ಹೈದರಾಬಾದ್: ಆಂಧ್ರಪ್ರದೇಶದ ಮಾರ್ಷಲ್ ಆರ್ಟ್ಸ್ ಮಾಸ್ಟರ್ ಆಗಿರುವ ಪ್ರಭಾಕರ್ ರೆಡ್ಡಿ.ಪಿ ಒಂದು ನಿಮಿಷದಲ್ಲಿ ಸುಮಾರು 212 ವಾಲ್ನಟ್ಗಳನ್ನು ಪುಡಿಮಾಡಿ ವಿಶ್ವ ದಾಖಲೆ ಮಾಡಿದ್ದಾರೆ.
ರೆಡ್ಡಿಯವರು 60ಸೆಕೆಂಡುಗಳಲ್ಲಿ ಒಟ್ಟು 212 ವಾಲ್ನಟ್ಗಳನ್ನು ಪುಡಿ ಮಾಡಿದ್ದಾರೆ. ಈ ವಿಡಿಯೋವನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಯೂಟ್ಯೂಬ್ನಲ್ಲಿ ಹರಿಬಿಟ್ಟಿದೆ.
ಮರದ ಟೇಬಲ್ ಮೇಲೆ ಕಾಯಿ ವಾಲ್ನಟ್ಗಳನ್ನು ನೀಟಾಗಿ ಇಡಲಾಗಿತ್ತು, ಇವುಗಳನ್ನು ಗಿನ್ನಿಸ್ ಅಧಿಕಾರಿಗಳ ಸಮ್ಮುಖದಲ್ಲಿ ರೆಡ್ಡಿಯವರು ತಮ್ಮ ಕೈಗಳ ಮುಖಾಂತರವೇ ಪುಡಿ ಪುಡಿ ಮಾಡಿದ್ದಾರೆ.
ಈ ಮೂಲಕ 210ವಾಲ್ನಟ್ ಪುಡಿ ಮಾಡಿದ ಪಾಕಿಸ್ಥಾನದ ಮೊಹಮ್ಮದ್ ರಶೀದ್ ಅವರ ದಾಖಲೆಯನ್ನು ಮುರಿದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.