ವಿಶ್ವ ನಾಯಕನಾಗಿ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಒಂದು ಪಕ್ಷಕ್ಕಷ್ಟೇ ಸೀಮಿತವಾಗಿ ಉಳಿದಿಲ್ಲ. ಪ್ರತಿಯೊಬ್ಬ ದೇಶಭಕ್ತ ಭಾರತೀಯನ ಹೃದಯದ ಮಿಡಿತವಾಗಿ ಬದಲಾಗಿದ್ದಾರೆ. ಅಂತಹಾ ಮೋದಿಯವರ ಪರವಾಗಿ ಇಡೀ ದೇಶದ ಲೆಕ್ಕವಿಲ್ಲದಷ್ಟು ಜನರು ಸ್ವಯಂ ಪ್ರೇರಿತವಾಗಿ ಪ್ರಚಾರ ಮಾಡುತ್ತಿದ್ದಾರೆ. “ಮೋದಿಗಾಗಿ ನಾವು-ನಮಗಾಗಿ ಮೋದಿ” ಎನ್ನುತ್ತಿದ್ದಾರೆ. ಆದ್ದರಿಂದಲೇ ಮೋದಿ ಮತ್ತೊಮ್ಮೆ ಎನ್ನುವುದು ಯಾವುದೇ ಪಕ್ಷದ ಘೋಷಣೆಯಲ್ಲ, ಅದು ಈ ದೇಶದ ಪ್ರತಿಯೊಬ್ಬ ದೇಶಭಕ್ತನ ಘೋಷಣೆಯಾಗಿದೆ.
ತಾವೇಕೆ ಮೋದಿಯವರನ್ನು ಮೆಚ್ಚುತ್ತೇವೆ ಎನ್ನುವುದನ್ನು ಮತ್ತು ತಾವು ಅವರ ಅಭಿಮಾನಿಗಳಾಗಲು ಕಾರಣವಾಗಿರುವ ಅವರ ಸಾವಿರಾರು ಸಾಧನೆಗಳನ್ನು ಪರಿಚಯಿಸಲೆಂದೇ ಇತ್ತೀಚಿಗೆ “ಸಾವಿರ ಸಾಧನೆಗಳ ಸರದಾರ” ಎನ್ನುವ ಘೋಷಣೆಯೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗುವ ಸಾವಿರ ಮೆಟ್ಟಿಲುಗಳ ಮೇಲೆ ಒಂದು ಸಾವಿರ ಮೋದಿ ಅಭಿಮಾನಿಗಳು ಮೋದಿ ಸರ್ಕಾರ ಸಾಧಿಸಿದ ಒಂದು ಸಾವಿರ ಸಾಧನೆಗಳ ಭಿತ್ತಿಪತ್ರಗಳನ್ನು ಪ್ರದರ್ಶಿಸಬೇಕೆನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಒಬ್ಬ ಜನಸಾಮಾನ್ಯನಿಗೆ ತನ್ನ ಅಭಿಮಾನವನ್ನು ಹೇಳಿಕೊಳ್ಳುವ ಅಥವಾ ಸರ್ಕಾರವೊಂದು ತಮಗೇನು ಮಾಡಿದೆ ಎನ್ನುವ ವಿಚಾರವನ್ನು ಇತರರೊಂದಿಗೆ ಹಂಚಿಕೊಳ್ಳುವ ಎಲ್ಲಾ ಹಕ್ಕುಗಳೂ ಇರಲೇಬೇಕು. ಅದಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲ. ಆದರೆ ಹಲವಾರು ಸಾರ್ವಜನಿಕರು ಒಂದು ಕಡೆ ಸೇರುವ ತೀರ್ಮಾನ ಮಾಡಿದ್ದರಿಂದ ಚುನಾವಣಾ ಆಯೋಗದವರ ಒಪ್ಪಿಗೆ ಪಡೆಯುವುದು ಒಳ್ಳೆಯದೆನ್ನುವ ತೀರ್ಮಾನಕ್ಕೆ ಬಂದು ಕೆಲವರು ಅವರ ಅನುಮತಿ ಕೇಳಿದರು. ಆದರೆ ತಾತ್ಕಾಲಿಕವಾಗಿ ಚುನಾವಣಾ ಆಯೋಗದ ಪರವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಆ ಕಾರ್ಯಕ್ರಮ ಮಾಡಲು ಸಾರ್ವಜನಿಕರಿಗೆ ನಿರಾಕರಿಸಿದರು. ಕೊನೆಗೆ ನರೇಂದ್ರ ಮೋದಿಯವರೇ ಪ್ರತಿನಿಧಿಸುವ ಪಕ್ಷದ ಮೂಲಕ ಅನುಮತಿಗಾಗಿ ಕೋರಿಕೆ ಸಲ್ಲಿಸಿ ಅನುಮತಿ ಪಡೆಯಬೇಕಾಯಿತು!
