಕುಟುಂಬದ ಅಭಿಮಾನಿಗಳು ಸದಾ ವೈಭವೀಕರಿಸುತ್ತಲೇ ಬಂದಿದ್ದಾರೆ. ಈ ವೈಭವೀಕರಣದ ಮೂಲಕ ಅವರ ಭ್ರಷ್ಟಾಚಾರಗಳನ್ನು, ಅಧಿಕಾರ ದುರ್ಬಳಕೆಯನ್ನು ಬಚ್ಚಿಡುವ ಪ್ರಯತ್ನವನ್ನು ನಡೆಸುತ್ತಾ ಬರಲಾಗಿದೆ. ಸಾಮಾನ್ಯ ಮನುಷ್ಯರು ಶಹಬಾನೋ ಪ್ರಕರಣವನ್ನು, ಭೋಪಾಲ್ ಅನಿಲ ದುರಂತವನ್ನು, ಸಿಖ್ ನರಮೇಧವನ್ನು, ಬೋಫೋರ್ಸ್ ಹಗರಣವನ್ನು ಬೇಗ ಮರೆತು ಬಿಡುವಂತೆ ಇವರು ಮಾಡುತ್ತಾರೆ. ಆದರೆ ಮೋದಿ ತೊಟ್ಟ ಸೂಟ್ ಮತ್ತು ವಿದೇಶಿ ನಾಯಕನನ್ನು ಅವರು ತಬ್ಬಿಕೊಂಡಿದ್ದನ್ನು ದೊಡ್ಡ ಸುದ್ದಿ ಮಾಡುತ್ತಾರೆ. ಇಂತಹ ಕಾರ್ಯವನ್ನು ಅವರು ಹಲವು ದಶಕಗಳಿಂದಲೇ ಮಾಡುತ್ತಾ ಬರುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತು ಅದರ ಬೆಂಬಲಿಗರು ನೆಹರು ಪರಿವಾರವನ್ನು ಟೀಕೆ ಮತ್ತು ಹೊಣೆಗಾರಿಕೆ ಮೀರಿದವರು ಎಂಬಂತೆ ಬಿಂಬಿಸುತ್ತಾ ಬಂದಿದೆ. ದೇಶದ ಯಾರೂ ಅವರನ್ನು ಟೀಕಿಸಬಾರದು ಎಂಬುದು ಅವರ ನಿಲುವಾಗಿದೆ. ದೇಶಕ್ಕಾಗಿ ನೆಹರು ಕುಟುಂಬ ಹಲವು ತ್ಯಾಗಗಳನ್ನು ಮಾಡಿದೆ ಎಂದು ಪ್ರತಿಪಾದಿಸುವ ಇವರುಗಳು, ದೇಶದ ಸಂಪತ್ತನ್ನು ಈ ಕುಟುಂಬ ಕೊಳ್ಳೆ ಹೊಡೆದಿದೆ ಎಂಬ ಸತ್ಯವನ್ನು ಒಪ್ಪಿಕೊಳ್ಳುವುದೇ ಇಲ್ಲ. ಆದರೆ ಇವರೇನೇ ಕಸರತ್ತು ಮಾಡಿದರೂ, ಸತ್ಯ ಹೊರ ಬಂದೇ ಬರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.