ಹುಬ್ಬಳ್ಳಿ : ಪ್ರಜ್ಞಾ ಪ್ರವಾಹ ಮತ್ತು ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಯೋಜಕತ್ವದಲ್ಲಿ “ಜ್ಞಾನ ಸಂಗಮ 2019” 2 ದಿನಗಳ ರಾಷ್ಟ್ರೀಯ ಸಮೇಳನ ಫೆಬ್ರವರಿ 14 ಮತ್ತು 15 ರಂದು ಕೆ.ಎಲ್.ಇ. ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಲಿದೆ. ಈ ಸಮಾವೇಶಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕನಾ೯ಟಕ ವಿಶ್ವವಿದ್ಯಾಲಯ, ರಾಣಿಚೆನ್ನಮ್ಮ ವಿಶ್ವವಿದ್ಯಾಲಯ, ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ, ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳೂ ಕೈ ಜೋಡಿಸಿವೆ.
ಪ್ರಜ್ಞಾ ಪ್ರವಾಹ ರಾಷ್ಟ್ರವಾದಿ ಚಿಂತನೆಯವುಳ್ಳ ವಿವಿಧ ಕ್ಷೇತ್ರಗಳ ಸಾಧಕರ, ಚಿಂತಕರ, ವಿಜ್ಞಾನಿಗಳ, ಸಂಶೋಧಕರ, ಶಿಕ್ಷಣ ತಜ್ಞರ, ಪ್ರಾಜ್ಞರ ಸಂಘಟನೆಯಾಗಿದ್ದು, ದೇಶಾದ್ಯಂತ ಉಪನ್ಯಾಸ, ಸಮ್ಮೇಳನಗಳನ್ನು ಆಯೋಜಿಸುತ್ತದೆ. ರಾಷ್ಟ್ರೀಯ ಅಸ್ಮಿತೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
“ಜ್ಞಾನ ಸಂಗಮ” ಉಪಕ್ರಮವನ್ನು 2016 ರಲ್ಲಿ ಪ್ರಾರಂಭಿಸಿದ್ದು ಇಲ್ಲಿಯವರೆಗೆ ವಿವಿಧೆಡೆ ಸಮಾವೇಶಗಳನ್ನು ನಡೆಸಲಾಗಿದೆ. ಈ ಬಾರಿಯ ಹುಬ್ಬಳ್ಳಿಯ ಸಮಾವೇಶ”ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ, ಉದ್ಯಮಶೀಲತೆ” ವಿಷಯಾಧಾರಿತವಾಗಿದೆ.
ಉದ್ಘಾಟನಾ ಸಮಾರಭ
ಈ ಬಾರಿಯ “ಜ್ಞಾನ ಸಂಗಮ” ಸಮಾವೇಶ ಫೆಬ್ರವರಿ 14 ಮತ್ತು 15 ರಂದು ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯ(ಬಿ.ವಿ.ಬಿ) ಆವರಣದ ದೇಶಪಾಂಡೆ ಫೌಂಡೇಶನ್ ಸಭಾಂಗಣದಲ್ಲ್ಲಿ ನಡೆಯಲಿದ್ದು. ಫೆಬ್ರವರಿ 14 ರಂದು ಕೇಂದ್ರ ಸರ್ಕಾರದ ವಿಜ್ಞಾನ, ತಂತ್ರಜ್ಞಾನ, ಪರಿಸರ, ಅರಣ್ಯ, ಹವಾಮಾನ ಮತ್ತು ಭೂವಿಜ್ಞಾನಗಳ ಸಚಿವ ಡಾ|| ಹರ್ಷವರ್ಧನ್ ಅವರು ಉದ್ಘಾಟಿಸಲಿದ್ದಾರೆ. ಡಾ|| ಹರ್ಷವರ್ಧನ್ ಮೂಲತಃ ವೈದ್ಯರಾಗಿದ್ದು, ಭಾರತ ಸರ್ಕಾರದ ಕ್ರಾಂತಿಕಾರಿ ಕಾರ್ಯಕ್ರಮ “ಪಲ್ಸ್ ಪೋಲಿಯೋ” ಇವರದೇ ಕಲ್ಪನೆ.
