ವಿಶ್ವದ ಬಲಿಷ್ಠ ಆರ್ಥಿಕ ರಾಷ್ಟ್ರ ಗಳ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದ ಭಾರತವು ಮೋದಿ ಸರಕಾರದ ಕಳೆದ ನಾಲ್ಕು ವರ್ಷಗಳ ಸಮರ್ಥ ಆಡಳಿತದ ಪರಿಣಾಮವಾಗಿ ಡಿಸೆಂಬರ್ 2017 ರಲ್ಲಿ 6 ನೇ ಸ್ಥಾನಕ್ಕೆ ಏರಿದೆ. 2013 ಡಿಸೆಂಬರ್ ತಿಂಗಳಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ ದ (Gross Domestic Product-GDP) ಮೌಲ್ಯವು 1856.72ಬಿಲಿಯನ್ ಡಾಲರ್ ಆಗಿತ್ತು (ಡಾಲರ್ ಗೆ ರೂ 68 ರಂತೆ ರೂಪಾಯಿಗೆ ಪರಿವರ್ತಿಸಿದಾಗ 1262.57 ಲಕ್ಷ ಕೋಟಿ ರೂಪಾಯಿಗಳು). 2013 ರಲ್ಲಿ ಅಧಿಕ GDP ಇರುವ ರಾಷ್ಟ್ರಗಳ ಸಾಲಿನಲ್ಲಿ ಅಮೆರಿಕಾ ಮೊದಲ ಸ್ಥಾನದಲ್ಲಿ, ಚೀನಾ ಎರಡನೇ ಸ್ಥಾನದಲ್ಲಿ, ಜಪಾನ್ ಮೂರನೇ ಸ್ಥಾನದಲ್ಲಿ, ಜರ್ಮನಿ ನಾಲ್ಕು, ಇಂಗ್ಲೆಂಡ್ ಐದು, ಫ್ರಾನ್ಸ್ ಆರು, ಇಟೆಲಿ ಏಳು, ಬ್ರೆಜಿಲ್ ಎಂಟು, ರಷ್ಯಾ ಒಂಭತ್ತನೆಯ ಸ್ಥಾನದಲ್ಲಿ ಇದ್ದು, ಭಾರತ 10 ನೆಯ ಸ್ಥಾನದಲ್ಲಿ ಇತ್ತು.
2014 ರ ಪೂರ್ವಾರ್ಧದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಅಭಿವೃದ್ಧಿ ಕೆಲಸಗಳನ್ನು ಆರಂಭಿಸಿದ ಕಾರಣ ಮೋದಿ ಸರಕಾರವು ಕೃಷಿ, ಕೈಗಾರಿಕೆ, ವ್ಯಾಪಾರಗಳಲ್ಲಿ ಭಾರತವು ಮಹತ್ತರ ಅಭಿವೃದ್ಧಿ ಸಾಧಿಸಿತು. ಇದರ ಪರಿಣಾಮವಾಗಿ ಡಿಸೆಂಬರ್ 2014 ರಲ್ಲಿ ಮೊದಲ ಬಾರಿಗೆ ಭಾರತದ ಆರ್ಥಿಕತೆಯು 2 ಟ್ರಿಲಿಯನ್ ಡಾಲರ್ ದಾಟಿತು. 2014 ರಲ್ಲಿ GDP ಯು 2039.1 ಬಿಲಿಯನ್ ಡಾಲರ್ ಗೆ ಏರಿ ಭಾರತವು ರಷ್ಯಾ ವನ್ನು ಹಿಂದಿಕ್ಕಿ 9 ಸ್ಥಾನಕ್ಕೆ ಏರಿತು. 2015 ಡಿಸೆಂಬರ್ ನಲ್ಲಿ 2102.4 ಬಿಲಿಯನ್ ಡಾಲರ್ GDP ಸಾಧಿಸಿದ ಭಾರತವು ಬ್ರೆಜಿಲ್ ಹಾಗೂ ಇಟೆಲಿಗಳನ್ನು ಹಿಂದಿಕ್ಕಿ 7 ನೇ ಸ್ಥಾನಕ್ಕೆ ಏರಿತು. 