ಉಜಿರೆ: ಮಕ್ಕಳಲ್ಲಿ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬ್ಯಾಲೆಟ್ ಉಪಯೋಗಿಸಿ ಅಭ್ಯರ್ಥಿಯನ್ನು ಆರಿಸುವುದು ಎಲ್ಲಾ ಶಾಲೆಗಳಲ್ಲೂ ಸಾಮಾನ್ಯ. ಆದರೆ ಎಸ್.ಡಿ.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ನವೀನ ರೀತಿಯ ಹಾಗು ಪರಿಸರ ಸ್ನೇಹಿ ಮತದಾನ ಪದ್ದತಿಯನ್ನು ಅಳವಡಿಸಿ ಇ.ವಿ.ಎಂ.ನ ಮೂಲಕ ಶಾಲಾ ಚುನಾವಣೆಯನ್ನು ಇತ್ತೀಚೆಗೆ ನಡೆಸಲಾಯಿತು.
‘ವಿಧಾನಸಭಾ ಚುಣಾವಣೆಯ ಮಾದರಿಯ ಹಾಗು ಪರಿಸರ ಸ್ನೇಹಿ ವಿಧಾನದ ಚನಾವಣೆಯನ್ನು ನಮ್ಮ ಶಾಲೆಯಲ್ಲಿ ನಡೆಸಿದ್ದೇವೆ. ಇದರಿಂದ ಸಮಯ ಉಳಿತಾಯ, ಪೇಪರನ್ನು ಮಿತವಾಗಿ ಬಳಸುವುದು ಹಾಗೂ ಮುಂದೆ ಮಕ್ಕಳು ಕೇಂದ್ರ, ರಾಜ್ಯದ ಚುಣಾವಣೆಯಲ್ಲಿ ಭಾಗವಹಿಸಲು ಪ್ರಾಯೋಗಿಕ ಅನುಭವ ನೀಡುವ ಪ್ರಯತ್ನ ಮಾಡಿದ್ದೇವೆ, ಎಸ್.ಡಿ.ಎಂ ಡಿಪ್ಲಮೋ ಕಾಲೇಜಿನ ಪ್ರಾಧ್ಯಾಪಕರಾದ ಸಂಪತ್ ಕುಮಾರ್ ಹಾಗು ನಿಕಿತ್ ಡಿ. ಆರ್. ತಯಾರಿಸಿದ ಇವಿಎಂನ್ನು ಬಳಸಿ ಚುನಾವಣೆಯನ್ನು ಮೊದಲ ಬಾರಿ ಪ್ರಯತ್ನಿಸಿದ್ದೇವೆ’ ಎಂದು ಶಾಲೆಯ ಚುನಾವಣಾ ಅಧಿಕಾರಿ ರಮೇಶ್ ಮಯ್ಯ ಇವರು ಹೇಳಿದ್ದಾರೆ.
ಮೊದಲು ನಾವು ಚೀಟಿಯನ್ನು ಬಳಸಿ ವೋಟು ಮಾಡುತ್ತಿದ್ದೆವು ಆದರೆ ನಮ್ಮ ಶಾಲೆಯಲ್ಲಿ ಮೊದಲ ಬಾರಿಗೆ ಇ.ವಿ.ಎಂ ಬಳಸಿ ಮತ ಚಲಾಯಿಸಿದ್ದು, ಮುಂದಿನ ಚುನಾವಣೆಗೆ ಈಗಲೇ ಮಾರ್ಗದರ್ಶನವಾಯಿತು ಎಂದು ಶಾಲಾ ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ. ಕಾರ್ಯಕ್ರಮವನ್ನು ಎ.ಡಿ.ಎಂ. ಟ್ರಸ್ಟಿನ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಶೆಟ್ಟಿ ಹಾಗು ಸೋಮಶೇಖರ್ ಶೆಟ್ಟಿ ಉದ್ಘಾಟಿಸಿದರು.
ವಸುಧಾ, ಎಸ್.ಡಿ.ಎಂ ಕಾಲೇಜು ಉಜಿರೆ