ಕಡಿಮೆ ಆದಾಯವಿರುವ ಕುಟುಂಬಗಳ ಮಕ್ಕಳು ಶಾಲೆಯಿಂದ ಹೊರಗೆ ಉಳಿಯಬಾರದು ಎಂಬ ಉದ್ದೇಶದೊಂದಿಗೆ ಅಭ್ಯುದಯ ಎಂಬ ಸರಕಾರೇತರ ಸಂಸ್ಥೆಯೊಂದು ಸುಮಾರು 250 SSLC ಮಕ್ಕಳಿಗೆ 110 ದಿನಗಳ ಉಚಿತ ಕೋಚಿಂಗ್ನ್ನು ಆಯೋಜನೆ ಗೊಳಿಸಿತು. ಇದರ ಪರಿಣಾಮವಾಗಿ ಬಡ ಮಕ್ಕಳು ರ್ಯಾಂಕ್ ಪಡೆಯುವುದು ಸಾಧ್ಯವಾಯಿತು. ನಗರದ ವಿವಿಧ ಭಾಗಗಳಲ್ಲಿ ಉಚಿತ ಕೋಚಿಂಗ್ ತರಗತಿಗಳನ್ನು ನಡೆಸಲಾಗಿತ್ತು, ಈ ತರಗತಿಗಳಿಗೆ ಹಾಜರಾದ ಸುಮಾರು 60ಕ್ಕೂ ಅಧಿಕ ಮಕ್ಕಳು ಶೇಕಡ 85 ಕ್ಕಿಂತಲೂ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾರೆ. ಇವರೆಲ್ಲರೂ ನೇಕಾರರ, ಪೇಂಟರ್, ಡ್ರೈವರ್, ತರಕಾರಿ ಮಾರುವವರ ಮಕ್ಕಳು.
ಕೋಚಿಂಗ್ ಪಡೆದದ್ದರಿಂದ ತನಗಾದ ಪ್ರಯೋಜನವನ್ನು ಹೇಳಿಕೊಂಡಿರುವ ಆಟೋ ರಿಕ್ಷಾ ಚಾಲಕರೊಬ್ಬರ ಮಗಳಾದ ವರ್ಷಿತ “ನನಗೆ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ವ್ಯಾಕರಣಗಳ ಬಗ್ಗೆ ತುಂಬಾ ಭಯವಿತ್ತು. ಆದರೆ ಅಭ್ಯುದಯ ಸಂಸ್ಥೆ ನಡೆಸಿದ ತರಗತಿಯಿಂದಾಗಿ ನನ್ನ ಭಯ ದೂರವಾಯಿತು. ಆ ವಿಷಯಗಳತ್ತ ಹೆಚ್ಚಿನ ಗಮನವನ್ನು ಹರಿಸಲು ಸಹಾಯಕವಾಯಿತು” ಎಂದಿದ್ದಾಳೆ. ಈಕೆ ಕಾರ್ಮೆಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯಾಗಿದ್ದಾಳೆ.
ಮತ್ತೋರ್ವ ವಿದ್ಯಾರ್ಥಿನಿ ಸ್ನೇಹಾ ಮಾತನಾಡಿ ತಾನು ಶೇಕಡ 80 ರಷ್ಟು ಅಂಕಗಳನ್ನು ಪಡೆಯಲು ಉಚಿತ ಕೋಚಿಂಗ್ ತರಗತಿಯೇ ಕಾರಣ ಎಂದಿದ್ದಾಳೆ. ಕೌಸ್ತುಭ ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಈಕೆ, ಒಂದು ತಿಂಗಳ ಕಾಲ ಉಚಿತ ಕೋಚಿಂಗ್ ತರಗತಿಗೆ ಹಾಜರಾಗಿದ್ದಳು. ಕಾರ್ಮೆಲ್ ಪಬ್ಲಿಕ್ ಸ್ಕೂಲ್ ಮತ್ತೋರ್ವ ವಿದ್ಯಾರ್ಥಿನಿ ಮೀನಾಕ್ಷಿ ಎಸ್. ಕಟ್ಕರ್ ಈ ಉಚಿತ ಕೋಚಿಂಗ್ ತರಬೇತಿಗೆ ಹಾಜರಾದ ಪರಿಣಾಮ ಶೇಕಡ 94 ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾಳೆ. ಈಕೆಯ ತಂದೆ ಪೇಟಿಂಗ್ ವೃತ್ತಿ ಮಾಡುತ್ತಿದ್ದಾರೆ. ಏಕೆ 2018 ರ ನವೆಂಬರ್ ನಲ್ಲಿ ಕೋಚಿಂಗ್ ತರಗತಿಗಳಿಗೆ ಸೇರ್ಪಡೆಗೊಂಡಿದ್ದಳು, ಪ್ರಸ್ತುತ ಅಗ್ರಿಕಲ್ಚರ್ ಸೈನ್ಸ್ ನಲ್ಲಿ ಆಸಕ್ತಿಯನ್ನು ಹೊಂದಿ, ಅದರಲ್ಲಿ ಮುಂದುವರೆಯುವ ನಿರ್ಧಾರವನ್ನು ತೆಗೆದು ಕೊಂಡಿದ್ದಾಳೆ.
