ಏಕಾಂಗಿಯಾಗಿ ಬೆಟ್ಟವನ್ನು ಅಗೆದು ರಸ್ತೆ ನಿರ್ಮಾಣ ಮಾಡಿದ ಬಿಹಾರದ ದಶರಥ ಮಾಂಝಿ ಅವರ ಕಥೆ ನಮಗೆಲ್ಲರಿಗೂ ತಿಳಿದಿದೆ. ಅವರ ಶ್ರದ್ಧೆ, ಆಸಕ್ತಿ, ಕಾಳಜಿ ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣಾ ಶೀಲ. ಇವರಂತೆಯೇ ಲಡಾಖ್ನಲ್ಲೂ ಒಬ್ಬರು ಶ್ರಮಜೀವಿ ಇದ್ದಾರೆ. ಅವರನ್ನು ’ಲಡಾಖ್ ಮಾಂಝೀ’ ಎಂದೇ ಕರೆಯಲಾಗುತ್ತದೆ. 38 ಕಿಲೋ ಮೀಟರ್ ಉದ್ದದ ರಸ್ತೆಯನ್ನು ನಿರ್ಮಾಣ ಮಾಡುವ ಸಲುವಾಗಿ ಇವರು ತಮ್ಮ ಜೀವಮಾನದ ಉಳಿತಾಯ ಮತ್ತು ಪೂರ್ವಜರ ಆಸ್ತಿಯನ್ನೇ ಮಾರಾಟ ಮಾಡಿದ್ದಾರೆ.
ಪ್ರೀತಿಯಿಂದ ‘ಮೆಮೆ ಚೋನ್ಜರ್’ ಎಂದು ಕರೆಯಡಲ್ಪಡುವ 75 ವರ್ಷದ ತ್ಸುಲ್ತ್ರಿಮ್ ಚೋನ್ಜೊರ್, ಲಡಾಖ್ನ ಝಂನ್ಸ್ಕರ್ ಕಣಿವೆಯ ಸ್ತೋಂಗ್ಡೆ ಗ್ರಾಮದವರಾಗಿದ್ದಾರೆ. ಮಾಂಝೀ ಸರ್ಕಾರಿ ಉದ್ಯೋಗಿ, 1965ರಿಂದ 2000ವರೆಗೆ ಕರಕುಶಲ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಊರು ಕುಗ್ರಾಮದಲ್ಲಿದ್ದು, ಭಾರತದ ಇತರ ಭಾಗಗಳಿಂದ ಸಂಪರ್ಕ ಕಡಿದುಕೊಂಡಿದೆ. ಇದರ ಫಲವಾಗಿ, ಕಾರ್ಗಿಲ್ ಜಿಲ್ಲೆಯಲ್ಲಿರುವ, ಸಮುದ್ರ ಮಟ್ಟದಿಂದ 11,500ರಿಂದ 23,000 ಅಡಿಯವರೆಗೆ ಎತ್ತರದಲ್ಲಿರುವ ಝಂನ್ಸ್ಕರ್ ಸ್ಥಳಿಯ ಮತ್ತು ರಾಜ್ಯದ ಆಡಳಿತಗಳ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು.
ಕಳೆದ ವರ್ಷ, ಬಾರ್ಡರ್ ರೋಡ್ಸ್ ಆರ್ಗನೈಝೇಶನ್ 140 ಕಿಮೀ ಉದ್ದದ ಹಿಮಾಚಲ ಪ್ರದೇಶದ ದರ್ವಾದಿಂದ ಝಂನ್ಸ್ಕರ್ ಆಡಳಿತ ಕೇಂದ್ರ ಪದಂ ಟೌನ್ಗೆ 16,500 ಅಡಿಯ ಶಿಂಕುಲಾ ಪಾಸ್ ಮೂಲಕ ರಸ್ತೆ ನಿರ್ಮಾಣ ಪೂರ್ಣಗೊಳಿಸಿದೆ. ಪದಂನಿಂದ ರಸ್ತೆ ಲೇಹ್ನ ನಿಮೂ ಗ್ರಾಮ ತಲಪುತ್ತದೆ.
