News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಮಾಜಘಾತುಕ ಶಕ್ತಿಗಳ ವಿರುದ್ಧ ಬಾಯಾರಿನಲ್ಲಿ ಸಂಘಪರಿವಾರದ ಪ್ರತಿಭಟನೆ

ಬಾಯಾರು: ಸಮಾಜಘಾತುಕ ಶಕ್ತಿಗಳ ನಡೆಸುವ ದುಷ್ಕೃತ್ಯಗಳ ವಿರುದ್ಧ ಬಾಯಾರಿನಲ್ಲಿ ಸಂಘಪರಿವಾರದ ಪ್ರತಿಭಟನೆ ದಿನಾಂಕ 25-4-2019 ನೇ ಗುರುವಾರ ಸಂಜೆ ನಡೆಯಿತು.

ಹಿನ್ನೆಲೆ: 24.4.2019 ಬುಧವಾರ ರಾತ್ರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸ್ತರ ಜವಾಬ್ದಾರಿಯನ್ನು ಹೊಂದಿರುವ ಕಜಂಪಾಡಿ ಸುಬ್ರಮಣ್ಯ ಭಟ್ ಅವರು ಖಾಸಗಿ ಕಾರ್ಯಕ್ರಮವೊಂದಕ್ಕೆ ತಮ್ಮ ಮನೆಯವರ ಜೊತೆ ಬಾಯಾರಿನಿಂದ ವಾಹನವೊಂದರಲ್ಲಿ ಹೊರಟಿದ್ದರು. ಆಗ ಬಾಯಾರು ಸೊಸೈಟಿ ಬಳಿ ಮುಸಲ್ಮಾನರ ಮದುವೆ ನಡೆಯುತ್ತಿದ್ದು, ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ಜೊತೆಗೆ ಆ ಸಂದರ್ಭದಲ್ಲಿ ಸಿಡಿಮದ್ದುಗಳನ್ನು ಕೂಡ ರಸ್ತೆ ಬದಿಯಲ್ಲಿ ಸುಡಲಾಗುತ್ತಿತ್ತು.‌ ಸುಡುಮದ್ದು ಮುಗಿಯುವ ತನಕ ತಮ್ಮ ವಾಹನವನ್ನು ನಿಲ್ಲಿಸಿ, ನಂತರ ಹೊರಡಲು ಅನುವಾದರು. ಆಗ ಅಲ್ಲಿಗೆ ಬಂದ ಯುವಕರು ತಂಡ ವಾಹನವನ್ನು ತಡೆದುದು ಮಾತ್ರವಲ್ಲದೆ ಎಲ್ಲರನ್ನು ಕೆಟ್ಟದಾಗಿ ನಿಂದಿಸಿ ವಾಹನದ ಮೇಲೆ ಆಕ್ರಮಣ ನಡೆಸಿದರು.

ಈ ಹಿನ್ನೆಲೆಯಲ್ಲಿ ದಿನಾಂಕ 25-4-2019 ನೇ ಗುರುವಾರ ಸಂಜೆ ಬಾಯಾರು ಪದವಿನಿಂದ – ಬಾಯಾರು ಸೊಸೈಟಿಯವರೆಗೆ ನಡೆದ ಮೆರವಣಿಗೆಯಲ್ಲಿ ಸಂಘಪರಿವಾರದ ಪ್ರಮುಖರು ಭಾಗವಹಿಸಿದ್ದರು. ಪ್ರತಿಭಟನಾ ಮೆರವಣಿಗೆಯ ಕೊನೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯವಾಹ ಲೋಕೇಶ್ ಜೋಡುಕಲ್ಲು ಮಾತನಾಡಿ ಯಾವುದೇ ಕಾರಣ ಇಲ್ಲದೆ ಪ್ರಯಾಣಿಸುತ್ತಿದ್ದ ಸಂಘದ ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರ ವಾಹನದ ಮೇಲೆ ನಡೆದ ಹಲ್ಲೆ ಖಂಡನೀಯ. ಇಂತಹ ಅನೇಕ ಘಟನೆಗಳು ಕಾಸರಗೋಡಿನಾದ್ಯಂತ ನಡೆಯುವುದು ಇತ್ತೀಚೆಗೆ ಸಾಮಾನ್ಯ ಆಗುತ್ತಿದೆ. ನಾವು ಹಿಂದುಗಳು ಒಂದು ಹಿರಿಯರು ಕಲಿಸಿದ ಜೀವನ ಪದ್ಧತಿಯಲ್ಲಿ ನಡೆಯುವವರು.‌ ಯಾವತ್ತಿಗೂ ಕಾನೂನು ಮೀರಿ ನಡೆಯುವವರಲ್ಲ. ವಾಹನವನ್ನು ತಡೆದು ಹಲ್ಲೆಗೆ ಯತ್ನಿಸಿದವರ ಮೇಲೆ ಸಂಬಂಧಪಟ್ಟ ಇಲಾಖೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ. ಅಕಸ್ಮಾತ್ ಕ್ರಮ ಕೈಗೊಳ್ಳಲು ಅವರಿಗೆ ಸಾಧ್ಯವಿಲ್ಲ ಎಂದಾದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂಬುದು ತಿಳಿದಿದೆ ಎಂದರು.

