ನೆಹರೂ ಗಾಂಧಿ ಪರಿವಾರದ ಸದಸ್ಯೆ, ವಿವಾದಿತ ಉದ್ಯಮಿ ರಾಬರ್ಟ್ ವಾದ್ರಾ ಪತ್ನಿ ಪ್ರಿಯಾಂಕಾ ವಾದ್ರಾ ಅವರನ್ನು ಇತ್ತೀಚಿಗೆ ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು. ವಂಶಪಾರಂಪರ್ಯ ಆಡಳಿತದ ಮುಂದುವರಿದ ಭಾಗವಾಗಿ ಇವರನ್ನು ಈ ಹುದ್ದೆಯಲ್ಲಿ ಕೂರಿಸಲಾಗಿದೆ. ರಾಜಕೀಯವಾಗಿ ಅತ್ಯಂತ ಮಹತ್ವಪೂರ್ಣ ರಾಜ್ಯವಾಗಿರುವ ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ವಾದ್ರಾ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಅದ್ಭುತವನ್ನು ಸೃಷ್ಟಿಸುವ ಕನಸನ್ನು ಕಾಂಗ್ರೆಸ್ ಕಾಣುತ್ತಿದೆ. ಆದರೆ ಅದರ ಕನಸು ಕಾರ್ಯರೂಪಕ್ಕೆ ಬರುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಸೋಲಿನ ಭಯದಿಂದ ಚುನಾವಣಾ ಕಣಕ್ಕೆ ತಿಳಿಯದಿರುವ ನಿರ್ಧಾರದಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಳ್ಳುವವರೆಗೆ ಪ್ರಿಯಾಂಕ ವಾದ್ರಾ ನಡೆಸಿದ ಚುನಾವಣಾ ಪ್ರಚಾರ ಭಾರತದ ಇತಿಹಾಸದಲ್ಲೇ ಅತಿ ಕೆಟ್ಟ ಪ್ರಚಾರ ಎಂದು ಉಲ್ಲೇಖಿಸಲ್ಪಟ್ಟಿದೆ.
ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷವನ್ನು ಭಾರತದ ರಾಜಕೀಯ ಚಿತ್ರಣದಿಂದಲೇ ಅಳಿಸಿ ಹಾಕುತ್ತಿರುವಂತಹ ಸನ್ನಿವೇಶದಲ್ಲಿ ಪ್ರಿಯಾಂಕ ವಾದ್ರಾ ಅವರ ಸಕ್ರಿಯ ರಾಜಕಾರಣದ ಆಗಮನವನ್ನು ಪ್ರಧಾನಿ ಮೋದಿ ವಿರುದ್ಧದ ಬ್ರಹ್ಮಾಸ್ತ್ರ ಎಂದು ಬಿಂಬಿಸಲಾಗಿತ್ತು. ಆದರೆ ದುರದೃಷ್ಟವೆಂದರೆ, ಪ್ರಿಯಾಂಕಾ ವಾದ್ರಾ ಅವರು ದೇಶದ ಹಿರಿಯ ಪಕ್ಷ ಕಾಂಗ್ರೆಸನ್ನು ಅವನತಿಯಿಂದ ಹೊರತರಲು ಪ್ರಯತ್ನಿಸುವ ಬದಲು, ಅದನ್ನು ಇನ್ನಷ್ಟು ಅವನತಿಯತ್ತ ಕೊಂಡೊಯ್ಯಲು ಸಹೋದರನ ಹಾದಿಯಲ್ಲೇ ಸಾಗುತ್ತಿದ್ದಾರೆ.