ನ್ಯೂಯಾರ್ಕನ ಆರ್.ಐ.ಟಿ. ಕಾಲೇಜಿನ ಪ್ರೊಫೆಸರ್ ಡಾ|| ಪಿ. ಆರ್. ಮುಕುಂದ ಆಶಯ ಭಾಷಣ ಮಾಡಲಿದ್ದಾರೆ. ಡಾ|| ಪಿ. ಆರ್. ಮುಕುಂದ ಸಂಶೋಧಕರಾಗಿದ್ದು ಇವರ ಅನೇಕ ಪ್ರಬಂಧಗಳು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅಮೇರಿಕಾ ಮತ್ತು ಭಾರತದಲ್ಲಿ ತಾರಾ ಪ್ರಕಾಶನ ಎಂಬ ಸಂಸ್ಥೆ ಹುಟ್ಟುಹಾಕಿ ಭಾರತದ ಅನೇಕ ಪ್ರಾಚೀನ ಗ್ರಂಥಗಳ ಸಂರಕ್ಷಣೆ, ಪರಿಷ್ಕಾರ, ಪ್ರಕಟಣೆ ಮುಂತಾದವುಗಳನ್ನು ತಮ್ಮ ಪ್ರಕಾಶನದ ಮೂಲಕ ಮಾಡಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೆ.ಎಲ್. ಇ. ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ|| ಅಶೋಕ ಶೆಟ್ಟರ್, ಕನಾ೯ಟಕ ವಿಶ್ವವಿದ್ಯಾಲಯದ ಕುಲಪತಿ ಡಾ|| ಪ್ರಮೋದ ಗಾಯಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ|| ಕರಿಸಿದ್ದಪ್ಪ ಭಾಗವಹಿಸಲಿದ್ದಾರೆ.
ಮೊದಲ ದಿನದ ಉಪನ್ಯಾಸಗಳು
1. ಭಾರತದ ಹಿರಿಮೆ: ವಿಜ್ಞಾನ ಭಾರತಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಜಯಂತ ಸಹಸ್ರಬುದ್ಧೆ “ಭಾರತದ ಹಿರಿಮೆ” ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
2. ಜನೋಪಯೋಗಿ ತಾಂತ್ರಿಕ ಆವಿಷ್ಕಾರಗಳು : ಜನೋಪಯೋಗಿ ಆವಿಷ್ಕಾರಗಳನ್ನು ಮಾಡಿದ ಆಯ್ದ 5 ಜನ ಸಾಧಕರಿಂದಲೂ ಉಪನ್ಯಾಸ ಇರಲಿದ್ದು, ಪರಾಗ್ ನಾಯ್ಕ, ಸೆಂಥಿಲ್ಕುಮಾರ್, ದಿವ್ಯೇಶ್ ಶಹಾ, ಅನೂಪ ಭಾರ್ಗವ ತಮ್ಮ ಆವಿಷ್ಕಾರಗಳ ಕುರಿತು ಮಾತನಾಡಲಿದ್ದಾರೆ, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ|| ಪ್ರಮೋದ ಗಾಯಿ ಇದನ್ನು ನಡೆಸಿಕೊಡಲಿದ್ದಾರೆ.
3. ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮದಲ್ಲಿ ಹೊಸತನ ಮತ್ತು ಆವಿಷ್ಕಾರ: “ವಿಜ್ಞಾನ, ತಂತ್ರಜ್ಞಾನ ಮತ್ತುಉದ್ಯಮದಲ್ಲಿ ಹೊಸತನ ಮತ್ತು ಆವಿಷ್ಕಾರ” ಕುರಿತು ವಿಶೇಷ ಸಂವಾದ ನಡೆಯಲಿದ್ದು. ಮಾಹಿತಿ ತಂತ್ರಜ್ಞ, ಲೇಖಕ, ಸಾಮಾಜಿಕ ಜಾಲತಾಣ ಉತ್ಸಾಹಿ ಕಿರಣ್ ಕೆ. ಎಸ್. ಕಿರಣ್ಕುಮಾರ್, ಫೈನ್ಟೆಕ್ ಪ್ರೊಫೆಷನಲ್ನ ವಿಶಾಲ್ ಕೇಲ್ಕರ್, ಕನಾ೯ಟಕ ವಿಶ್ವವಿದ್ಯಾಲಯದ ಕುಲಪತಿಡಾ|| ಪ್ರಮೋದ ಗಾಯಿ ಭಾಗವಹಿಸಲಿದ್ದಾರೆ.
4. ಭಾರತೀಯ ಸಂಗೀತ ಮತ್ತು ನಾಟ್ಯಶಾಸ್ತ್ರದ ವಿಜ್ಞಾನ : ಸಂಜೆ ಭಾರತೀಯ ಸಂಗೀತ ಮತ್ತು ನಾಟ್ಯಶಾಸ್ತ್ರದ ವಿಜ್ಞಾನಕುರಿತು ಪ್ರಾತ್ಯಕ್ಷಿಕೆಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ|| ಶಾಂತಾರಾಂ ಹೆಗಡೆ ಮತ್ತು ಹೆಸರಾಂತ ಭರತನಾಟ್ಯ ಕಲಾವಿದೆ ಡಾ|| ಸಹನಾ ಭಟ್ ನಡೆಸಿಕೊಡಲಿದ್ದಾರೆ.
