ಕಾಂಗ್ರೆಸ್ ಮುಖಂಡರು “ಹಿಂದೂ ಭಯೋತ್ಪಾದನೆ” ಎಂಬ ಪದವನ್ನು ಪ್ರಸಿದ್ಧಿಪಡಿಸಲು ತಮ್ಮಿಂದಾದಷ್ಟು ಪ್ರಯತ್ನಗಳನ್ನು ಮಾಡಿದ್ದರು. ಈಗ, ಕಾಂಗ್ರೆಸ್ ಮತ್ತು ಅದರ ಹಿಂದು ವಿರೋಧಿ ಧೋರಣೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ತೀವ್ರ ಸ್ವರೂಪದ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ. ಇದು 2019ರ ಲೋಕಸಭೆ ಚುನಾವಣೆಯಲ್ಲಿ ಯಾವ ಪರಿಣಾಮವನ್ನು ಬೀರುತ್ತಿದೆ ಎಂಬುದನ್ನು ನಾವು ನೋಡಲಾರಂಭಿಸಿದ್ದೇವೆ.
2019ರ ಲೋಕಸಭೆ ಚುನಾವಣೆಗೆ ಕೆಲವೇ ವಾರಗಳು ಇರುವಂತೆ ಪ್ರಧಾನಿ ಮೋದಿ ಅವರು ವಿರೋಧ ಪಕ್ಷಗಳು ಮತ್ತು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ವಿರುದ್ಧ ಮಿಂಚಿನ ದಾಳಿಯನ್ನು ನಡೆಸುತ್ತಿದ್ದಾರೆ. ನಿನ್ನೆ, ವಾರ್ಧಾದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಹಿಂದೂ ಭಯೋತ್ಪಾದನೆ” ಎಂಬ ಪದವನ್ನು ಸೃಷ್ಟಿ ಮಾಡುವ ಮೂಲಕ ಕಾಂಗ್ರೆಸ್ ಹಿಂದೂಗಳಿಗೆ ಅವಮಾನವನ್ನು ಮಾಡಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದರು.
“ಹಿಂದೂ ಭಯೋತ್ಪಾದನೆ” ಎಂಬ ಪದವನ್ನು ರೂಪಿಸುವ ಮೂಲಕ ಈ ದೇಶದ ಕೋಟ್ಯಾಂತರ ಹಿಂದೂಗಳನ್ನು ಅವಮಾನಿಸಲು ಕಾಂಗ್ರೆಸ್ ಶತ ಪ್ರಯತ್ನವನ್ನು ಮಾಡಿದೆ ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದ್ದಾರೆ. ಹಿಂದೂಗಳು ಭಯೋತ್ಪಾದನೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಒಂದೇ ಒಂದು ಘಟನೆಗಳು ಕೂಡ ನಡೆದಿಲ್ಲ, ಆದರೂ ಹಿಂದೂಗಳನ್ನು ಭಯೋತ್ಪಾದಕರೆಂದು ಬಿಂಬಿಸಲು ಕಾಂಗ್ರೆಸ್ ಹೊರಟಿದ್ದು ದುರಾದೃಷ್ಟಕರ. ಬ್ರಿಟಿಷ್ ಇತಿಹಾಸಕಾರರು ಕೂಡ ಹಿಂದೂಗಳು ಭಯೋತ್ಪಾದಕರು ಮತ್ತು ಹಿಂಸಾಚಾರದಲ್ಲಿ ಪಾಲ್ಗೊಳ್ಳಬಹುದು ಎಂಬುದಾಗಿ ಹೇಳಿರಲಿಲ್ಲ ಎಂದಿದ್ದಾರೆ.
ಪ್ರಧಾನಿ ಮೋದಿ ಅವರ ಕಟುವಾದ ದಾಳಿ ಅಲ್ಲಿಗೆ ನಿಲ್ಲಲಿಲ್ಲ, ಹಿಂದೂ ಅಲ್ಪಸಂಖ್ಯಾತ ಕ್ಷೇತ್ರವಾದ ಕೇರಳದ ವಯನಾಡಿನಿಂದ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿಯವರತ್ತ ತಮ್ಮ ವಾಗ್ ಪ್ರಹಾರ್ವನ್ನು ಮೋದಿ ತಿರುಗಿಸಿದರು.
