ಹೈದರಾಬಾದ್: ಬೆಂಗಳೂರು- ಕಡಪ ನಡುವೆ ಜೂ.7ರಿಂದ ಏರ್ ಪೆಗಾಸಸ್ ವಿಮಾನ ಹಾರಾಟ ನಡೆಸಲಿದೆ. ಅಂದು ಬೆಳಗ್ಗೆ 10.40ಕ್ಕೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕಡಪಕ್ಕೆ ಈ ವಿಮಾನ ತನ್ನ ಮೊದಲ ಪ್ರಯಾಣ ಬೆಳೆಸಲಿದೆ.
ಬೆಂಗಳೂರು-ಕಡಪ ನಡುವೆ ವಿಮಾನ ಪ್ರತಿದಿನ ಬೆಳಗ್ಗೆ 10.40ಕ್ಕೆ ಸಂಚರಿಸಲಿದ್ದು, 11.30ಕ್ಕೆ ಕಡಪ ತಲುಪಲಿದೆ. ಕಡಪದಿಂದ 11.50ಕ್ಕೆ ಹೊರಟು 12.35ಕ್ಕೆ ಬೆಂಗಳೂರು ತಲುಪಲಿದೆ.
ಈ ವಿಮಾನ ಈಗಾಗಲೇ ಬೆಂಗಳೂರು-ಹುಬ್ಬಳ್ಳಿ ಹಾಗೂ ಬೆಂಗಳೂರು-ತಿರುವನಂತಪುರಂ ನಡುವೆ ಸಂಚಾರ ನಡೆಸುತ್ತಿದ್ದು, ಇನ್ನು ಮುಂದೆ ಬೆಳಗಾವಿ, ಕೊಚ್ಚಿ, ಪುದುಚೆರಿ, ಚೆನ್ನೈ ಮುಂತಾದ ನಗರಗಳಿಗೆ ಸಂಚರಿಸಲಿದೆ ಎಂದು ಏರ್ ಪೆಗಾಸಸ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.