ಗೋವಿನ ರಕ್ಷಣೆ, ಗೋವಿನ ಹಾಲಿನ ಮಹತ್ವಗಳನ್ನು ಸಾರುವ ಸಲುವಾಗಿ ರಾಯ್ಪುರದ ಮುಸ್ಲಿಂ ವ್ಯಕ್ತಿಯೊಬ್ಬರು ಲೇಹ್ನಿಂದ ಕನ್ಯಾಕುಮಾರಿಯವರಿಗೆ 12 ಸಾವಿರ ಕಿಲೋಮೀಟರ್ ಪಾದಯಾತ್ರೆ ನಡೆಸುತ್ತಿದ್ದಾರೆ.
ಮೊಹಮ್ಮದ ಫೈಝ್ ಖಾನ್ ಅವರು ‘ಗೋ ಸೇವಾ ಸದ್ಭಾವನ್ ಪಾದಾಯಾತ್ರೆ’ಯನ್ನು ನಡೆಸುತ್ತಿದ್ದು, ದಿನಕ್ಕೆ 20-25ಕಿಮೀ ನಡೆಯುತ್ತಿದ್ದಾರೆ. 2019ರ ಜನವರಿಗೆ ಅಮೃತಸರ ತಲುಪುವ ಗುರಿ ಹೊಂದಿದ್ದಾರೆ. ಜೂನ್
24ರಂದು ಇವರು ಲೇಹ್ನಿಂದ ಪಾದಾಯಾತ್ರೆ ಆರಂಭಿಸಿದ್ದಾರೆ.
ಗೋವಿನ ಮಹತ್ವ ಸಾರಲು ಹಲವಾರು ಕಡೆಗಳಲ್ಲಿ ಇವರು ಗೋಕಥೆಗಳನ್ನು ಹೇಳುತ್ತಾರೆ.
ಗೋಮಾತೆಯ ಸೇವೆಯೊಂದಿಗೆ ಧಾರ್ಮಿಕ ಸೌಹಾರ್ದತೆ ಮೂಡಿಸುವುದು ನನ್ನ ಉದ್ದೇಶ. ನಾವು ಗೋವನ್ನು ಸಂರಕ್ಷಿಸಬೇಕು, ಪೋಷಿಸಬೇಕು. ಗೋವು ಮನುಕುಲದ ಜೀವನಾಡಿ ಎಂದು ಫೈಝ್ ಹೇಳುತ್ತಾರೆ.
‘ಏಕ್ ಗಾಯ್ ಕಿ ಆತ್ಮಕಥಾ’ ಎಂಬ ಪುಸ್ತಕ ನನಗೆ ಬದುಕನ್ನು ಗೋವಿಗಾಗಿ ಮೀಸಲಿಡಲು ಪ್ರೇರಣೆಯಾಯಿತು ಎಂದು ಅವರು ಹೇಳಿಕೊಳ್ಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.