ಮಂಗಳೂರು : ದಕ್ಷಿಣ ಭಾರತದ ಅತ್ಯಂತ ದೊಡ್ಡ ಆರೋಗ್ಯ ಶುಶ್ರೂಷೆ ಸರಣಿಯಾದ ಮಣಿಪಾಲ್ ಎಂಟರ್ಪ್ರೈಸಸ್ನ ಅಂಗವಾದ ಕೆಎಂಸಿ ಹಾಸ್ಪಿಟಲ್ಸ್ ತನ್ನ ವಿಸ್ತಾರವಾದ ಜಾಲದ ಆಂಬ್ಯುಲೆನ್ಸ್ ಸೇವೆ ಮಣಿಪಾಲ್ ಆಂಬ್ಯುಲೆನ್ಸ್ ರೆಸ್ಪಾನ್ಸ್ ಸರ್ವೀಸ್(ಎಂಎಆರ್ಎಸ್-ಮಾರ್ಸ್) ಮತ್ತು ತುರ್ತು ಸಂಖ್ಯೆ 0824 2222 227 ಆರಂಭವನ್ನು ಪ್ರಕಟಿಸಿದೆ. ಎಲ್ಲ ವೈದ್ಯಕೀಯ ತುರ್ತು ಅಗತ್ಯಗಳನ್ನು ಇದು ಪೂರೈಸಲಿದ್ದು ಜೀವಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಅಧಿಕೃತವಾಗಿ ಈ ಸೇವೆ ಶುಕ್ರವಾರ, ಜೂ.೨೬ ರಂದು ಕರ್ನಾಟಕ ರಾಜ್ಯದ ಗೌರವಾನ್ವಿತ ಆರೋಗ್ಯ ಸಚಿವ ಯು. ಟಿ. ಖಾದರ್, ಪೊಲೀಸ್ ಸಂಚಾರ ವಿಭಾಗದ ಸಹಾಯಕ ಆಯುಕ್ತ ಉದಯ್ ಎಂ. ನಾಯಕ್, ಪೊಲೀಸ್ ಸೂಪರಿಂಟೆಂಡೆಂಟ್ ಡಾ. ಶರಣಪ್ಪ.
ತುರ್ತು ಸಂದರ್ಭದಲ್ಲಿ ಸಂಪೂರ್ಣ ನಿರೀಕ್ಷಣೆಯಡಿ ರೋಗಿಯ ಸಾಗಣೆ ಸೌಲಭ್ಯವನ್ನು ಮಾರ್ಸ್ ಪೂರೈಸಲಿದೆ. ಈ ಸೇವೆ ಸುವರ್ಣ ಗಂಟೆಯ ಅವಧಿಯಲ್ಲಿ ಅಮೂಲ್ಯ ಜೀವಗಳನ್ನು ಉಳಿಸಲು ಸಮುದಾಯಕ್ಕೆ ಸಹಾಯ ಮಾಡಲಿದೆ. ವೈದ್ಯಕೀಯ ತೊಂದರೆ ಅಥವ ತುರ್ತು ಸಂದರ್ಭದಲ್ಲಿ ರೋಗಿಗಳು 2222 227 ಕ್ಕೆ ಕರೆ ಮಾಡಬಹುದು. ಅವರಿಗೆ ಕೆಎಂಸಿ ಆಸ್ಪತ್ರೆಯ ತರಬೇತಿ ಹೊಂದಿದ ವೈದ್ಯಕೀಯ ಪ್ರತಿನಿಧಿಗಳು ಅತ್ಯಂತ ಕಡಿಮೆ ಅವದಿಯಲ್ಲಿ ಸೇವೆ ಸಲ್ಲಿಸುವರು.