“ಶಾಲೆಯ ಸಾಮಾನ್ಯ ತರಗತಿಗಳ ಜೊತೆಜೊತೆಗೆ ಕೋಚಿಂಗ್ ತರಗತಿಗಳಲ್ಲಿ ಎರಡು ಗಂಟೆಗಳ ಕಾಲ ಅಧ್ಯಯನ ಮಾಡುವುದು ಅತ್ಯಂತ ಪ್ರಯೋಜನಕಾರಿ ಎನ್ನುತ್ತಾಳೆ ಶೇಕಡ 87 ರಷ್ಟು ಅಂಕಗಳನ್ನು ಪಡೆದು ಕೊಂಡಿರುವ ಪೂಜಾ ಬಿ.ಎಂ. ಖೋ ಖೋ ಆಟಗಾರ್ತಿ ಆಗಿರುವ ಈಕೆ ಸೈಂಟ್ ಗ್ಲೋರಿಯಸ್ ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದಾಳೆ. ಮುಂದೆ ದಂತ ವೈದ್ಯೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾಳೆ.
ಅಭ್ಯುದಯ ಸಂಸ್ಥೆಯು ನವೆಂಬರ್ ನಿಂದ ಫೆಬ್ರವರಿ ತಿಂಗಳವರೆಗೆ ಶಾಲಾ ಸಮಯ ಮುಗಿದ ಬಳಿಕ ಮಕ್ಕಳಿಗೆ ಕೋಚಿಂಗ್ ತರಗತಿಯನ್ನು ಆಯೋಜನೆಗೊಳಿಸುತ್ತಿತ್ತು. ಮಾತ್ರವಲ್ಲದೆ, ಭಾನುವಾರದ ದಿನಗಳಲ್ಲಿ ವಿವಿಧ ಕ್ಷೇತ್ರಗಳ ತಜ್ಞರನ್ನು ಕರೆಸಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸುತ್ತಿತ್ತು. ಈ ತಜ್ಞರು ಮಕ್ಕಳಿಗೆ ದೊಡ್ಡ ದೊಡ್ಡ ಕನಸನ್ನು ಕಾಣುವುದು ಹೇಗೆ ಎಂಬಿತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು ಎಂದು ಅಭ್ಯುದಯ ಸಂಸ್ಥೆಯ ಸಲಹಾ ಮಂಡಳಿ ಸದಸ್ಯ ಡಿ.ಆರ್ ವಿದ್ಯಾಶಂಕರ್ ಹೇಳಿದ್ದಾರೆ.
ಐಪಿಎಸ್ ಅಧಿಕಾರಿಗಳು, ಖ್ಯಾತ ಮನಃಶಾಸ್ತ್ರಜ್ಞರು, ಉದ್ಯಮಿಗಳು ಮುಂತಾದವರ ಜೊತೆ ಮಕ್ಕಳಿಗೆ ಸಂವಾದ ನಡೆಸುವ ಅವಕಾಶವನ್ನು ಅಭ್ಯುಧಯ ಸಂಸ್ಥೆ ಒದಗಿಸಿಕೊಟ್ಟಿದೆ .ಈ ಸಂಸ್ಥೆಯ ಪ್ರಯತ್ನದ ಫಲವಾಗಿ ಆಟೋ ಚಾಲಕರ ಮಗಳಾದ ಅಶ್ವಿನಿ ಕೆ. ರಾವ್ ಅವರು 625 ಅಂಕಗಳ ಪೈಕಿ 601 ಅಂಕಗಳನ್ನು ಪಡೆದುಕೊಂಡಿದ್ದಾರೆ. ಮುಂದೆ ನಾಗರಿಕ ಸೇವಾ ಪರೀಕ್ಷೆಯನ್ನು ಬರೆದು ಸರಕಾರದ ಉನ್ನತ ಅಧಿಕಾರಿಯಾಗುವ ಕನಸನ್ನು ಹೊಂದಿದ್ದಾಳೆ. ಮನೆಯಲ್ಲಿನ ಬಡತನ ಈಕೆಯ ಸಾಧನೆಗೆ ತೊಡಕಾಗಿ ಪರಿಣಮಿಸಿಲ್ಲ. ಶೈಕ್ಷಣಿಕ ಸಾಧನೆಯನ್ನು ಗಮನಿಸಿ ನಗರ ಮೂಲದ ಸಂಸ್ಥೆ ಆಕೆಗೆ ಸ್ಕಾಲರ್ ಶಿಪ್ ಅನ್ನು ಒದಗಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.