ಹಿಂದೂಗಳು ಭಯೋತ್ಪಾದಕರು ಎಂದು ಬ್ರ್ಯಾಂಡ್ ಮಾಡಲು ಹೊರಟ ಜನರು ಈಗ ವಾಸ್ತವಕ್ಕೆ ಬಂದಿದ್ದಾರೆ ಎನ್ನುವ ಮೂಲಕ ರಾಹುಲ್ ಅವರಿಗೆ ಟಾಂಗ್ ನೀಡಿದ ಮೋದಿ, ಇಡೀ ವಿಶ್ವವನ್ನು ತಮ್ಮ ಸ್ವಂತ ಕುಟುಂಬವೆಂದು ಪರಿಗಣಿಸುವ ಎಲ್ಲಾ ಜನರನ್ನು ಕಾಂಗ್ರೆಸ್ಸಿಗರು ಭಯೋತ್ಪಾದಕರು ಎಂದು ಬ್ರಾಂಡ್ ಮಾಡಲು ಹೊರಟಿದ್ದರು ಎಂದಿದ್ದಾರೆ.
ಇದೇ ಕಾರಣಕ್ಕಾಗಿ ಇಂದು ಕಾಂಗ್ರೆಸ್ ‘ಬಹುಸಂಖ್ಯಾತ’ ಸ್ಥಾನದಿಂದ ದೂರ ಓಡಿ ಹೋಗಿ ‘ಅಲ್ಪಸಂಖ್ಯಾತ’ ಸ್ಥಾನದಲ್ಲಿ ಆಶ್ರಯವನ್ನು ಹುಡುಕುತ್ತಿದೆ, ಹಿಂದೂ ಬಹುಸಂಖ್ಯಾತರುಳ್ಳ ಅಮೇಥಿಯಿಂದ ಹಿಂದೂ-ಅಲ್ಪಸಂಖ್ಯಾತರ ಸ್ಥಾನ ವಯನಾಡಿಗೆ ತೆರಳಿ ಅಲ್ಲಿ ರಾಹುಲ್ ಗಾಂಧಿಯವರು ಆಶ್ರಯ ಪಡೆದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಹಿಂದೂ ಬಹುಮತ ಹೊಂದಿರುವ ಗಾಂಧಿ ಭದ್ರಕೋಟೆ ಈಗ ನಲುಗುತ್ತಿದೆ ಎಂದರು.
ಕುತೂಹಲಕರ ವಿಷಯವೆಂದರೆ, ಅಲ್ಪಸಂಖ್ಯಾತರು ಇದ್ದಾರೆ ಎಂಬ ಕಾರಣದಿಂದಾಗಿ ರಾಹುಲ್ ಗಾಂಧಿಯವರು ವಯನಾಡಿನಲ್ಲಿ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ ಮತ್ತು ಅಮೇಥಿ ಈ ಬಾರಿ ಅವರಿಗೆ ಸುರಕ್ಷಿತವಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಟೈಮ್ಸ್ ನೌ ನಡೆಸಿದ ಸ್ಟಿಂಗ್ ಆಪರೇಶನ್ನಲ್ಲಿ ಹೇಳಿರುವುದು ಬಹಿರಂಗವಾಗಿದೆ.
ವಯನಾಡು ರಾಹುಲ್ ಗಾಂಧಿಗೆ ಅತ್ಯಂತ ಸುರಕ್ಷಿತ ಕ್ಷೇತ್ರ. ಅಲ್ಲಿನ ಜನರು ಕಾಂಗ್ರೆಸ್ ಮತ್ತು ಸಿಪಿಐ ಮನಸ್ಥಿತಿಯನ್ನು ಹೊಂದಿರುವವರು. ಆದರೆ ಅಲ್ಲಿಂದ ರಾಹುಲ್ ಸ್ಪರ್ಧೆಗಿಳಿಯುತ್ತಿರುವುದರಿಂದ ಸಿಪಿಎಂ ಮತ್ತು ಕಾಂಗ್ರೆಸ್ ಸ್ನೇಹಕ್ಕೆ ಧಕ್ಕೆಯಾಗಿದೆ. ಇಲ್ಲಿ ಇವೆರಡು ಪಕ್ಷಗಳ ನಡುವೆಯೇ ನೇರವಾಗಿ ಹಣಾಹಣಿ ನಡೆಯಲಿದೆ. ಬಿಜೆಪಿಯನ್ನು ವಿರೋಧಿಸುವವರು ಬಿಜೆಪಿ ಇರುವ ಸ್ಥಾನದಲ್ಲೇ ಸ್ಪರ್ಧೆಗಿಳಿಯುವುದನ್ನು ಬಿಟ್ಟು, ನಮ್ಮ ವಿರುದ್ಧ ಹೋರಾಡಲು ರಾಹುಲ್ ಬಂದಿದ್ದಾರೆ ಎಂದು ಕೇರಳ ಸಿಎಂ ಪಿನರಾಯಿ ವಿಜಯನ್ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.