ಅಂದರೆ ಸಾರ್ವಜನಿಕರು ಪಕ್ಷಾತೀತವಾಗಿ ಒಬ್ಬ ನಾಯಕನ ಪರ ಒಂದು ಕಡೆ ಸೇರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಅಥವಾ ಸರ್ಕಾರದ ಯೋಜನೆಗಳ ಬಗ್ಗೆ ಪರಸ್ಪರ ಅಭಿಪ್ರಾಯ ಹಂಚಿಕೊಳ್ಳುವುದು ಅಪರಾಧ!
ಅದಾದ ನಂತರ ಆ ಸಾಧನೆಗಳ ಬಗೆಗೆ ಸಾರ್ವಜನಿಕರೇ ಮುದ್ರಿಸಿಕೊಂಡಿದ್ದ ಪೋಸ್ಟರ್ಗಳಲ್ಲಿ “ಪೀಪಲ್ ಫಾರ್ ಮೋದಿ” ಎನ್ನುವ ಘೋಷ ವಾಕ್ಯದ ಮೇಲೆ ಕೆಂಗಣ್ಣು ಬೀರಿದ ಚುನಾವಣಾ ಆಯೋಗದ ಪರವಾಗಿ ತಾತ್ಕಾಲಿಕವಾಗಿ ಕೆಲಸ ಮಾಡುವ ಅಧಿಕಾರಿಗಳು ಕಾರ್ಯಕ್ರಮಕ್ಕೆ ಅನುಮತಿ ನೀಡಲು ಸತಾಯಿಸಿ ಕೊನೆಗೆ ಆ ಘೋಷ ವಾಕ್ಯವನ್ನೂ ತೆಗೆದುಹಾಕಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದರು.
ಅಂದರೆ ಜನರು ನಾವು ಒಬ್ಬ ನಾಯಕನನ್ನು ಬೆಂಬಲಿಸುತ್ತೇವೆ ಎಂದು ಹೇಳುವುದು ಅಪರಾಧ!
ಅಷ್ಟಕ್ಕೇ ನಿಲ್ಲಲಿಲ್ಲ. ಕಾರ್ಯಕ್ರಮದ ಆರಂಭದಲ್ಲೇ ಪೋಸ್ಟರ್ಗಳನ್ನು ಹಿಡಿದಿದ್ದ ಸಾರ್ವಜನಿಕರನ್ನು ಆ ಪೋಸ್ಟರ್ಗಳಲ್ಲಿ ಯಾವುದೇ ಪಕ್ಷದ ಚಿಹ್ನೆಯಿಲ್ಲದಿದ್ದರೂ ಕೇವಲ ಮೋದಿಯವರ ಚಿತ್ರವಿದೆ ಎನ್ನುವ ಏಕೈಕ ಕಾರಣಕ್ಕೆ ಸಾರ್ವಜನಿಕರು ಓಡಾಡುವ ಜಾಗವಾದ ದೇವಾಲಯಕ್ಕೆ ಹೋಗುವ ಮೆಟ್ಟಿಲುಗಳ ಮೇಲೆ ಹೋಗದಂತೆ ತಡೆಯೊಡ್ಡಿದರು.
ಅಂದರೆ ಸಾರ್ವಜನಿಕರು ತಾವು ಮೆಚ್ಚುವ ಯಾವುದೇ ರಾಜಕಾರಣಿಯ ಚಿತ್ರವನ್ನು ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಒಯ್ಯುವಂತಿಲ್ಲ!