ಪ್ರಿಯಾಂಕ ವಾದ್ರಾ ಅವರು ಸಕ್ರಿಯ ರಾಜಕಾರಣದಿಂದ ಬಹುಕಾಲ ದೂರವೇ ಉಳಿದಿದ್ದ ನೆಹರು-ಗಾಂಧಿ ಕುಟುಂಬದ ಏಕೈಕ ಸದಸ್ಯೆಯಾಗಿದ್ದಾರೆ. ರಾಹುಲ್ ಗಾಂಧಿ ಅವರ ನಾಯಕತ್ವದ ವೈಫಲ್ಯತೆಯಿಂದಾಗಿ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅವನತಿ ಕಾಣುವತ್ತ ಸಾಗುತ್ತಿದೆ, ಪ್ರಸ್ತುತ ತಲೆಮಾರಿಗೆ ತಕ್ಕಂತೆ ರಾಹುಲ್ ಗಾಂಧಿ ಅವರ ವ್ಯಕ್ತಿತ್ವ ಇಲ್ಲದೆ ಇರುವುದು ಈಗ ಕಾಂಗ್ರೆಸ್ ಪಕ್ಷಕ್ಕೆ ಅರಿವಾಗಿದೆ. ಅವರು ಪ್ರಧಾನಿ ಹುದ್ದೆಗೆ ಸೂಕ್ತ ವ್ಯಕ್ತಿ ಅಲ್ಲ ಎಂಬುದು ಅದಕ್ಕೆ ಮನವರಿಕೆಯಾಗಿದೆ. ಪ್ರಿಯಾಂಕಾ ವಾದ್ರಾ ಅವರು ಭಾರತೀಯ ರಾಜಕಾರಣಕ್ಕೆ ಹೊಸ ಮುಖ, ಕೆಲವು ರಾಜಕೀಯ ಪಂಡಿತರು ಭಾರತೀಯ ರಾಜಕೀಯದಲ್ಲಿ ಅವರು ಅತಿ ದೊಡ್ಡ ವ್ಯಕ್ತಿ ಆಗಲಿದ್ದಾರೆ ಎಂಬ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಅವರು ಮೋಡಿ ಮಾಡುತ್ತಾರೆ ಎಂಬುದು ಇವರ ಲೆಕ್ಕಾಚಾರವಾಗಿದೆ. ಆದರೆ ಪ್ರಿಯಾಂಕ ತಮ್ಮ ನೇಮಕಾತಿಯಾದ ಕೆಲವೇ ತಿಂಗಳಲ್ಲಿ ಮಾಧ್ಯಮ, ಸಾರ್ವಜನಿಕರು ಮತ್ತು ರಾಜಕೀಯ ಪಂಡಿತರಿಗೆ ಅವರ ಅಭಿಪ್ರಾಯಗಳು ಸತ್ಯಕ್ಕೆ ದೂರವಾದವಗಳು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಉತ್ತರಪ್ರದೇಶದಲ್ಲಿ ಮಹಾಘಟಬಂಧನ ನಡೆದ ಸಂದರ್ಭದಲ್ಲಿ ಪ್ರಿಯಾಂಕ ವಾದ್ರಾ ಅವರ ರಾಜಕೀಯ ಪ್ರವೇಶವಾಗಿದೆ, ಆದರೆ ಈ ಮಹಾಘಟಬಂಧನದಲ್ಲಿ ಕಾಂಗ್ರೆಸ್ ಗೆ ಪ್ರಮುಖ ಸ್ಥಾನವನ್ನು ದೊರಕಿಸಿ ಕೊಡುವಲ್ಲಿ ಪ್ರಿಯಾಂಕಾ ವಾದ್ರಾ ಅವರ ವರ್ಚಸ್ಸು ವಿಫಲವಾಗಿದೆ. ರಾಯ್ ಬರೇಲಿ, ಅಮೇಥಿ ಬಿಟ್ಟು ಒಂದೆರಡು ಕ್ಷೇತ್ರಗಳನ್ನು ಅಷ್ಟೇ ಅವುಗಳು ಕಾಂಗ್ರೆಸ್ಸಿಗೆ ಅನುಕಂಪದ ಮೇರೆಗೆ ಬಿಟ್ಟುಕೊಟ್ಟಿದೆ.
