ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ಐದೇ ವರ್ಷಗಳಲ್ಲಿ ಭಾರತವನ್ನು ಶರವೇಗದ ಅಭಿವೃದ್ಧಿಯ ಹಳಿಯ ಮೇಲೆ ತಂದು ಕೂರಿಸಿದೆ.ಅದರಲ್ಲೂ ಅತ್ಯಂತ ಹಳೆಯ ವ್ಯವಸ್ಥೆಯನ್ನು ಹೊಂದಿದ್ದ ಭಾರತೀಯ ರೈಲ್ವೆ ಸೇವೆಗಳಲ್ಲಿ ಭಾರೀ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರವು ಸದ್ಯ ಬುಲೆಟ್ ಟ್ರೈನ್ ಸೇರಿದಂತೆ ಹಲವು ಅತ್ಯಾಧುನಿಕ ಸಾರಿಗೆ ಸೌಲಭ್ಯಗಳನ್ನು ಆರಂಭಿಸುವ ಗುರಿ ಹೊಂದಿದೆ.
ಅದೇ ಉತ್ಸಾಹದಲ್ಲಿ ಮೇಕ್ ಇನ್ ಇಂಡಿಯಾದ ಅಡಿ ಅಭಿವೃದ್ಧಿ ಪಡಿಸಲಾದ ಟ್ರೈನ್-18(ವಂದೇ ಭಾರತ್) ಪರೀಕ್ಷಾರ್ಥ ಸಂಚಾರದ ವೇಳೆ ದುಷ್ಕರ್ಮಿಗಳು ವೇಗವಾಗಿ ಚಲಿಸುತ್ತಿದ್ದ ರೈಲಿನ ಮೇಲೆ ನಿನ್ನೆ ಮತ್ತೆ ಕಲ್ಲನ್ನು ಎಸೆದಿದ್ದಾರೆ. ಹೌದು ಮತ್ತೊಮ್ಮೆ ಕಲ್ಲೆಸೆದಿದ್ದಾರೆ. ಈ ಹಿಂದೆ ರೈಲಿನ ಅಧಿಕೃತ ಸೇವೆಗೆ ಇನ್ನು ಒಂದು ವಾರ ಬಾಕಿ ಇದೆ ಎನ್ನುವಾಗಲೇ ಪರೀಕ್ಷಾರ್ಥ ಓಡಾಟದ ವೇಳೆಯಲ್ಲಿ ಕೆಲವು ದುಷ್ಕರ್ಮಿಗಳು ಟ್ರೈನ್-18 ಮೇಲೆ ಕಲ್ಲುತೂರಾಟ ನಡೆಸಿ ಅಟ್ಟಹಾಸ ಮೆರೆದಿದ್ದರು. ಪರೀಕ್ಷಾರ್ಥ ಚಾಲನೆ ಆಗಿದ್ದರಿಂದ ರೈಲಿನ ಪ್ರಯಾಣಿಕರ ಸೀಟುಗಳಲ್ಲಿ ಯಾರು ಇರದಿದ್ದ ಕಾರಣ ಆಗ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.
ಪರೀಕ್ಷಾರ್ಥ ಸಂದರ್ಭದಲ್ಲಿ ವೇಗದ ಹೊಸ ರೈಲು ಸೇವೆಯ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಟ್ರೈನ್ 18 ಸಂಖ್ಯೆಯನ್ನು ಹೆಚ್ಚಳ ಮಾಡಲು ನಿರ್ಧರಿಸಿದ್ದ ಕೇಂದ್ರ ರೈಲ್ವೆ ಮಂಡಳಿಯು 2019ರ ಕೊನೆಯ ಒಳಗೆ ದೇಶದ ವಿವಿಧ ನಗರಗಳನ್ನು ಸಂಪರ್ಕಿಸಲು ಒಟ್ಟು ಹತ್ತು ಕಡೆಗಳಲ್ಲಿ ಟ್ರೈನ್ 18 ಓಡಿಸಲು ನಿರ್ಧರಿಸಿತ್ತು.