ಹೆಚ್ಚುವರಿಯಾಗಿ ಮಾರ್ಸ್ ಆರಂಭವಲ್ಲದೆ(ನಾಲ್ಕು ಆಂಬ್ಯುಲೆನ್ಸ್ಗಳು) ಕೆಎಂಸಿ ಚಿಕ್ಕಮಗಳೂರು, ಮಡಿಕೇರಿ, ಉಡ್ಡಾನೆ, ಕುಂಬ್ಳೆ, ಕಾಸರ್ಗೋಡು, ಕಾನಂಗಡ್, ಪರಿಯಾರಂ, ಥಲ್ಲಿಪರಂಬ, ಕಣ್ಣೂರ್ ಮುಂತಾದ ಕಡೆಗಳಲ್ಲಿನ ೧೩ ಇತರೆ ಆಂಬ್ಯುಲೆನ್ಸ್ಗಳೊಂದಿಗೆ ಪಾಲುದಾರಿಕೆ ಹೊಂದಲಿದ್ದು ಮಾರ್ಸ್ ಕನೆಕ್ಟ್ ಎಂಬ ಸೇವೆಯಡಿ ಹೆಚ್ಚಿನ ಸಂಖ್ಯೆಯ ಆಂಬ್ಯುಲೆನ್ಸ್ಗಳ ಸೇವೆಯನ್ನು ಸಾದರಪಡಿಸಲಾಗುವುದು.
ಕೇಂದ್ರೀಕೃತ ದಿನಕ್ಕೆ ೨೪ ಗಂಟೆಯ ಹಾಗೂ ವಾರಕ್ಕೆ ೭ ದಿನಗಳೂ ಕಾರ್ಯನಿರ್ವಹಿಸುವ ಕಾಲ್ಸೆಂಟರ್ ಮತ್ತು ಉತ್ತಮವಾದ ತರಬೇತಿ ಹೊಂದಿರುವ ತುರ್ತು ಪ್ರತಿಕ್ರಿಯಾ ಕೇಂದ್ರದ ವೈದ್ಯರು ತುರ್ತು ಕರೆಗಳಿಗೆ ಉತ್ತರಿಸಿ ಅಗತ್ಯಕ್ಕೆ ತಕ್ಕಂತೆ ಸೇವೆ ನೀಡುತ್ತಾರೆ. ಎಲ್ಲಾ ಆಂಬ್ಯುಲೆನ್ಸ್ ಚಾಲಕರಿಗೆ ಮೂಲ ಜೀವ ಬೆಂಬಲದ ಕಾರ್ಯಕ್ರಮಗಳಲ್ಲಿ ತರಬೇತಿ ನೀಡುವುದರಿಂದ ಅವರು ವಯಸ್ಕರು ಮತ್ತು ಮಕ್ಕಳ ಆರೋಗ್ಯ ತುರ್ತು ಸ್ಥಿತಿಗಳನ್ನು ನಿಭಾಯಿಸಬಲ್ಲವರಾಗಿರುತ್ತಾರೆ. ಏರ್ಕಂಡೀಷನರ್ ಮತ್ತು ಉನ್ನತ ಹೃದಯ ಚಿಕಿತ್ಸೆಯ ಜೀವ ಬೆಂಬಲ ವ್ಯವಸ್ಥೆಯೊಂದಿಗೆ ಈ ಆಂಬ್ಯುಲೆನ್ಸ್ಗಳು ಸಜ್ಜಾಗಿದ್ದು ಇದರಿಂದ ಆಸ್ಪತ್ರೆ ತಲುಪುವ ಮುನ್ನವೇ ರೋಗಿಗಳಿಗೆ ಆಂಬ್ಯುಲೆನ್ಸ್ನಲ್ಲಿಯೇ ಚಿಕಿತ್ಸೆ ಆರಂಭವಾಗುವುದಾದೆ.