ಪಕ್ಷದಲ್ಲಿ ವ್ಯರ್ಥವಾಗಿರಬಾರದು ಎಂದು ನಿರ್ಧರಿಸಿದ ಪ್ರಿಯಾಂಕಾ ಅವರು, ಪ್ರಧಾನಿ ಮೋದಿಯವರು ಸ್ಪರ್ಧಿಸುತ್ತಿರುವ ವಾರಣಾಸಿ ಮೇಲೆ ಕಣ್ಣು ಹಾಕಿದರು. ಅಲ್ಲಿಂದ ತಾನು ಚುನಾವಣೆ ಕಣಕ್ಕೆ ಇಳಿಯುವುದಾಗಿ ವದಂತಿಯನ್ನು ಹಬ್ಬಿಸಿದರು. ವಾರಣಾಸಿ ಹಿಂದುತ್ವದ ಸಂಕೇತ, ಧಾರ್ಮಿಕವಾಗಿ ಅತ್ಯಂತ ಮಹತ್ವವನ್ನು ಹೊಂದಿರುವ ಕ್ಷೇತ್ರ. ಎಲ್ಲದಕ್ಕಿಂತಲೂ ಮಿಗಿಲಾಗಿ ದೇಶದ ಪ್ರಧಾನಿಯವರು ಎರಡನೇ ಬಾರಿಗೆ ಅಲ್ಲಿಂದ ಸ್ಪರ್ಧಿಸುತ್ತಿದ್ದಾರೆ. ಭೌಗೋಳಿಕ ಪ್ರಾಮುಖ್ಯತೆ, ಸಾಂಸ್ಕೃತಿಕ ಮತ್ತು ರಾಜಕೀಯ ಪ್ರಾಮುಖ್ಯತೆಗಳು ವಾರಣಾಸಿಯನ್ನು ದೇಶದ ಅತ್ಯಂತ ಪ್ರತಿಷ್ಠಿತ ಕ್ಷೇತ್ರವನ್ನಾಗಿಸಿದೆ. ಈ ಕ್ಷೇತ್ರವನ್ನು ಸುಪರ್ದಿಗೆ ಪಡೆದುಕೊಂಡು ಪ್ರತಿಷ್ಠೆಯನ್ನು ಹೆಚ್ಚಿಸುವ ತವಕದಲ್ಲಿ ಗಾಂಧಿ ಪರಿವಾರ ಇತ್ತು. ಆದರೆ ಕೊನೆ ಕ್ಷಣದಲ್ಲಿ ಸೋಲಿನ ಭೀತಿಯಿಂದಾಗಿ ಅಲ್ಲಿಂದ ಸ್ಪರ್ಧಿಸಬಾರದು ಎನ್ನುವ ನಿರ್ಧಾರಕ್ಕೆ ಬಂದರು. ರಾಹುಲ್ ಗಾಂಧಿ ಅವರಿಗೆ ಪರ್ಯಾಯವಾಗಿರುವ ನಾಯಕಿ ಎಂದು ಪರಿಗಣಿಸಲ್ಪಟ್ಟಿರುವ ಪ್ರಿಯಾಂಕಾರನ್ನು ಎರಡನೇ ರನ್ನರ್ ಅಪ್ ಮಾಡುವ ಉದ್ದೇಶ ಕಾಂಗ್ರೆಸ್ ಪಕ್ಷಕ್ಕೆ ಇರಲಿಲ್ಲ. ಆರಂಭವಾಗುವುದಕ್ಕೂ ಮುನ್ನವೇ ಆಕೆಯ ರಾಜಕೀಯ ಭವಿಷ್ಯವನ್ನು ಹಾಳು ಮಾಡುವುದಕ್ಕೆ ಅದು ತಯಾರಿರಲಿಲ್ಲ. ಇದರಿಂದ ಮುಖಭಂಗವನ್ನು ಎದುರಿಸಬೇಕಾಗುತ್ತದೆ ಎಂಬುದು ಆ ಪಕ್ಷಕ್ಕೆ ತಿಳಿದಿತ್ತು. ಈಗಾಗಲೇ ಆ ಪಕ್ಷ ರಾಹುಲ್ ಗಾಂಧಿಯವರ ಪ್ರಯೋಗಗಳಿಂದ ಸಾಕಷ್ಟು ಬೇಸತ್ತು ಹೋಗಿದೆ.
ಮೈತ್ರಿ ಮತ್ತು ಅಭ್ಯರ್ಥಿ ತನದ ವಿಷಯದಲ್ಲಿ ವೈಫಲ್ಯವನ್ನು ಅನುಭವಿಸಿರುವ ಪ್ರಿಯಾಂಕಾ ಅವರು ಪ್ರಚಾರದ ಆಯಾಮವನ್ನೇ ಬದಲಾಯಿಸಿದರು. ಯುಪಿಯಾದ್ಯಂತ ಸಂಚರಿಸಿ ಜನರನ್ನು ಸೆಳೆಯುವ ನಿಟ್ಟಿನಲ್ಲಿ ಜನರಿಗೆ ಜನರೊಂದಿಗೆ ಮಾತುಕತೆಗಳಲ್ಲಿ ತೊಡಗಿದರು. ಸೃತಿ ಇರಾನಿ, ನರೇಂದ್ರ ಮೋದಿ ವಿರುದ್ಧ ತೀವ್ರ ಸ್ವರೂಪದ ವಾಗ್ದಾಳಿಯನ್ನು ನಡೆಸಿದರು. ಅವರ ಇಂತಹ ನಿಲುವುಗಳಿಂದ ಅವರ ಪ್ರಚಾರ ಕಾರ್ಯವೂ ನಕಾರಾತ್ಮಕವಾಗಿ ಗೋಚರಿಸಿದೆ. ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಘೋಷಣೆ ಹಾಕುವಂತೆ ಮಕ್ಕಳನ್ನು ಪ್ರಚೋದಿಸಿದಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಈಗಾಗಲೇ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಚುನಾವಣಾ ಪ್ರಚಾರದ ಸಂದರ್ಭಗಳಲ್ಲಿ ಇಂತಹ ನೋಟಿಸ್ ಗಳು ಸಾಮಾನ್ಯ. ಆದರೆ ಪ್ರಿಯಾಂಕಾ ಅವರು ಮಕ್ಕಳನ್ನು ಬಳಸಿಕೊಂಡ ರೀತಿ ನಿಜಕ್ಕೂ ತಲೆತಗ್ಗಿಸುವಂಥದ್ದು. ಇನ್ನೊಂದೆಡೆ ಅವರು ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಆಕೆಯ ಪತಿ ಮತ್ತು ಆಕೆಯ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿರುವ ಸಂದರ್ಭದಲ್ಲಿ ಶ್ರೇಷ್ಠ ವ್ಯಕ್ತಿಗೆ ಮಾಲಾರ್ಪಣೆ ಮಾಡಬಾರದು ಎಂಬುದು ಅವರ ಅಭಿಪ್ರಾಯವಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಆಕೆಯ ಕುಟುಂಬ ಶಾಸ್ತ್ರಿ ಅವರನ್ನು ಎಂದಿಗೂ ಗೌರವದಿಂದ ನೋಡಿರಲಿಲ್ಲ.
ಮೈತ್ರಿ, ಅಭ್ಯರ್ಥಿತನ, ಪ್ರಚಾರ ಹೀಗೆ ಎಲ್ಲಾ ಕಡೆಯೂ ವೈಫಲ್ಯತೆಯನ್ನು ಅನುಭವಿಸಿದ ಬಳಿಕ ಪ್ರಿಯಾಂಕಾ ಅವರು ಕೇವಲ ಪ್ರಧಾನ ಕಾರ್ಯದರ್ಶಿಯಾಗಿ ಉಳಿಯುವ ನಿರ್ಧಾರಕ್ಕೆ ಬಂದರು. ಅಭ್ಯರ್ಥಿಗಳು ಸೋಲುತ್ತಾರೆ, ಗೆಲ್ಲುತ್ತಾರೆ ಎಂಬುದು ನನಗೆ ಮುಖ್ಯವಲ್ಲ ಬಿಜೆಪಿಯ ಮತ ಹಂಚಿಕೆಯನ್ನು ಕುಗ್ಗಿಸುವುದು ನನ್ನ ಗುರಿ ಎಂಬುದಾಗಿ ಇತ್ತೀಚಿಗೆ ಅವರು ಹೇಳಿಕೆ ನೀಡಿದ್ದರು. ಪ್ರಮುಖವಾಗಿ ಆಕೆಯ ಆಶಯವೆಂದರೆ ಮಹಾಘಟಬಂಧನ ಮತವನ್ನು ಹೆಚ್ಚಿಸುವುದು. ಮಹಾಘಟಬಂಧನ ನಾಯಕರು ತಮ್ಮ ಪಕ್ಷಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ ಎಂಬುದು ಆಕೆಗೆ ಒಂದು ವಿಷಯವೇ ಅಲ್ಲ.
ಚುನಾವಣಾ ಪ್ರಚಾರದ ಎಲ್ಲಾ ಕಡೆಯೂ ಶೂನ್ಯ ಫಲಿತಾಂಶದ ಪ್ರದರ್ಶನ ನೀಡಿರುವ ಅವರು, ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷದ ಮೇರು ನಾಯಕಿಯಾಗಿ ಹೊರಹೊಮ್ಮುತ್ತಾರೆ ಎಂಬುದು ಕೇವಲ ಕಲ್ಪನೆಯಷ್ಟೇ. ಆಕೆಯ ನಕಾರಾತ್ಮಕ ಅಭಿಯಾನ ನೆಹರು-ಗಾಂಧಿ ಕುಟುಂಬ ಚಿಂತನಾಹೀನವಾಗಿದೆ ಎಂಬುದನ್ನು ತೋರಿಸುತ್ತದೆ. ಆಕೆಯ ನೇಮಕ ವೈಭವಿಕರಣವಲ್ಲದೆ ಮತ್ತೇನು ಅಲ್ಲ, ಕಾಂಗ್ರೇಸ್ನ ಈ ಬ್ರಹ್ಮಾಸ್ತ್ರ ಠುಸ್ ಆಗುವಂತೆ ಕಾಣುತ್ತಿದೆ ಮತ್ತು ನಾಗರಿಕರು ಈ ಅದ್ಭುತವನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.