ಆದರೆ ಅದು ಅಷ್ಟಕ್ಕೂ ನಿಲ್ಲಲಿಲ್ಲ. ಯಾವುದೇ ಪೋಸ್ಟರ್ ಕೂಡಾ ಇಲ್ಲದೆ ಮೆಟ್ಟಿಲು ಹತ್ತುತ್ತಿದ್ದ ಸಾರ್ವಜನಿಕರ ಮೈ ಮೇಲಿನ ಬಟ್ಟೆಗಳ ಮೇಲೆಯೂ ಆ ತಾತ್ಕಾಲಿಕ ಚುನಾವಣಾ ಕರ್ತವ್ಯದ ಸಿಬ್ಬಂದಿಗಳ ಕಣ್ಣಿಗೆ ಬಿದ್ದಿತ್ತು. ಥಟ್ ಅಂತ ಹೇಳಿ, ನಮೋ ಎಗೈನ್ ಎನ್ನುವುದೂ ಸೇರಿದಂತೆ ಇನ್ನಿತರ ಮುದ್ರಣಗಳಿದ್ದ ಟೀ -ಶರ್ಟ್ ತೊಟ್ಟಿದ್ದ ಯುವಕರ ಬಟ್ಟೆಗಳನ್ನು ಸಾರ್ವಜನಿಕ ಸ್ಥಳದಲ್ಲೇ ಬಿಚ್ಚಿಸಿ ಅರೆಬೆತ್ತಲೆಗೊಳಿಸಿ ಅದೇ ಟೀ ಶರ್ಟ್ಗಳನ್ನೂ ಒಳಮೈ ಮಾಡಿ ಹಾಕಿಸಿದರು.
ಅಂದರೆ ಪಕ್ಷಾತೀತ ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಯಾವ ಬಣ್ಣದ ಬಟ್ಟೆ ತೊಡಬೇಕು, ಅದರಲ್ಲಿ ಏನಿರಬೇಕು ಏನಿರಬಾರದು ಎನ್ನುವುದನ್ನೂ ಈ ತಾತ್ಕಾಲಿಕ ಸಿಬ್ಬಂದಿಗಳ ಅನುಮತಿ ಪಡೆದೆ ಧರಿಸಿಕೊಳ್ಳಬೇಕು. ಇಲ್ಲದಿದ್ದರೆ ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲೇ ಅರೆಬೆತ್ತಲೆಗೊಳ್ಳಬೇಕಾಗುತ್ತದೆ!
ಅಲ್ಲಿಗೂ ಆ ತಾತ್ಕಾಲಿಕ ಸಿಬ್ಬಂದಿಗಳ ಕರ್ತವ್ಯ ಪ್ರಜ್ಞೆ ಅಂತ್ಯಗೊಳ್ಳಲಿಲ್ಲ. ನಂದಿ ವಿಗ್ರಹದ ಸಮೀಪ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎನ್ನುವ ಘೋಷಣೆ ಕೂಗುತ್ತಿದ್ದ ಯುವಕರ ಬಳಿ ತೆರಳಿ ಆ ಘೋಷಣೆ ಕೂಗದಂತೆ ತಡೆಯಲು ಪ್ರಯತ್ನಿಸಿದರು. ಆದರೆ ಆ ಪ್ರಯತ್ನಕ್ಕೆ ಸೊಪ್ಪು ಹಾಕದಿದ್ದಾಗ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎನ್ನುವ ಘೋಷಣೆ ಕೂಗದಂತೆ ವಿನಂತಿಸಿಕೊಂಡರು!
ಅಂದರೆ ಈ ದೇಶದಲ್ಲಿ ಸಾರ್ವಜನಿಕರು ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎನ್ನುವ ಘೋಷಣೆಯನ್ನೂ ಕೂಗುವಂತಿಲ್ಲ! ಬಹುಷಃ ಇಂತಹಾ ಒಂದು ಪರಿಸ್ಥಿತಿ ಸ್ವಾತಂತ್ರ್ಯ ಪೂರ್ವದಲ್ಲೂ ಇರಲಿಲ್ಲವೆಂದೆನ್ನಿಸುತ್ತದೆ.
ಖಂಡಿತವಾಗಿಯೂ ಇದು ತುರ್ತು ಪರಿಸ್ಥಿತಿಗಿಂತಲೂ ಕೆಟ್ಟ ಪರಿಸ್ಥಿತಿ ಎಂದೆನ್ನಿಸುತ್ತಿಲ್ಲವೇ?
ಪಕ್ಷಾತೀತವಾಗಿ ಸರ್ಕಾರಗಳ ಕಾರ್ಯಗಳನ್ನು ಮೆಚ್ಚುವ ಸಾರ್ವಜನಿಕರು ಚುನಾವಣಾ ಘೋಷಣೆಯಾದಂದಿನಿಂದ ಚುನಾವಣಾ ಫಲಿತಾಂಶ ಘೋಷಣೆಯಾಗುವವರೆಗೂ ಬಾಗಿಲು ಮುಚ್ಚಿಕೊಂಡು ಮನೆಯೊಳಗೇ ಕುಳಿತುಕೊಳ್ಳಬೇಕೇ?
ತಿಳಿದವರು ಉತ್ತರಿಸಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.