ವಿಶೇಷತೆಗಳಲ್ಲಿ ಒಂದಾಗಿರುವ ರೋಗಿ ಕೇಂದ್ರೀಕೃತ ಕಾರ್ಯದ ವಿಸ್ತರಣೆಯಾಗಿ ವೈದ್ಯಕೀಯ ಸೇವೆಯನ್ನು ಅಳವಡಿಸಲಾಗಿದೆ. ರೋಗಿಗಳಿಗೆ ಹೆಚ್ಚು ಉತ್ತಮವಾಗಿ ಸೇವೆ ಸಲ್ಲಿಸಲು ಮಾರ್ಸ್ ನಮಗೆ ಸಹಾಯ ಮಾಡುವುದಲ್ಲದೆ ಆಂಬ್ಯುಲೆನ್ನಲ್ಲಿಯೇ ಹೆಚ್ಚುವರಿ ವೈದ್ಯಕೀಯ ಸೇವೆಗಳ ಸೌಲಭ್ಯ ಲಭಿಸುವಂತೆ ಮಾಡುತ್ತದೆ. ತುರ್ತು ಸ್ಥಿತಿಗಳಲ್ಲಿ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ತುರ್ತು ಸಂಖ್ಯೆ ನಿರ್ದೇಶನಗಳನ್ನು ನೀಡುವುದಲ್ಲದೆ ರೋಗಿಯನ್ನು ನಮ್ಮ ವಿಶ್ವಮಟ್ಟದ ತುರ್ತು ಸೇವೆಗೆ ರವಾನಿಸುವ ಮುನ್ನ ಹೆಚ್ಚುವರಿ ಅವಧಿಯನ್ನು ಅದು ಪೂರೈಸುತ್ತದೆ ಎಂದು ಕೆಎಂಸಿ ಆಸ್ಪತ್ರೆಯ ಘಟಕದ ಮುಖ್ಯಸ್ಥ ಸಾಹೀರ್ ಸಿದ್ಧಿಖಿ ಹೇಳಿದರು.
ವೈದ್ಯಕೀಯ ತುರ್ತು ಸ್ಥಿತಿ ಸಂದರ್ಭದಲ್ಲಿ ಸಮಯ ಬಹಳ ಪ್ರಮುಖವಾದ ಪಾತ್ರವಹಿಸುತ್ತದೆ. ಕ್ಷಿಪ್ರ ಕಾರ್ಯ, ನಿಖರವಾದ ಚಿಕಿತ್ಸೆಯನ್ನು ರೋಗಿ ಆಸ್ಪತ್ರೆಗೆ ಹೋಗುವ ದಾರಿಯಲ್ಲಿಯೇ ನೀಡುವುದು ಅತ್ಯಂತ ಮುಖ್ಯವಾಗಿರುತ್ತದೆ ಅಲ್ಲದೆ ಉತ್ತಮ ಫಲಿತಾಂಶಗಳನ್ನು ಹೆಚ್ಚಿಸಲು ಇದು ನೆರವಾಗುತ್ತದೆ. ಮಾರ್ಸ್ನ ಸಂಪೂರ್ಣ ವೈದ್ಯಕೀಯ ತುರ್ತು ಪರಿಹಾರಗಳು ಅತ್ಯಂತ ಉನ್ನತವಾದ ಸಮಗ್ರ ಸೇವೆ ಮತ್ತು ರೋಗಿಯ ಸಾಗಣೆಯ ಸೌಲಭ್ಯವನ್ನು ವೈದ್ಯಕೀಯ ತುರ್ತು ಸ್ಥಿತಿಯಲ್ಲಿ ನೀಡುತ್ತದೆ. ಎಎಲ್ಎಸ್ ಮತ್ತು ಬಿಎಲ್ಎಸ್ ಆಂಬ್ಯುಲೆನ್ಸ್ಗಳು ನಗರದ ಪ್ರಮುಖ ಸ್ಥಳಗಳಲ್ಲಿ ಹಗಲು ಮತ್ತು ರಾತ್ರಿ ಇರುತ್ತವೆ ಅಲ್ಲದೆ ತೊಂದರೆಯಲ್ಲಿರುವ ರೋಗಿಗಳಿಗೆ ನೇರವಾಗಲಿವೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ|| ಆನಂದ್ ವೇಣುಗೋಪಾಲ್ ಹೇಳಿದರು.
ಮಾರ್ಸ್ ಏಕೆ ಪ್ರತ್ಯೇಕವಾಗಿದೆ?
