ನರೇಂದ್ರ ಮೋದಿ ಸರಕಾರವು 2014 ರಲ್ಲಿ ಆರಂಭಿಸಿದ ಸ್ವಚ್ಛಭಾರತ ಅಭಿಯಾನವನ್ನು ವಿಶ್ವ ಆರೋಗ್ಯ ಸಂಸ್ಥೆ ಬಹುವಾಗಿ ಶ್ಲಾಘಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸ್ವಚ್ಛಭಾರತ ಅಭಿಯಾನದಡಿಯಲ್ಲಿ 8 ಕೋಟಿ ಶೌಚಾಲಯಗಳನ್ನು ಕಟ್ಟಿಸಿಕೊಡಲಾಗಿದೆ. ಭಾರತದಲ್ಲಿ 45% ದಷ್ಟಿದ್ದ ಶೌಚಾಲಯದ ಬಳಕೆ 89% ಕ್ಕೆ ಏರಿದೆ. ಕಳೆದ ನಾಲ್ಕು ವರ್ಷಗಳಲ್ಲಿ 150 ಮಿಲಿಯನ್ ಭಾರತೀಯರು ತೆರೆದ ಸ್ಥಳಗಳಲ್ಲಿ ಮಲವಿಸರ್ಜನೆ ಮಾಡುವುದನ್ನು ನಿಲ್ಲಿಸಿ ಶೌಚಾಲಯವನ್ನು ಬಳಸುತ್ತಿದ್ದಾರೆ.
2019 ಅಕ್ಟೋಬರ್ ತಿಂಗಳಿಗೆ 100% ಭಾರತೀಯರು ಶೌಚಾಲಯವನ್ನು ಬಳಸಲಿದ್ದಾರೆ. ತೆರೆದ ಸ್ಥಳಗಳಲ್ಲಿ ಮಲವಿಸರ್ಜನೆ ಮಾಡುವುದರಿಂದ ಬರುವ ಡಯರಿಯಾ(ಅತಿಸಾರ ಭೇದಿ)ಯಂತಹ ಅನಾರೋಗ್ಯದಿಂದ ವಾರ್ಷಿಕವಾಗಿ 3 ಲಕ್ಷ ಭಾರತೀಯರು ಮರಣವನ್ನಪ್ಪುತ್ತಿದ್ದರು, ಸ್ವಚ್ಛಭಾರತ ಅಭಿಯಾನದ ಭಾಗವಾದ 100% ಶೌಚಾಲಯದ ಪೂರೈಕೆಯಿಂದ ಈ 3 ಲಕ್ಷ ಜನರ ಪ್ರಾಣ ಉಳಿಯಲಿದೆ. ಅಕ್ಟೋಬರ್ 2019 ರಲ್ಲಿ ಮಹಾತ್ಮಾ ಗಾಂಧೀಜಿಯವರ 150 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ದೇಶದಲ್ಲಿ 100% ಜನರು ಶೌಚಾಲಯ ಬಳಸುವಂತಾಗಬೇಕೆಂಬ ಗುರಿಯನ್ನು ಮೋದಿ ಸರಕಾರ ಹಾಕಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.