ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಗಳ ಪ್ರಚಾರದ ಭರಾಟೆಯೂ ಜೋರಾಗಲಿದೆ. ವಿಭಿನ್ನವಾಗಿ ಪ್ರಚಾರ ನಡೆಸುವುದರಲ್ಲಿ ಹೆಸರುವಾಸಿಯಾಗಿರುವ ಬಿಜೆಪಿ ಈ ಬಾರಿಯೂ ಜನರನ್ನು ಸೆಳೆಯಲು ವಿಶೇಷ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿಗಳೂ ತಮ್ಮ ನೆಚ್ಚಿನ ನಾಯಕನನ್ನು ಮತ್ತೆ ಮರು ಆಯ್ಕೆ ಮಾಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಮೋದಿ ಬೆಂಬಲಿತ ಸ್ಲೋಗನ್ಗಳುಳ್ಳ ಟಿಶರ್ಟ್ನ್ನು ಹೇಗೆ ಖರೀದಿ ಮಾಡುವುದು ಎಂಬ ಬಗ್ಗೆ ಯುವ ಜನತೆ ನಮೋ ಮರ್ಚೆಡೈಂಸ್ನ ಟ್ವಿಟರ್ ಹ್ಯಾಂಡಲ್ ಸೇರಿದಂತೆ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಬಿಜೆಪಿ ನಾಯಕ ಅನುರಾಗ್ ಠಾಕೂರ್ ಅವರು ‘ನಮೋ ಅಗೈನ್’ ಎಂಬ ಸ್ಲೋಗನ್ವುಳ್ಳ ಟೀಶರ್ಟ್ನ್ನು ಧರಿಸಿ ಸಂಸತ್ತಿಗೆ ಆಗಮಿಸಿ ಎಲ್ಲರ ಗಮನವನ್ನು ಸೆಳೆದಿದ್ದರು. ಆ ಬಳಿಕ ಎಲ್ಲಾ ಮೋದಿ ಅಭಿಮಾನಿಗಳು ಇಂತಹ ಟಿ ಶರ್ಟ್ ತೊಡಲು ಉತ್ಸುಹುಕರಾಗಿದ್ದಾರೆ.
NaMo App ಎಂಬ ಮೊಬೈಲ್ ಅಪ್ಲಿಕೇಶನ್ ಹೊಂದಿರುವ ವ್ಯಾಪಾರ ಸಂಸ್ಥೆಯೊಂದು ಕಳೆದ ಸೆಪ್ಟಂಬರ್ನಿಂದ ಮೋದಿ ಭಾವಚಿತ್ರ, ಸ್ಲೋಗನ್ಗಳುಳ್ಳ ಕಾಫಿ ಮಗ್, ಸ್ಟಿಕರ್, ಟಿಶರ್ಟ್ ಇತ್ಯಾದಿಗಳನ್ನು ಸೇಲ್ ಮಾಡುತ್ತಿದೆ. ಠಾಕೂರ್ ಕೂಡ ಅಲ್ಲಿಂದಲೇ ಟಿ ಶರ್ಟ್ ತರಿಸಿಕೊಂಡಿದ್ದಾರೆ.
NaMo Appನಲ್ಲಿ ಖರೀದಿ ಮಾಡಲಾದ ವಸ್ತುಗಳ ಬಗ್ಗೆ ನಮೋ ಮರ್ಚಡೈಂಸ್ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಟ್ವಿಟ್ ಮತ್ತು ರಿಟ್ವಿಟ್ಗಳನ್ನು ಮಾಡುತ್ತಿರುತ್ತದೆ.
source: hindustantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.