ಕೇಂದ್ರೀಕೃತ 24 x 7 ಕಾಲ್ ಸೆಂಟರ್ ಮತ್ತು ಉತ್ತಮ ತರಬೇತಿ ಹೊಂದಿರುವ ವೈದ್ಯರು ತುರ್ತು ವೈದ್ಯಕೀಯ ತಂತ್ರಜ್ಞರಿಗೆ ಸಲಹೆ ನೀಡುತ್ತಾರೆ. ಕರೆ ಮಾಡುವವರು/ ಅಟೆಂಡರ್ಗಳು/ ರೋಗಿಯ ಸಂಬಂಧಿಗಳಿಗೆ ತುರ್ತು ವೈದ್ಯಕೀಯ ತಂತ್ರಜ್ಞರು ಅಥವಾ ಕಾಲ್ಸೆಂಟರ್ನಿಂದ ಸಲಹೆ.
ತುರ್ತು ವೈದ್ಯಕೀಯ ತಂತ್ರಜ್ಞರು/ ಚಾಲಕರಿಗೆ ಮೂಲ ಜೀವ ಬೆಭಲ ಕಾರ್ಯದಲ್ಲಿ ತರಬೇತಿಯಿದ್ದು ವಯಸ್ಕರು, ಮಕ್ಕಳು ಮತ್ತು ನವಜಾತ ಶಿಶುಗಳ ತುರ್ತು ಸ್ಥಿತಿಗಳನ್ನು ನಿಭಾಯಿಸಬಲ್ಲರು.ಸಂಪೂರ್ಣ ಏರ್ ಕಂಡೀಷನ್ಡ್ ಉತ್ತಮವಾಗಿ ಸಜ್ಜಾದ ಎಸಿಎಲ್ಎಸ್(ಉನ್ನತ ಹೃದಯ ಜೀವ ಬೆಂಬಲ) ಆಂಬ್ಯುಲೆನ್ಸ್ಗಳು ಮತ್ತು ಬಿಎಸ್ಎಸ್ ಆಂಬ್ಯುಲೆನ್ಸ್ಗಳು.
ಗಂಭೀರ ಸಂದರ್ಭಗಳಲ್ಲಿ ಅಗತ್ಯವಿರುವ ಔಷಧಗಳು, ವೆಂಟಿಲೇಟರ್/ ಡಿಫೈಬ್ರಿಲ್ಲೇಟರ್/ ಸಿರೆಂಜ್ ಪಂಪ್ ಮುಂತಾದವುಗಳೊಂದಿಗೆ ಎಸಿಎಲ್ಎಸ್ ಆಂಬ್ಯುಲೆನ್ಸ್ಗಳು ಸಜ್ಜಾಗಿರುತ್ತವೆ. ಬಿಎಲ್ಎಸ್ ಆಂಬ್ಯುಲೆನ್ಸ್ಗಳಲ್ಲಿ ಇನ್ಬ್ಯುಲ್ಟ್ ಇಸಿಜಿ ಯಂತ್ರಗಳು/ ಸಕ್ಷನ್ ಆಪರೇಟಸ್/ ಗ್ಲೂಕೋ ಮೀಟರ್ ಮುಂತಾದವುಗಳನ್ನು ರೋಗಿ ಸ್ಥಿ ತಿಳಿದುಕೊಳ್ಳುವುದಕ್ಕಾಗಿ ಅಳವಡಿಸಲಾಗಿದೆ.
ತುರ್ತು ಪ್ರತಿಕ್ರಿಯಾ ಕೇಂದ್ರಕ್ಕೆ ರೋಗಿಯ ಸ್ಥಿ ಕುರಿತ ಚಿತ್ರಗಳನ್ನು ರವಾನಿಸಲು ಆಂಬ್ಯುಲೆನ್ಸ್ಗಳಲ್ಲಿ ಕೇಂದ್ರ ನಿರೀಕ್ಷಣಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ.ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಅಗತ್ಯ ಇರುವಲ್ಲಿ ವೈದ್ಯರನ್ನು ಸ್ಥಳಕ್ಕೇ ಕಳುಹಿಸಲಾಗುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.