ನವದೆಹಲಿ: ದೆಹಲಿ ಪೊಲೀಸರು ‘All Women Patrolling Squad’ನ್ನು ದಕ್ಷಿಣ ದೆಹಲಿಯಲ್ಲಿ ಆರಂಭಿಸಿದ್ದಾರೆ. ಈ ಮಹಿಳಾ ಕಣ್ಗಾವಲು ತಂಡ ಮಹಿಳೆಯರ ಸುರಕ್ಷಿತೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
ಮಹಿಳೆಯರಿಗೆ ಹೆಚ್ಚಿನ ಸುರಕ್ಷಿತೆಯನ್ನು ಒದಗಿಸುವ ಮತ್ತು ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಗೆ ಉನ್ನತ ಜವಾಬ್ದಾರಿಯನ್ನು ನೀಡುವ ಎರಡು ಉದ್ದೇಶಗಳನ್ನು ಇಟ್ಟುಕೊಂಡು ಈ ಸ್ಕ್ವಾಡ್ ಆರಂಭಗೊಂಡಿದೆ.
ಈ ಮಹಿಳಾ ತಂಡಕ್ಕೆ 4 ರೈಡಿಂಗ್ ಗೇರ್ಗಳುಳ್ಳ ಮೋಟಾರ್ ಸೈಕಲ್ಗಳನ್ನು, ವೈಯರ್ಲೆಸ್ ಸೆಟ್, ಪ್ರೊಟೆಕ್ಷನ್ ಟೀಮ್, ಫೈರ್ ಆರ್ಮ್ ನೀಡಲಾಗಿದೆ. ಡ್ರೈವರ್, ಇನ್ಚಾರ್ಜ್ ಎಲ್ಲಾ ಜವಾಬ್ದಾರಿಯೂ ಮಹಿಳೆಯರದ್ದೇ ಆಗಿದೆ.
ಶಸ್ತ್ರಾಸ್ತ್ರ ಪ್ರಯೋಗ, ಫೈರಿಂಗ್, ಶಸ್ತ್ರಾಸ್ತ್ರ ರಹಿತ ಹೋರಾಟಗಳ ತರಬೇತಿಯನ್ನು ಈ ಮಹಿಳೆಯರು ಪಡೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.