ಇಲ್ಲಿ ಸಣ್ಣ ವಾಹನಗಳು ಮಾತ್ರ ಚಲಿಸಬಹುದಾದರೂ, ಈ ರಸ್ತೆ ಕೇವಲ ನಾಗರಿಕರ ಉದ್ದೇಶ ಮಾತ್ರವಲ್ಲ ಮೂಲಸೌಕರ್ಯದ ದೃಷ್ಟಿಯಿಂದಲೂ ಅತ್ಯಂತ ಅವಶ್ಯಕವಾಗಿದೆ. ಇತ್ತೀಚಿನ ಚೀನಾ ಅತಿಕ್ರಮಣದ ಬಳಿಕ, ಪಡೆಗಳ ಸುಲಲಿತ ಚಲನವಲನಕ್ಕೆ ಈ ಪ್ರದೇಶಗಳನ್ನು ರಸ್ತೆಗಳ ಸಂಪರ್ಕಿಸುವುದು ಶಸ್ತ್ರಾಸ್ತ್ರ ಪಡೆಗಳಿಗೆ ಅತೀ ಅವಶ್ಯಕವಾಗಿಯೂ ಪರಿಣಮಿಸಿತ್ತು.
ಪೂರ್ವ ಪಂಜಾಬ್, ಲೇಹ್, ಲಹೌಲ್ಗಳ ಸುರಕ್ಷತೆಯ ದೃಷ್ಟಿಯಿಂದ ಝಂನ್ಸಕರ್ನ ಸುರಕ್ಷತೆಯೂ ಅತೀ ಪ್ರಮುಖವಾದುದಾಗಿದೆ. ಇಲ್ಲಿ ಅತಿಕ್ರಮಣಗಳು ಹೆಚ್ಚಾಗಿ ನಡೆಯುವ ಸಾಧ್ಯತೆಗಳ ಬಗ್ಗೆ ತಜ್ಞರು ಎಚ್ಚರಿಸುತ್ತಲೇ ಇದ್ದರು. ಇಲ್ಲಿ ರಸ್ತೆ ನಿರ್ಮಾಣ ಮಾಡಲು ಭಾರೀ ಒತ್ತಾಯಗಳೂ ಕೇಳಿ ಬಂದಿದ್ದವು. ಆದರೆ ಆಡಳಿತ ಕಣ್ಣು ಮುಚ್ಚಿ ಕುಳಿತಿತ್ತು.
ಎಲ್ಲರಂತೆ ಚೊಂನ್ಜೋರ್ ಅವರಿಗೂ ಕಾದು ಕಾದು ಸುಸ್ತಾಗಿ, ಕೊನೆಗೆ ಅವರೇ ಏಕಾಂಗಿಯಾಗಿ ರಸ್ತೆ ನಿರ್ಮಾಣ ಮಾಡಲು ಮುಂದಾದರು. ತಮಗಾಗಿ ಅಲ್ಲ, ತಮ್ಮ ಗ್ರಾಮಸ್ಥರಿಗಾಗಿ, ಉಳಿದ ಭಾಗಗಳಿಗಾಗಿ.