ಆದರೆ ಇದೀಗ ಪರೀಕ್ಷಾರ್ಥ ಓಡಾಟಕ್ಕಾಗಿ ಶಾಕೂರ್ ಬಸ್ತಿಯಿಂದ ದೆಹಲಿಗೆ ರೈಲು ಆಗಮಿಸುತ್ತಿದ್ದಾಗ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಕಲ್ಲು ಎಸೆದ ಪರಿಣಾಮ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಲ್ಪಟ್ಟ ಭಾರತದ ಹೆಮ್ಮೆಯ ಟ್ರೈನ್-18 ನ ಕಿಟಕಿಯ ಗಾಜು ಒಡೆದುಹೋಗಿದೆ. ಒಂದು ವೇಳೆ ಪ್ರಯಾಣಿಕರಿರುತ್ತಿದ್ದರೆ ಸಾವು ನೋವುಗಳು ಸಂಭವಿಸುವ ಸಾಧ್ಯತೆಯಿತ್ತೆನ್ನುವುದನ್ನು ಖಂಡಿತವಾಗಿಯೂ ಅಲ್ಲಗಳೆಯುವಂತಿಲ್ಲ.
ಹಾಗಾದರೆ ಭಾರತವೇ ಹೆಮ್ಮೆ ಪಡುವ ರೀತಿಯಲ್ಲಿ ಸಂಪೂರ್ಣ ಭಾರತದಲ್ಲೇ ನಿರ್ಮಾಣವಾಗಿರುವ ವಿಶ್ವ ದರ್ಜೆಯ ಸೌಲಭ್ಯ ಹೊಂದಿರುವ ಅತ್ಯಾಕರ್ಷಕ ವೇಗದ ರೈಲಿನ ಮೇಲೆ ಭಾರತೀಯರಲ್ಲೇ ಕೆಲವರು ಏಕೆ ಕಲ್ಲು ತೂರುತ್ತಿದ್ದಾರೆ? ಅಷ್ಟಕ್ಕೂ ನಮ್ಮದೇ ನಿರ್ಮಾಣದ ವಿಶ್ವ ದರ್ಜೆಯ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿ ಅಪಘಾತಗಳಾಗುವಂತೆ ಮಾಡಿ ಆ ರೈಲು ಸೇವೆ ಯಶಸ್ವಿಯಾಗದಂತೆ ತಡೆಯುವ ಪ್ರಯತ್ನದ ಹಿಂದಿರುವ ಕಾಣದ ಕೈಯಾದರೂ ಯಾವುದು ಎನ್ನುವುದನ್ನು ಊಹಿಸಿಕೊಳ್ಳುವುದಕ್ಕೂ ಮೊದಲು ಟ್ರೈನ್-18(ವಂದೇ ಭಾರತ್) ಬಗ್ಗೆ ಒಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.
ಭಾರತೀಯ ರೈಲ್ವೇ ವ್ಯವಸ್ಥೆ ಅತ್ಯಂತ ಹಳೆ ಕಾಲದ್ದು ಎನ್ನುವ ಟೀಕೆಗೆ ಉತ್ತರವೆಂಬಂತೆ ಭಾರತದ ಪ್ರಯಾಣಿಕರಿಗೆ ವಿಶ್ವದರ್ಜೆ ಗುಣಮಟ್ಟದ ರೈಲಿನ ಅನುಭವ ನೀಡಲು ಟ್ರೈನ್-18 ಅಭಿವೃದ್ಧಿ ಪಡಿಸಲಾಗಿದೆ.
ಟ್ರೈನ್ -18 ಈಗಿನ ರೈಲುಗಳಂತೆ ಪ್ರತ್ಯೇಕ ಎಂಜಿನ್ ಹೊಂದಿರುವುದಿಲ್ಲ. ಬದಲಿಗೆ ಮೆಟ್ರೋ ರೈಲುಗಳಂತೆ ವಿದ್ಯುತ್ ಶಕ್ತಿ ಪ್ರತಿ ಚಕ್ರಕ್ಕೂ ಮೋಟಾರುಗಳ ಮೂಲಕ ವರ್ಗಾವಣೆಯಾಗುತ್ತದೆ. ಇದನ್ನು ವಿಮಾನದಲ್ಲಿರುವಂತೆ ಕಾಕ್ಪಿಟ್ನಲ್ಲಿ ನಿಯಂತ್ರಿಸಲಾಗುತ್ತದೆ. ಇದರಿಂದಾಗಿ ರೈಲು ಗಂಟೆಗೆ 220 ಕಿ.