ಬಂಟ್ಟಾಳ : ಶಿಕ್ಷಣವೊಂದು ಚಂದನದ ತಿಲಕ. ಶಿಕ್ಷಣವು ಜನರ ಮಧ್ಯೆ ಎತ್ತಿ ನಿಲ್ಲುವ ಕೆಲಸ ಮಾಡುತ್ತದೆ. ಶಿಕ್ಷಣ ಜೊತೆಗೆ ಸಾಮಾನ್ಯ ಜ್ಞಾನ, ಛಲವಿರಬೇಕು. ಕರ್ತವ್ಯಕ್ಕೆ ಬದ್ಧವಾಗಿದ್ದರೆ ನಾವು ಯಾರ ಮುಂದೆಯೂ ತಲೆ ಬಾಗುವ ಸಂದರ್ಭ ಬರುವುದಿಲ್ಲ. ಅವಮಾನಗಳನ್ನು ಎದುರಿಸಿ ಮುನ್ನುಗಲೂ ಸಾಧ್ಯವಾಗುತ್ತದೆ. ಓದು ಕಲಿತು ಜಗತ್ತನ್ನು ಗೆಲ್ಲಬಹುದು. ಓದು ಬರೀಯ ಪುಸ್ತಕದ ಜ್ಞಾನವಲ್ಲ ಎಂದು ಕುಂಬಾರ ಸಮಾಜದ ರಾಜ್ಯ ಅಧ್ಯಕ್ಷರು, ವೈದ್ಯರಾದ ಡಾ. ಅಣ್ಣಯ್ಯ ಕುಲಾಲ್ ಹೇಳಿದರು.
ಅವರು ಕಲ್ಲಡ್ಕ ಶ್ರೀ ರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರವೇಶೋತ್ಸ ಕಾರ್ಯಕ್ರಮವಾದ ಆಗತ-ಸ್ವಾಗತವನ್ನು ದೀಪ ಬೆಳಗಿಸಿ, ಹೋಮಕ್ಕೆ ಹವಿಸ್ಸನ್ನು ಅರ್ಪಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರಪಂಚಕ್ಕೆ ಒಳಿತಾಗಲಿ ಎಂದು ಸಾರುವ ಧರ್ಮವೇ ಹಿಂದೂ ಧರ್ಮ. ನಾನು ನನ್ನವರು ಎನ್ನುವ ಪ್ರೀತಿ, ಶಾಂತಿ ಈ ಜಗತ್ತಿನಲ್ಲಿ ಕಾಣುವುದು ಎಂದರೇ ಅದು ಭಾರತದಲ್ಲಿ ಮಾತ್ರ. ಜಗತ್ತಿನಲ್ಲಿ ಇರುವ ಜೀವರಾಶಿಯನ್ನು ಪ್ರೀತಿಯಿಂದ ಕಾಣುವುದು ಭಾರತೀಯರನ್ನು ಬಿಟ್ಟರೆ ಬೇರಾರೂ ಇಲ್ಲ. ಸಮಾಜವನ್ನು ಕಾಯಿಲೆಯಿಂದ ಮುಕ್ತ ಗೊಳಿಸುವ ಕಲೆ ಭಾರತೀಯರಿಗೆಯೇ ತಿಳಿದಿರುವುದು. ಇದೆಲ್ಲವೂ ಭಾರತೀಯರ ನಿಜವಾದ ಸಂಸ್ಕೃತಿ ಎಂದರು.
ವ್ಯಕ್ತಿಗೆ ಯಾವುದೇ ವಿದ್ಯೆಯನ್ನು ನೀಡುವ ಬದಲು ಅದನ್ನು ಕಲಿಸಿಕೊಟ್ಟರೆ ಅದು ಹೆಚ್ಚು ಪ್ರಯೋಜನಕಾರಿ. ನಮಗೆ ನಮ್ಮ ಶಕ್ತಿಯೇ ತಿಳಿದಿರುವುದಿಲ್ಲ. ನಮ್ಮತನದ ಅರಿವು ನಮಗಿರಬೇಕು. ಜೊತೆಗೆ ಹಿರಿಯರ ಉಪದೇಶ ಅಗತ್ಯವಿರಬೇಕು. ನಾವು ಮನಸ್ಸಿನಲ್ಲಿ ದೃಢ ಸಂಕಲ್ಪವನ್ನು ಮಾಡಕೊಂಡಿರಬೇಕು ಎಂದು ವಿದ್ಯಾರ್ಥಿಗಳಿಗೆ ಹಿತವಚನವಿತ್ತರು.
ಭಾರತವೊಂದು ಅವಕಾಶಗಳ ಬ್ಯಾಂಕ್. ಇಲ್ಲಿ ಬದುಕನ್ನು ಧನಾತ್ಮಕವಾಗಿ ರೂಪಿಸುವ ದಾರಿಗಳಿವೆ. ಬದುಕೆಂಬ ಕಲೆ ಗೊತ್ತಿದ್ದರೆ ವಿಜ್ಞಾನ, ಗಣಿತದ ಅಗತ್ಯವಿಲ್ಲ. ಗೋಲ್ಡ್ ಮೆಡಲ್ ನೋಡಿ ಜನ ನಮ್ಮ ಬಳಿ ಬರುವುದಿಲ್ಲ. ಬದಲಾಗಿ ಮಾನವೀಯ ಗುಣ ನಿಮ್ಮಲ್ಲಿದ್ದರೆ ಜನ ನಿಮ್ಮನ್ನು ಇಷ್ಟಪಡುತ್ತಾರೆ ಎಂದರು. ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ. ಜಿ.ಕೆ ಭಟ್ ಸಂಗಹಿತ್ತಿಲು ಮಾತನಾಡಿ ನೀವೆಲ್ಲರೂ ಉತ್ತಮವಾಗಿ ತರಬೇತಿ ಪಡೆದ ವಿದ್ಯಾರ್ಥಿಗಳೇ. ನಿಮಗೆ ಉಪದೇಶಗಳ ಅಗತ್ಯವಿಲ್ಲವೆಂದರು.