2014ರಿಂದ 2017ರವರೆಗೆ ಅವರು ಏಕಾಂಗಿಯಾಗಿ 38 ಕಿಮೀ ರಸ್ತೆಯ ನಿರ್ಮಾಣ ಮಾಡಲು ಮುಂದಾದರು, ರಾಜ್ಮೋಕ್ನಿಂದ ಶಿಂಕುಲಾ ಪಾಸ್ ಮೂಲಕ ರಸ್ತೆ ನಿರ್ಮಾಣಕ್ಕೆ ಮುಂದಾದರು. ಇದಕ್ಕಾಗಿ ತಮ್ಮ ಕೈಯಿಂದಲೇ ಅವರು ರೂ.57 ಲಕ್ಷಗಳನ್ನು ವ್ಯಯಿಸಿದ್ದಾರೆ. ಇದಕ್ಕಾಗಿ ಪೂವರ್ಜರ ಆಸ್ತಿಯನ್ನು, ತಪ್ಪು ಉಳಿತಾಯವನ್ನು ಬಳಸಿಕೊಂಡಿದ್ದಾರೆ. ಈಸಿಬಿ ಮೆಶಿನ್ ತರಿಸಿ, ಐದು ಕತ್ತೆಗಳ ಸಹಾಯ ಪಡೆದು ರಸ್ತೆ ನಿರ್ಮಾಣದಲ್ಲಿ ತೊಡಗಿದರು. ಈ ಭಾಗದಲ್ಲಿ ಬಳಿಕ ಬಾರ್ಡರ್ ರೋಡ್ಸ್ ಆರ್ಗನೈಝೇಶನ್ ರಸ್ತೆಯನ್ನು ಅಗಲ ಮಾಡುವ ಪ್ರಕ್ರಿಯೆ ನಡೆಸಿತು.
ರಸ್ತೆ ನಿರ್ಮಾಣದ ಪರವಾಗಿದ್ದ ಕೆಲವರಿಂದ ಅವರು ಅನುದಾನ ಪಡೆದರು. ಸ್ಥಳಿಯ ಕೌನ್ಸಿಲರ್ 5 ಲಕ್ಷ ರೂಪಾಯಿ, ಸ್ಥಳಿಯ ವ್ಯಾಪಾರಿ 2.5ಲಕ್ಷ ಮತ್ತು ಇತರ ಸ್ಥಳಿಯರು ಒಂದಿಷ್ಟು ಹಣವನ್ನು ಇದಕ್ಕಾಗಿ ನೀಡಿದರು. ರಸ್ತೆ ನಿರ್ಮಾಣ ಮಾಡುವಾಗ ಆರಂಭಿಕ ತಡೆಯೂ ಎದುರಾಯಿತು. ಹಣ ಎಲ್ಲಿಂದ ಬಂತು ಎಂದು ಪೊಲೀಸರೂ ತನಿಖೆ ನಡೆಸಿದರು. ವಿವರಿಸಿದ ಬಳಿಕ ಸಮ್ಮತಿ ನೀಡಿದರು. ಬಳಿಕ ಹವಮಾನದ ಸಮಸ್ಯೆಯೂ ಎದುರಾಗಿತು. ಚಳಿಯ ತೀವ್ರತೆಯಿಂದ ಆರೋಗ್ಯ ಪದೇ ಪದೇ ಕೈಕೊಟ್ಟಿತು ಆದರೂ ಚೊಂನ್ಜೋರ್ ರಸ್ತೆ ನಿರ್ಮಿಸಿಯೇ ಬಿಟ್ಟರು.
ಮೊನ್ನೆ ಗಣರಾಜ್ಯೋತ್ಸವದಂದು ಚೊಂನ್ಜೋರ್ ಅವರಿಗೆ ಲಡಾಖ್ ಅಟೋನಮಸ್ ಹಿಲ್ ಡಿವಲಪ್ಮೆಂಟ್ ಕೌನ್ಸಿಲ್ ಸನ್ಮಾನವನ್ನೂ ಮಾಡಿತು. ವಿವಿಧ ಸಂಘ ಸಂಸ್ಥೆಗಳು, ಅಧಿಕಾರಿಗಳು ಇವರ ಕಾರ್ಯವನ್ನು ಕೊಂಡಾಡಿದ್ದಾರೆ. ಇವರು ನಿರ್ಮಾಣ ಮಾಡಿದ ರಸ್ತೆಯ ಮೂಲಕವೇ ಬಾರ್ಡರ್ ರೋಡ್ಸ್ ಆರ್ಗನೈಝೇಶನ್ ರಸ್ತೆಯನ್ನು ವಿಸ್ತರಣೆ ಮಾಡಿದೆ.
source: the betterindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.