ಇದೀಗ ಆರ್ಥಿಕವಾಗಿ ಸಾಕಷ್ಟು ಸದೃಢವಾಗಿರುವ ಭಾರತವು ಎಲ್ಲ ರೀತಿಯಲ್ಲೂ ವಿಫಲಗೊಂಡ ನಮ್ಮ ಕೆಲ ಅಕ್ಕ ಪಕ್ಕದ ರಾಷ್ಟ್ರಗಳಿಂದ ಅಕ್ರಮವಾಗಿ ಬಂದು ನೆಲೆಸುವ ವಲಸಿಗರಿಗೊಂದು ಪ್ರಮುಖ ತಾಣವಾಗಿ ಬದಲಾಗುತ್ತಿದೆ.
ಆದ್ದರಿಂದ ನಮಗೀಗ ದೇಶದ ಸ್ಥಿರತೆ ಮತ್ತು ಸಮಗ್ರತೆಯನ್ನು ಗಮನದಲ್ಲಿಟ್ಟುಕೊಂಡು ಭಯಾನಕ ವೇಗದಲ್ಲಿ ಬೆಳೆಯುತ್ತಿರುವ ಪಕ್ಕದ ಪಾಕಿಸ್ಥಾನೀಯರ ಜನಸಂಖ್ಯೆಯ ಮೇಲೊಂದು ಹದ್ದಿನ ಕಣ್ಣಿಡಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ರಾಷ್ಟ್ರ-ರಾಜ್ಯಗಳ ಗಡಿಗಳು ಇಷ್ಟ ಬಂದಂತೆ ಒಂದೆಡೆಯಿಂದ ಇನ್ನೊಂದು ಕಡೆಗೆ ಹರಿದುಬರುವ ಜನರನ್ನು ಕಾನೂನಾತ್ಮಕವಾಗಿ ನಿರ್ಬಂಧಿಸುತ್ತದೆಯಾದರೂ ಹಾಗೆ ಮಾನವ ನಿರ್ಮಿತ ಗಡಿ ರೇಖೆಗಳು ಅಥವಾ ಯಾವುದೇ ಕಾನೂನಾತ್ಮಕ ಅಡೆ ತಡೆಗಳು ಯಾವಾಗಲೂ ಜೀವನಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಉಂಟಾಗಬಹುದಾದ ಮಾನವ ವಲಸೆಗಳನ್ನು ಹತ್ತಿಕ್ಕುವಲ್ಲಿ ಸಫಲವಾಗಲಾರವು.
ಇತ್ತೀಚಿನ ಉದಾಹರಣೆಗಳನ್ನೇ ತೆಗೆದುಕೊಳ್ಳುವುದಾದರೆ ರೋಹಿಂಗ್ಯಾ ಮುಸಲ್ಮಾನರು ದೊಡ್ಡ ಪ್ರಮಾಣದಲ್ಲಿ ಭಾರತದೊಳಕ್ಕೆ ನುಗ್ಗುತ್ತಿದ್ದರೂ ಎಲ್ಲ ರೋಹಿಂಗ್ಯಾ ಮುಸಲ್ಮಾನರನ್ನೂ ಹೊರ ದಬ್ಬುವ ಅಥವಾ ದೇಶದೊಳಕ್ಕೆ ಇರಿಸಿಕೊಳ್ಳುವ ಯಾವುದೇ ನಿರ್ಧಾರಕ್ಕೂ ನಮಗೆ ಇದುವರೆಗೂ ಬರಲು ಸಾಧ್ಯವಾಗಿಲ್ಲ. ಈಗಾಗಲೇ ಬಾಂಗ್ಲಾ ದೇಶೀ ವಲಸಿಗರು ಲಕ್ಷಾಂತರ ಸಂಖ್ಯೆಯಲ್ಲಿ ಕಾಯ್ದೆ ಕಾನೂನುಗಳೆಲ್ಲವನ್ನೂ ಮೀರಿ ಭಾರತದೊಳಗೆ ನುಗ್ಗಿ ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ. ಆ ಅಕ್ರಮ ಬಾಂಗ್ಲಾ ದೇಶೀ ವಲಸಿಗರಿಂದ ದೇಶದ ಮೂಲೆ ಮೂಲೆಗಳಲ್ಲೂ ಅಪರಾಧ ಕೃತ್ಯಗಳು ನಡೆಯುತ್ತಿವೆ. ಹಾಗೆಂದು ಪೂರ್ಣ ಪ್ರಮಾಣದಲ್ಲಿ ಅವರನ್ನು ಹೊರ ದಬ್ಬಲು ಕೂಡಾ ಸಾಧ್ಯವಾಗದಂತೆ ಕೆಲ ಅಂತಾರಾಷ್ಟ್ರೀಯ ಕಾನೂನುಗಳು ನಮ್ಮ ಕೈ ಕಟ್ಟಿ ಹಾಕಿವೆ.
