ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರಾದಲ್ಲಿ ಗುರುವಾರ ನಡೆದ ಭಯೋತ್ಪಾದನಾ ದಾಳಿಯಲ್ಲಿ 40 ಮಂದಿ ವೀರ ಯೋಧರು ಅಮರರಾಗಿದ್ದಾರೆ. ಅವರ ಈ ಬಲಿದಾನ ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ. ಆದರೆ ಕಾಶ್ಮೀರದ ಕೆಲವು ಹೇಡಿ ಮೂಲಭೂತವಾದಿಗಳು ಈ ದುಷ್ಕೃತ್ಯವನ್ನು ಸಂಭ್ರಮಿಸಿ ಭಾರತೀಯರ ಗಾಯಕ್ಕೆ ಉಪ್ಪು ಸವರುವ ಕಾರ್ಯ ಮಾಡಿದ್ದಾರೆ. ಶ್ರೀನಗರದಲ್ಲಿ ಜನರ ಗುಂಪೊಂದು ದಾಳಿಯ ಬಗ್ಗೆ ಸಂಭ್ರಮಾಚರಣೆಯಲ್ಲಿ ತೊಡಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಶ್ಮೀರಿಯೊಬ್ಬ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾನೆ.
Dear brothers being a Kashmiri myself I bow down my head in shame today after I got to know people around me are celebrating the death of 42 @crpfindia Jawans in Terrorist attack at #Pulwama. I’m sorry and I’m deeply pained over the loss of human lives. pic.twitter.com/coiIXncOse
— Ibn Sina (@Ibne_Sena) February 14, 2019
ದೇಶದ ಅತೀದೊಡ್ಡ ಕೇಂದ್ರೀಯ ಶಸ್ತ್ರಾಸ್ತ್ರ ಪಡೆ ಸಿಆರ್ಪಿಎಫ್ ಯೋಧರ ಹತ್ಯೆಯನ್ನು ಇವರು ಸಂಭ್ರಮಿಸಿದ ರೀತಿ ಅವರ ಕೊಳಕು ಮಾನಸಿಕತೆಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ, ಅವರೆಷ್ಟು ನೀಚರು, ಅವರ ಮನಸ್ಸಲ್ಲೆಷ್ಟು ದ್ವೇಷ ಎಂಬ ವಿಷ ಇದೆ ಎಂಬುದಕ್ಕೆ ಈ ವೀಡಿಯೋವೊಂದು ಸಾಕ್ಷಿಯಾಗಿದೆ.
ಕೆಲವು ಸಮಯದಿಂದ ಕಣಿವೆಯಲ್ಲಿ ಭಯೋತ್ಪಾದಕರನ್ನು ಸೇನಾ ಪಡೆಗಳು ಯಶಸ್ವಿಯಾಗಿವೆ ಮಟ್ಟ ಹಾಕುತ್ತಾ ಬಂದಿವೆ. ಬಾರಾಮುಲ್ಲಾವನ್ನು ಜಮ್ಮು ಕಾಶ್ಮೀರದ ಮೊದಲ ಭಯೋತ್ಪಾದನಾ ಮುಕ್ತ ಜಿಲ್ಲೆಯನ್ನಾಗಿಸಿದ್ದು ಸೇನಾ ಪಡೆಗಳ ದೊಡ್ಡ ಸಾಧನೆಯಾಗಿದೆ. ಆದರೆ ನಿನ್ನೆ ನಡೆದ ದಾಳಿಯನ್ನು ಸಂಭ್ರಮಿಸುತ್ತಿರುವ ನೀಚರು, 40 ಮಂದಿ ಸಿಆರ್ಪಿಎಫ್ ಯೋಧರ ಹತ್ಯೆಯಿಂದ ಕಣಿವೆಯಲ್ಲಿ ಮತ್ತೆ ಭಯೋತ್ಪಾದನೆ ಗರಿಗೆದರುತ್ತದೆ ಎಂಬ ಕನಸು ಕಾಣುತ್ತಿರುವಂತೆ ಗೋಚರಿಸುತ್ತಿದೆ.
