ಹುಬ್ಬಳ್ಳಿ : 2025 ರ ವೇಳೆಗೆ ಭಾರತವನ್ನು ಕ್ಷಯಮುಕ್ತ ರಾಷ್ಟ್ರವನ್ನಾಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು, ದೇಶದಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನವನ್ನು ಮಾಡುಲಾಗುತ್ತಿದೆ. ಇದರ ಅನ್ವಯ ರಾಜ್ಯದಾದ್ಯಂತ ಜುಲೈ 2 ರಿಂದ 13 ರ ವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ ಅಡಿಯಲ್ಲಿ ದಿನಾಂಕ 2-7-2018 ರಿಂದ 13-7-2018 ವರೆಗೆ ಹಮ್ಮಿಕೊಳ್ಳಲಾಗಿರುವ ಸಕ್ರಿಯ ಕ್ಷಯರೋಗ ಪತ್ತೆಯ ಅಭಿಯಾನಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಸುಧೀರ್ ಶರಾಫ್ ಅವರು ಇಂದು ಪಾಲಿಕೆಯ ಚಿಟುಗುಪ್ಪಿ ಆಸ್ಪತ್ರೆಯ ಆವರಣದಲ್ಲಿ ಚಾಲನೆ ನೀಡಿದರು.
ಧಾರವಾಡ ಜಿಲ್ಲೆಯಾದ್ಯಂತ ಸುಮಾರು 2.50 ಲಕ್ಷ ಜನರನ್ನು ಅಭಿಯಾನದ ವೇಳೆಯಲ್ಲಿ ತಪಾಸಣೆಗೆ ಒಳಪಡಿಸಲಾಗುವುದು. ತಪಾಸಣೆಗಾಗಿ 175 ತಂಡಗಳನ್ನು ರಚಿಸಲಾಗಿದ್ದು, ಕ್ಷಯರೋಗದ ಅಪಾಯದ ಅಂಚಿನಲ್ಲಿರುವ ಗ್ರಾಮೀಣ ಭಾಗ, ನಗರದ ಕೊಳಗೇರಿ, ವೃದ್ಧಾಪ್ಯ ಕೇಂದ್ರಗಳು, ಅನಾಥಶ್ರಮಗಳು, ಕಟ್ಟಡ ಕಾರ್ಮಿಕರು, ನಿರಾಶ್ರಿತರು, ಬೀದಿ ಮಕ್ಕಳು, ಇಟ್ಟಿಗೆ ಹಾಗೂ ಮಂಡಕ್ಕಿ ಭಟ್ಟಿಗಳಲ್ಲಿ ಕೆಲಸನಿರ್ವಹಿಸುವವರು, ಹತ್ತಿ ಮಿಲ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು, ಹಾಗೂ ಕಾರಾಗೃಹದಲ್ಲಿರುವ ಖೈದಿಗಳನ್ನು ತಪಾಸಣೆಗೆ ಒಳಪಡಿಸಲಾಗವುದು.
ರೋಗದ ಲಕ್ಷಣ ಕಂಡುಬಂದವರಲ್ಲಿ 2 ಕಫ ಮಾದರಿಗಳನ್ನು ಸಂಗ್ರಹಸಿ ಹತ್ತಿರ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗುವುದು. ಕಫ ಪರೀಕ್ಷೆಯಲ್ಲಿ ರೋಗಾಣುಗಳು ಕಂಡುಬಂದರೆ ಅಂತಹ ಬಾದಿತರನ್ನು ಎಕ್ಸ್ ರೇ ಹಾಗೂ ಅತ್ಯಾಧುನಿಕ ಪರೀಕ್ಷಾ ವಿಧಾನವಾದ CB-NAAT (GeneXpert ಒಳಪಡಿಸಲಾಗುವುದು. ಧಾರವಾಡ ಜಿಲ್ಲೆಯಲ್ಲಿ ೭ ಎಕ್ಸ್ ರೇ ಪ್ರಯೋಗಾಲಯ ಹಾಗೂ ಧಾರವಾಡ ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿಯ ಕ್ಷಯರೋಗ ನಿಯಂತ್ರಣ ಕೇಂದ್ರ, ಕಿಮ್ಸ್ ಆಸ್ಪತ್ರೆಗಳಲ್ಲಿ CB-NAAT (GeneXpert) ಪರೀಕ್ಷೆ ವ್ಯವಸ್ಥೆ ಇದೆ.
ಕ್ಷಯರೋಗ ಕಂಡುಬಂದ ವಕ್ತಿಗಳನ್ನು ಚಿಕಿತ್ಸಗೆ ಒಳಪಡಿಸಲಾಗುವುದು. ಕ್ಷಯರೋಗಿಗಳು ಪೌಷ್ಟಿಂಕಾಶದ ಕೊರತೆಯಿಂದ ಬಳಲುತ್ತಿದ್ದರೆ ಅಂತವರಿಗೆ ಚಿಕಿತ್ಸೆ ಮುಗಿಯುವ ವರೆಗೆ ಮಾಸಿಕ 500 ರೂಪಾಯಿಗಳ ಭತ್ಯೆ ನೀಡಲಾಗುವುದು. ಎರಡು ವಾರಗಳಿಗಿಂತ ಹೆಚ್ಚಿನ ಕೆಮ್ಮು, ಸಾಯಂಕಾಲದ ವೇಳೆ ಜ್ವರ, ಕಫದಲ್ಲಿ ರಕ್ತ ಬೀಳುವುದು, ದೇಹದ ತೂಕ ಕಡಿಮೆಯಾಗವುದು ಕಂಡುಬಂದಲ್ಲಿ ತಾಪಾಸಣೆಗೆ ಆಗಮಿಸುವ ತಂಡದ ಸದಸ್ಯರುಗಳಿಗೆ ತಿಳಿಸಿ ಉಚಿತ ಕ್ಷಯರೋಗ ತಪಾಸಣೆ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕೆಂದು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಶ್ರೀಮತಿ ಡಾ. ತನುಜಾ ಕೆ ಎನ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಎನ್ ಬಿರಾದರ್, ಹುಬ್ಬಳ್ಳಿ ತಾಲೂಕು ವೈದ್ಯಾಧಿಕಾರಿ ಶ್ರೀಮತಿ ಡಾ. ಪ್ರಮೀಳಾ, ವಿಶ್ವ ಆರೋಗ್ಯ ಸಂಘಟನೆಯ ಸಲಹೆಗಾರರಾದ ಡಾ.ಸ್ಪೂರ್ತಿಗೌಡ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.