2016 ರಲ್ಲಿ ದೇಶವು 2274.2 ಬಿಲಿಯನ್ ಡಾಲರ್ ಮೊತ್ತದ GDP ಯನ್ನು ಸಾಧಿಸಿತು. ಡಿಸೆಂಬರ್ 2017 ರಲ್ಲಿ 2597.13 ಬಿಲಿಯನ್ ಡಾಲರ್ ಮೌಲ್ಯದ (ಡಾಲರ್ ಗೆ ರೂ 68 ರಂತೆ ರೂಪಾಯಿಗೆ ಪರಿವರ್ತಿಸಿದಾಗ 1766. 05 ಲಕ್ಷ ಕೋಟಿ ರೂಪಾಯಿಗಳು) GDP ಯನ್ನು ಸಾಧಿಸಿದ ಭಾರತ ಫ್ರಾನ್ಸ್ ದೇಶವನ್ನು ಹಿಂದಿಕ್ಕಿ 6 ನೇ ಸ್ಥಾನಕ್ಕೆ ಏರಿತು. 2013 ಕ್ಕೆ ಹೋಲಿಸುವಾಗ ಭಾರತವು 2017 ರಲ್ಲಿ ವಾರ್ಷಿಕವಾಗಿ 740.77 ಬಿಲಿಯನ್ ಡಾಲರ್ಗಳಷ್ಟು (503.72 ಲಕ್ಷ ಕೋಟಿ ರೂಪಾಯಿ ಗಳು) ಹೆಚ್ಚು ಶ್ರೀಮಂತವಾಯಿತು. ಭಾರತದ ಆರ್ಥಿಕತೆಯು ಕಳೆದ ನಾಲ್ಕು ವರ್ಷಗಳಲ್ಲಿ 39.9% ವೃದ್ಧಿಸಿತು.
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 2011,2012 ಹಾಗೂ 2013 ರಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಯು ತೀರಾ ನೆಲಕಚ್ಚಿತ್ತು. ಈ ಮೂರು ವರ್ಷಗಳಲ್ಲಿ ಭಾರತದ GDP ಯು 1800 ಬಿಲಿಯನ್ ಡಾಲರ್ ಗಳ ಆಸುಪಾಸಿನಲ್ಲೇ ಉಳಿದಿತ್ತು. (2011-1823.05, 2012-1827.64, 2013-1856.72).
2018 ರಲ್ಲಿ ಭಾರತವು, ಇಂಗ್ಲೆಂಡ್ ದೇಶವನ್ನು ಹಿಂದಿಕ್ಕಿ 5 ನೇ ಸ್ಥಾನಕ್ಕೆ ಏರಲಿದೆ ಎಂಬ ವಿಶ್ವಾಸವನ್ನು ಕೇಂದ್ರ ವಿತ್ತ ಮಂತ್ರಿ ಅರುಣ್ ಜೇಟ್ಲಿ ವ್ಯಕ್ತಪಡಿಸಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆಯು ಇದೇ ವೇಗದಲ್ಲಿ ಸಾಗಿದರೆ ಭಾರತವು 2032 ರಲ್ಲಿ ಇಂಗ್ಲೆಂಡ್, ಜರ್ಮನಿ, ಜಪಾನ್ ಗಳನ್ನು ಹಿಂದಿಕ್ಕಿ 3 ನೇ ಸ್ಥಾನಕ್ಕೆ ಏರಲಿದೆ ಎಂಬ ಭವಿಷ್ಯವನ್ನು ವಿಶ್ವದ ಪ್ರಮುಖ ಆರ್ಥಿಕ ತಜ್ಞರು ನುಡಿದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.