ಮೀ. ವೇಗದವರೆಗೆ ಸಂಚರಿಸುವ ಸಾಮರ್ಥ್ಯವನ್ನು ಪಡೆದಿದೆ. ಇದೇ ತಿಂಗಳಿನಿಂದ ದೆಹಲಿಯಿಂದ ಪ್ರಯಾಗ್ ರಾಜ್-ವಾರಣಾಸಿ ಜಂಕ್ಷನ್ ವರೆಗಿನ 780 ಕಿ.ಮೀ. ದೂರವನ್ನು ಇದು ಕೇವಲ 8 ಗಂಟೆಯಲ್ಲಿ ಕ್ರಮಿಸಲಿದೆ. ಹಾಗೆಯೇ ಮುಂದಿನ ತಿಂಗಳಿನಿಂದ ನವದೆಹಲಿ- ಹಬೀಬ್ ಗಂಜ್ ನಡುವಿನ 707 ಕಿ.ಮೀ.ದೂರವನ್ನು ಕೇವಲ ಆರು ಗಂಟೆಗಳಲ್ಲಿ ಕ್ರಮಿಸಲಿದೆ! ವಿದೇಶೀ ರೈಲುಗಳಲ್ಲಿರುವಂತೆ ವೈಫೈ ಸೌಲಭ್ಯ, ಜಿಪಿಎಸ್ ಆಧರಿತ ಮಾಹಿತಿ ವ್ಯವಸ್ಥೆ, ತಿರುಗಿಸಬಹುದಾದ ಸೀಟುಗಳು, ಚಾರ್ಜರ್ ವ್ಯವಸ್ಥೆ ವೃದ್ಧರಿಗೆ,ಅಂಗವಿಕಲರಿಗೆ ಅನುಕೂಲವಾಗುವಂತೆ ಮಡಚುವ ಮೆಟ್ಟಿಲುಗಳು ಈ ರೈಲಿನಲ್ಲಿದೆ.
ಪ್ರಾಯೋಗಿಕ ಚಾಲನೆಯಲ್ಲಿ ಈ ಟ್ರೈನ್-18 ರೈಲು ಗಂಟೆಗೆ ಸರಾಸರಿ 180 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯದೊಂದಿಗೆ ಶತಾಬ್ದಿ ರೈಲನ್ನು ಹಿಂದಿಕ್ಕಿದೆ. ಮುಂದೆ ಶತಾಬ್ದಿ ರೈಲಿನ ಜಾಗದಲ್ಲಿ ಈ ಟ್ರೈನ್-18 ಬರಲಿದೆ.
ಹಾಗಾದರೆ ಭಾರತೀಯ ರೈಲು ಪ್ರಯಾಣಿಕರಿಗೆ ಇಷ್ಟೆಲ್ಲಾ ಆಧುನಿಕ ಸೌಲಭ್ಯಗಳಿರುವ,ಇಷ್ಟೆಲ್ಲಾ ಅನುಕೂಲಕರವಾಗಿರುವ ಭಾರತದ ಹೆಮ್ಮೆಯ ಈ ಹೊಸ ವೇಗದ ರೈಲಿನ ಮೇಲೆ ಕಿಡಿಗೇಡಿಗಳನ್ನು ಮುಂದೆ ಬಿಟ್ಟು ಪದೇ ಪದೇ ಕಲ್ಲು ತೂರಿಸುವ ಮೂಲಕ ಅದರ ವೇಗಕ್ಕೆ ಅಪಾಯವೊಡ್ಡಿ ಅದರಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಜೀವ ಭಯಕ್ಕೆ ತಳ್ಳಿ ಆ ಮೂಲಕ ಟ್ರೈನ್-18(ವಂದೇ ಭಾರತ್) ವಿಫಲವಾಗುವಂತೆ ಮಾಡಲು ಶ್ರಮಿಸುತ್ತಿರುವ ಆ ಕಾಣದ ಕೈ ಯಾವುದು? ರೈಲು ವ್ಯವಸ್ಥೆಯಲ್ಲಿ ಇಷ್ಟೊಂದು ವೇಗವಾಗಿ ಬದಲಾವಣೆಯಾದರೆ ಆ ಕಾಣದ ಕೈಗಾಗುವ ಲಾಭವಾದರೂ ಏನು?
ಇದೀಗ ಟ್ರೈನ್-18 ಮೇಲೆ ಕಲ್ಲು ತೂರಿದ ಕಿಡಿಗೇಡಿಗಳನ್ನು ಬಂಧಿಸಿದ ನಂತರ ಅವರಿಂದ ಅವರ ಹಿಂದಿರುವ ಕೈಗಳ ಮತ್ತು ಆ ಕೈಗಳ ನಿಜವಾದ ಉದ್ದೇಶವವೇನು ಎನ್ನುವ ಸತ್ಯವನ್ನು ಬಾಯಿ ಬಿಡಿಸಿದರಷ್ಟೇ ಈ ಪ್ರಶ್ನೆಗಳಿಗೆ ಉತ್ತರ ಸಿಗಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.