ಎರಡನೆಯ ದಿನದ ಕಾರ್ಯಕ್ರಮಗಳು
5. ಯೋಗ ಪ್ರಾತ್ಯಕ್ಷಿಕೆ : 15 ರಂದು ಬೆಳೆಗ್ಗೆ 6 ಗಂಟೆಗೆ ಹೆಸರಾಂತ ಯೋಗಪಟು, ಯೋಗ ಶಿಕ್ಷಕ ಬೆಳಗಾವಿಯ ಡಾ|| ಅಭಯ ಕೇಸ್ತೆ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಿದ್ದಾರೆ.
6. ಆವಿಷ್ಕರ್ತನ ಆಂತರ್ಯ : ಯುವ ಉದ್ಯಮಿಗಳಾದ ಅಮಿತ ವರ್ಣೆಕರ, ಅಜಯ್ರಾವಲ್, ಗಿರಿಶ ಭಂಡಾರಕೊಂಡ, ನಿರಂಜನಕಾರಗಿ ತಮ್ಮ ಅನುಭವಗಳನ್ನು ಬಿಚ್ಚಿಡಲಿದ್ದಾರೆ.
7. ಶಿಕ್ಷಣ ಕ್ಷೇತ್ರದ ಆವಿಷ್ಕಾರಗಳು: ಶಿಕ್ಷಣ ಕ್ಷೇತ್ರದ ಆವಿಷ್ಕಾರಗಳ ಕುರಿತು ಗೋಷ್ಠಿ ನಡೆಯಲಿದ್ದು ಕೆ.ಎಲ್.ಇ. ವಿಶ್ವವಿದ್ಯಾಲಯದ ಕುಲಪತಿ ಡಾ|| ಅಶೋಕ ಶೆಟ್ಟರ್, ವಂದೇ ಮಾತರಂ ಶಾಲೆಗಳ ಸಂಸ್ಥಾಪಕ ಶ್ರೀ ಶಿವಾ ರೆಡ್ಡಿ ಹಾಗೂ ಹೆಸರಾಂತ ಶಿಕ್ಷಣ ತಜ್ಞ ಡಾ||ಅರವಿಂದಚಿ ಚುರೆ ಭಾಗವಹಿಸಲಿದ್ದಾರೆ.
8. ದೂರದೃಷ್ಟಿಯಿಂದ ವಾಸ್ತವದೆಡೆಗೆ : ಯೋಜನೆಗಳು ಮತ್ತವುಗಳ ಅನುಷ್ಠಾನ ಕುರಿತು ಸಂವಾದವಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ|| ಕರಿಸಿದ್ದಪ್ಪ, ದೇಶಪಾಂಡೆ ಫೌಂಡೇಷನ್ನ ವಿವೇಕ ಪವಾರ, ಡಾ|| ಅನಿತಾ ಗುಪ್ತಾ ಮತ್ತು ಗೌರವ್ ಕಪೂರ ಭಾಗವಹಿಸಲಿದ್ದಾರೆ.
ಸಾಧಕರಿಗೆ ಸನ್ಮಾನ
ಆವಿಷ್ಕಾರ, ಕಾರ್ಯಕ್ರಮ, ಯೋಜನೆಗಳ ಮೂಲಕ ಜನೋಪಯೋಗಿ ಕಾರ್ಯಗಳನ್ನು ಮಾಡಿದ, ಬೆಳಕಿಗೆ ಬಾರದ ಹಲವು ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಸಮಾರೋಪ ಸಮಾರಂಭ
ಫೆಬ್ರವರಿ 15 ರಂದು ಸಾಯಂಕಾಲ ಸಮಾರೋಪ ಸಮಾರಂಭ ನಡೆಯಲಿದ್ದು ಪ್ರಜ್ಞಾ ಪ್ರವಾಹದ ಮುಖ್ಯಸ್ಥ ಶ್ರೀ ನಂದಕುಮಾರ್ ಜೀ ಸಮಾರೋಪ ಭಾಷಣ ಮಾಡಲಿದ್ದಾರೆ.
ಈ ಕಾರ್ಯಕ್ರಮ ತಾಂತ್ರಿಕ ವಿದ್ಯಾಥಿಗಳಿಗೆ, ವಿದ್ವಾಂಸರಿಗೆ, ಸಂಶೋಧನಾ ವಿದ್ಯಾಥಿಗಳಿಗೆ ಉಪಯೋಗಿಯಾಗಿದ್ದು ಆಸಕ್ತರು http://gyansangam.in ನಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಜಗದೀಶ್ ಹಿರೇಮಠ +91 98807 66984, ಸುಶಾಂತ ಜೋಶಿ +91 98866 35260, ನವೀನ +91 77956 83851.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.