ವೀಡಿಯೋದಲ್ಲಿ ನೀಚರು ಪಾಕಿಸ್ಥಾನದ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ, ಪಟಾಕಿಗಳನ್ನು ಸಿಡಿಸುತ್ತಿದ್ದಾರೆ. ಆದರೆ ಈ ರೀತಿ ಮಾಡುವ ಮೂಲಕ ನಮ್ಮ ಗೋರಿಯನ್ನು ನಾವೇ ತೋಡಿಕೊಳ್ಳುತ್ತಿದ್ದೇವೆ ಎಂಬ ಅರಿವು ಈ ಮೂಲಭೂತವಾದಿಗಳಿಗೆ ಇದ್ದಂತೆ ಇಲ್ಲ. ಭಾರತೀಯ ಸೇನೆ ತಿರುಗಿ ಬಿದ್ದರೆ ಇವರಿಗೆ ಅಡಗಿಕೊಳ್ಳಲೂ ಜಾಗವಿರುವುದಿಲ್ಲ. ಪ್ರತಿ ಭಾರತೀಯನೂ ಪ್ರತಿಕಾರಕ್ಕಾಗಿ ಹಾತೊರೆಯುತ್ತಿದ್ದಾನೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಭಾರತೀಯ ಸೇನೆಯ ವಿರುದ್ಧ ಕುತಂತ್ರ ರೂಪಿಸಿದ ಯಾರೊಬ್ಬರನ್ನೂ ಜೀವಂತವಾಗಿ ಉಳಿಸಬಾರದು ಎಂಬುದು ಪ್ರತಿ ಭಾರತೀಯನ ಆಶಯವಾಗಿದೆ.
1947ರಲ್ಲಿ ಕಾಶ್ಮೀರದೊಳಗೆ ನುಸುಳಿದ್ದ ಪಾಕಿಸ್ಥಾನಿ ಉಗ್ರರು ಕಾಶ್ಮೀರಿಗರ ಮೇಲೆ ಎಂತಹ ಅಮಾನವೀಯ ಕೃತ್ಯಗಳನ್ನು ಎಸಗಿದ್ದರು ಎಂಬುದನ್ನು ವೀಡಿಯೋದಲ್ಲಿ ಸಂಭ್ರಮಾಚರಣೆ ನಡೆಸುತ್ತಿರುವ ಬುದ್ಧಿ ಇಲ್ಲದ ಮೂಲಭೂತವಾದಿಗಳು ಇಂದಿಗೂ ಅರ್ಥ ಮಾಡಿಕೊಳ್ಳದೇ ಇರುವುದು ವಿಪರ್ಯಾಸವೇ ಸರಿ. ಪ್ರಮುಖವಾಗಿ ಬಾರಾಮುಲ್ಲಾ ಈ ಉಗ್ರರ ಹೀನ ಕೃತ್ಯವನ್ನು ಬಹುವಾಗಿ ಅನುಭವಿಸಬೇಕಾಯಿತು. ಈ ವೇಳೆ ಉಗ್ರರು ಬಹಿರಂಗವಾಗಿಯೇ ಅತ್ಯಾಚಾರ, ಹಲ್ಲೆ, ಕೊಲೆಯಂತಹ ಕೃತ್ಯಗಳನ್ನು ಎಸಗಿದರು. ಈ ವೇಳೆ ಭಾರತೀಯ ಸೇನೆ ಅವರ ನೆರವಿಗೆ ಧಾವಿಸಬೇಕಾಯಿತು. ಒಂದು ವೇಳೆ ಸೇನೆ ಬಾರದೇ ಹೋಗಿದ್ದರೆ ಅವರ ಸ್ಥಿತಿ ಏನಾಗುತ್ತಿತ್ತೋ ದೇವರೇ ಬಲ್ಲ. ಆದರೆ ಇಂದು ಕಾಶ್ಮೀರಿ ಹೋರಾಟಗಾರರು ಎಂದು ಫೋಸ್ ಕೊಡುವವರು ತಮ್ಮನ್ನು ರಕ್ಷಿಸಿದವರ ಮೇಲೆ ನಡೆದ ದಾಳಿಯನ್ನು ಸಂಭ್ರಮಿಸುತ್ತಿದ್ದಾರೆ. ಪುಲ್ವಾಮದಲ್ಲಿ ನಡೆದ ಈ ಭೀಕರ ಕೃತ್ಯ, ಕೇವಲ ಪಾಕಿಸ್ಥಾನದ ವಿರುದ್ಧ ಮಾತ್ರವಲ್ಲ ಪಾಕಿಸ್ಥಾನಿ ಪರವಾದ ಮನಸ್ಥಿತಿಗಳ ಮೇಲೂ ಕ್ರಮ ಜರುಗಿಸುವಂತೆ ಪ್ರೇರೇಪಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.