68 ವರ್ಷಗಳ ಹಿಂದೆ ಈಗಿನ ಪಾಕಿಸ್ಥಾನದ ಜನಸಂಖ್ಯೆಯು ಭಾರತದ ಜನಸಂಖ್ಯೆಯ ಶೇ. 9.33 ರಷ್ಟು ಮಾತ್ರವೇ ಇತ್ತು. ಆದರೆ 2017 ರಲ್ಲಿ ನಡೆಸಿದ ಪಾಕಿಸ್ತಾನದ ಜನ ಗಣತಿಯ ಪ್ರಕಾರ ಆ ದೇಶದ ಒಟ್ಟು ಜನಸಂಖ್ಯೆಯು ಸರಿಸುಮಾರು 212.7 ಮಿಲಿಯನ್ ತಲುಪಿದೆ. ಹೆಚ್ಚೆಂದರೆ 197 ಮಿಲಿಯನ್ ಜನಸಂಖ್ಯೆ ಹೊಂದಿರುತ್ತದೆ ಎಂದು ವಿಶ್ವ ಸಂಸ್ಥೆಯು ಅಂದಾಜನ್ನೂ ಮೀರಿ ಪಾಕಿಸ್ಥಾನದ ಜನಸಂಖ್ಯೆ ಬೆಳೆದುಬಿಟ್ಟಿದೆ. ಇದರರ್ಥ ಹಿಂದೆ ಭಾರತದ ಜನಸಂಖ್ಯೆಯ ಶೇ. 9.33 ರಷ್ಟು ಮಾತ್ರವೇ ಇದ್ದ ಪಾಕಿಸ್ಥಾನದ ಜನಸಂಖ್ಯೆಯು ಇದೀಗ ಭಾರತದ ಜನಸಂಖ್ಯೆಯ ಶೇ.15.87 ರಷ್ಟು ತಲುಪಿದೆ.
ತಿನ್ನಲು ಅನ್ನವಿಲ್ಲದ ಬಡ ದೇಶವಾದ ಪಾಕಿಸ್ಥಾನದ ಜನಸಂಖ್ಯೆಯು ಇದೇ ರೀತಿ ಏರುತ್ತಾ ಹೋದರೆ ಮುಂದೊಂದು ದಿನ ಆ ಜನ ಸಂಖ್ಯೆಯೇ ಭಾರತಕ್ಕೆ ಮಾರಕವಾಗಿ ಪರಿಣಮಿಸುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಭಯಾನಕ ವೇಗದಲ್ಲಿ ಬೆಳೆಯುತ್ತಿರುವ ಪಾಕಿಸ್ಥಾನೀ ಜನಸಂಖ್ಯೆ ನಮಗೊಂದು ಎಚ್ಚರಿಕೆಯ ಕರೆ ಗಂಟೆ ಎಂದೇ ಭಾವಿಸಿ ಈಗಿನಿಂದಲೇ ಎಚ್ಚರಿಕೆಯ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.