ಅಮೇಥಿ ಜನರು ಕಾಂಗ್ರೆಸ್ ಪಕ್ಷ, ಅದರಲ್ಲೂ ವಿಶೇಷವಾಗಿ ನೆಹರು-ಗಾಂಧಿ ಕುಟುಂಬದ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ವರದಿಯೊಂದರ ಪ್ರಕಾರ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಅಭ್ಯರ್ಥಿ ತನವನ್ನು ಕ್ರಮವಾಗಿ 1991 ಮತ್ತು 1999 ರಲ್ಲಿ ಪ್ರಸ್ತಾಪಿಸಿದ್ದ ವ್ಯಕ್ತಿಯ ಮಗ ರಶೀದ್ ಅವರು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ” ಅವರು ನಮ್ಮ ಮತಗಳನ್ನು ಮಾತ್ರ ಬಯಸುತ್ತಿದ್ದಾರೆ, ಅವರು ನಮ್ಮನ್ನು ಮತ್ತು ಬಿಜೆಪಿಯನ್ನು ಹೆದರಿಸುತ್ತಿದ್ದಾರೆ, ಮೊದಲು ಅವರು ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಕಾರ್ಯ ಮಾಡಬೇಕು’ ಎಂದು ರಶೀದ್ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ನೆಹರು-ಗಾಂಧಿ ಕುಟುಂಬಗಳು ಮುಸ್ಲಿಮರಿಗೆ ಈ ಪ್ರದೇಶದಲ್ಲಿ ಅಧಿಕಾರ ನೀಡಲು ಬಯಸುವುದಿಲ್ಲ ಎಂದು ಅಮೇಥಿಯ ಕೆಲ ಮುಸ್ಲಿಮರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾವು ಇಲ್ಲಿ ಪ್ರಬಲರಾದರೆ, ಭವಿಷ್ಯದಲ್ಲಿ ಮುಸ್ಲಿಮರು ಇಲ್ಲಿಂದ ಸಂಸತ್ ಸದಸ್ಯರಾಗುತ್ತಾರೆ ಮತ್ತು ಮನಗೆ ಬೆದರಿಕೆಯಾಗುತ್ತಾರೆ ಎಂಬ ಭಯ ಅವರಿಗಿದೆ” ಎಂದು ಅಮೇಥಿ ನಿವಾಸಿಯೊಬ್ಬರು ಹೇಳಿಕೊಂಡಿದ್ದಾರೆ. ಮತ್ತೊಬ್ಬ ಸ್ಥಳೀಯ ವ್ಯಕ್ತಿ, ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ, ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಿದ್ದಾನೆ, ಆದರೆ ಇಲ್ಲಿಯವರೆಗೆ ಅವರು ಏನನ್ನೂ ಮಾಡಲಿಲ್ಲ, ಇನ್ನು ಮುಂದೆ ಅವರು ಮಾಡುತ್ತಾರೆ ಎಂಬುದನ್ನು ನಂಬಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ನಾವು ಮೊದಲು ಅಭಿಪ್ರಾಯಪಟ್ಟಂತೆ, ವಯನಾಡಿನಿಂದ ರಾಹುಲ್ ಅವರ ಸ್ಪರ್ಧೆ ಭಾರತೀಯ ನಾಗರೀಕರಿಗೆ ಆಳವಾದ ಸಂದೇಶವೊಂದನ್ನು ರವಾನೆ ಮಾಡಿದೆ. ಪ್ರಧಾನಮಂತ್ರಿಯವರು ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡು ತಮ್ಮ ಮತದಾರರಿಗೆ ಆಳವಾದ ಸಂದೇಶವೊಂದನ್ನು ರವಾನಿಸಿದ್ದಾರೆ. ಇದಕ್ಕೆ ವಿರುದ್ಧ ಎಂಬಂತೆ ಕಾಂಗ್ರೆಸ್ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳಿಲ್ಲದ ಪ್ರದೇಶಕ್ಕೆ ಆದ್ಯತೆ ನೀಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡರು “ಹಿಂದೂ ಭಯೋತ್ಪಾದನೆ” ನಿರೂಪಣೆಯನ್ನು ರೂಪಿಸಲು ಹೋಗಿ ಈಗ ಮುಖ ಕಳೆದುಕೊಂಡಿದ್ದಾರೆ. ಈಗ, ಕಾಂಗ್ರೆಸ್ ಮತ್ತು ಅದರ ಹಿಂದು ವಿರೋಧಿ ಧೋರಣೆಯ ವಿರುದ್ಧ ಪ್ರಧಾನಿಯವರು ಕಟುವಾದ ದಾಳಿಯನ್ನು ಮಾಡುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಇದು ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.