ನಂತರ ಮಾತನಾಡಿದ ಭಾಜಪದ ಜಿಲ್ಲಾಧ್ಯಕ್ಷ ಅಡ್ವೊಕೇಟ್ ಶ್ರೀಕಾಂತ್ ಮಾತನಾಡುತ್ತ ಶಬರಿಮಲೆ ಹೋರಾಟದ ಸಂದರ್ಭದಲ್ಲಿ ಅಯ್ಯಪ್ಪ ನಾಮ ಸಂಕೀರ್ತನೆಯನ್ನು ಜಪಿಸುತ್ತಿದ್ದ ಭಕ್ತರನ್ನು ಬಂಧಿಸಿದ ಪೋಲೀಸರು, ವಿನಾಕಾರಣ ಕಾರನ್ನು ತಡೆದು ಹಲ್ಲೆಗೆ ಯತ್ನಿಸಿದವರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ ಎಂದು ಪೋಲೀಸ್ ಇಲಾಖೆಯನ್ನು ಪ್ರಶ್ನಿಸಿದರು. ನಂತರ ಅವರು ಮಾತನಾಡುತ್ತ ಮದುವೆಯ ನೆಪದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಿದ್ದು ಮಾತ್ರವಲ್ಲದೆ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಪಡಿಸಿದ ಘಟನೆಯನ್ನು ಖಂಡಿಸಿದರಲ್ಲದೆ ಅಂತಹ ವ್ಯಕ್ತಿಗಳ ಮೇಲೆ‌ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಈ ಕೃತ್ಯಕ್ಕೆ ಮದುವೆ ಮನೆಯವರು ಒಪ್ಪಿಗೆ ಇಲ್ಲದಿದ್ದಲ್ಲಿ ಅವರೇ ಸ್ವತಃ ಅಪರಾಧಿಗಳ ಪತ್ತೆಗೆ ಸಹಕರಿಸಲಿ ಇಲ್ಲದಿದ್ದರೆ ಅವರೂ ಈ ಘಟನೆಗೆ ಕಾರಣ ಎಂದು ಭಾವಿಸಬೇಕಾಗುತ್ತದೆ. ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯವರಾಗಿದ್ದರೂ ಹಲ್ಲೆಮಾಡಿದವರ ಯಾವುದೇ ಕಾರಣಕ್ಕೆ ಅವರ ಮೇಲೆ‌ ಕ್ರಮ ಕೈಗೊಳ್ಳಲು ಪೋಲಿಸ್ ಮುಂದಾಗದಿದ್ದಲ್ಲಿ ಮುಂದಿನ ಕ್ರಮವನ್ನು ನಮ್ಮ ಕಾರ್ಯಕರ್ತರೇ ಕೈಗೆತ್ತಿಕೊಳ್ಳಬೇಕಾದೀತು, ಅಂತಹ ಅವಕಾಶ ನೀಡಬೇಡಿ ಎಂದು ಪೋಲೀಸ್ ಇಲಾಖೆಗೆ ಎಚ್ಚರಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಂಚಾಲಕ ಗೋಪಾಲ ಚೆಟ್ಟಿಯಾರ್ ಹಾಗೂ ವಿಹಿಂಪ, ಭಾಜಪ, ಸಹಕಾರ ಭಾರತಿಯ ಹಲವು ಪ್ರಮುಖರು ಉಪಸ್ಥಿತರಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top