ಅಂಕ ಜೀವನಕ್ಕೆ ಉಪಕಾರವಾಗುತ್ತದೆಯೋ ಹೊರತು, ಪ್ರಾವೀಣ್ಯತೆಗೆ ಅಲ್ಲ. ಅಂಕ ಒಂದೇ ಎನ್ನುವ ಉದ್ದೇಶವಿಟ್ಟು ಓದುತ್ತಾ ಬರಬೇಡಿ. ಪದವಿ ಮುಖ್ಯವಲ್ಲ. ಬದುಕು ಮುಖ್ಯ. ಹೆಚ್ಚಾಗಿ ದೇಶವನ್ನು ಆಳುವವರು ತರಗತಿಯ ಕೊನೆಯ ಬೆಂಚಿನ ವಿದ್ಯಾರ್ಥಿಗಳಾಗಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬರು ಸಮರ್ಥರು ಎಂದರು. ವಿದ್ಯಾಸಂಸ್ಥೆಯ ಸಂಚಾಲಕ ಡಾ. ಪ್ರಭಾಕರ್ ಭಟ್ ಮಾತನಾಡಿ ಭಾರತದಲ್ಲಿ ಧರ್ಮವಿದೆ, ಸ್ವಾತಂತ್ರ್ಯವಿದೆ, ಜೀವನ ಮೌಲ್ಯವಿದೆ ಎಂದೇ ಅಂದು ಸ್ವಾತಂತ್ರ್ಯ ಹೋರಾಟಗಳೆಲ್ಲವೂ ನಡೆದದ್ದು. ಈ ಹಿಂದೂಸ್ಥಾನ್ನ ಪ್ರತಿಯೊಬ್ಬ ಹಿಂದೂವಿನಲ್ಲಿಯೂ ಚಿಂತನೆಯಿದೆ. ಜಗತ್ತಿಗೆ ಬೀಜ ಬಿತ್ತುವಂತಹ ಕಲ್ಪನೆಯಿದೆ. ಈ ನಿಟ್ಟಿನಲ್ಲಿ ಭಾರತ ಸಂಸ್ಕೃತಿಯಲ್ಲಿ ಶ್ರೀಮಂತ ರಾಷ್ಟ್ರ .ಈ ಎಲ್ಲಾ ದೃಷ್ಟಿಯಿಂದ ಬ್ರಿಟಿಷರಿಗೆ ಭಾರತದ ಸಂಸ್ಕೃತಿಯ ಅಗತ್ಯವಿತು ಎಂದರು.
ಭಾರತದ ಗ್ರಂಥವನ್ನು ಅಧ್ಯಯನ ನಡೆಸಿದ ರಶ್ಯಿಯನ್ನರು, ಭಗವದ್ಗೀತೆಯ ಪ್ರತಿಯೊಂದು ಶೋಕ್ಲದಲ್ಲಿಯೂ ವಿಜ್ಞಾನವಿದೆ. ಪ್ರಥಮ ಮನೋವಿಜ್ಞಾನಿಯೇ ಶ್ರೀ ಕೃಷ್ಣ ಎಂದಿದ್ದಾರೆವೆಂದರು.ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಒಂದೊಂದು ಧ್ಯೇಯ, ಉದ್ದೇಶವಿದೆ. ಅದು ಜಗತ್ತಿನ ಹಿತಕೋಸ್ಕರ, ತಿಳುವಳಿಕೆಗೋಸ್ಕರವಾಗಲಿ. ಇವೆಲ್ಲವನ್ನು ಅರಿತುಕೊಂಡು ದೇಶವನ್ನು ಸರ್ವಶ್ರೇಷ್ಠವನ್ನಾಗಿ ಮಾಡುವ ಗುರಿ ವಿದ್ಯಾರ್ಥಿಗಳಾದ ನಿಮ್ಮದಾಗಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಾಯಾಜಿ ವಹಿಸಿದ್ದರು.
ವೇದಿಕೆಯಲ್ಲಿ ಡಾ. ಕಮಲ ಪ್ರಭಾಕರ್ ಭಟ್, ಸಂಸ್ಥೆಯ ಮುಖ್ಯ ವಸಂತ ಮಾಧವ , ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಹಿರಿಯರು ತಿಲಕವಿಟ್ಟು ಸ್ವಾಗತಿಸಿದರು. ಸಂಸ್ಥೆಯ ದೈನಂದಿನ ಪ್ರಾರ್ಥನೆ ಸರಸ್ವತಿ ವಂದನೆಯನ್ನು ಹಾಡಲಾಯಿತು. ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ಕಟ್ಟೆ ಸ್ವಾಗತಿಸಿ, ವಿದ್ಯಾರ್ಥಿ ಹರ್ಷಿತಾ ವಂದಿಸಿ, ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.