ಜಗತ್ತು ವಿಸ್ತಾರಗೊಳ್ಳುತ್ತಿರುವ ಹಾಗೇ, ಆಧುನಿಕತೆಯೂ ಬೆಳೆಯುತ್ತಿದೆ, ಜಾಗತೀಕರಣದ ಹೆಸರಿನಲ್ಲಿ ಎಲ್ಲವೂ ವಿಸ್ತಾರವಾಗಿ ಬೆಳೆಯುತ್ತಿರುವ ಹಾಗೇ ಮನುಷ್ಯನು ತನ್ನನ್ನು ತಾನು ಈ ಆಧುನೀಕತೆ ಜೊತೆಗೆ ಮಾರುಹೋಗಿದ್ದಾನೆ. ಸಾಮಾಜಿಕವಾಗಿ ಬದುಕಬೇಕಿದ್ದ ಮನುಷ್ಯನು, ತನ್ನನ್ನು ತಾನು ಜಾಲತಾಣಗಳಿಗೆ, ತಂತ್ರಜ್ಞಾನಕ್ಕೆ ಅಣಿಯಾಗಿಸಿದ್ದಾನೆ. ಒಂದು ಕಡೆ ಉಪಯುಕ್ತವಾದ ಮಾಹಿತಿ ಹಂಚಲು ಹಾಗು ಇತರೆ ಸದ್ಬಳಕೆಗೆ ಇದು ಕಾರಣವಾದರೆ ಮತ್ತೊಂದು ಕಡೆ ಅಮಾಯಕರ ತೊಂದರೆಗೆ ಅಡಿಪಾಯವಾಗುತ್ತಿದೆ. ಹೌದು; ಇತ್ತೀಚಿನ ಕಾಲದಲ್ಲಿ ಹೇರಳವಾಗಿ ಬೆಳೆದಿರುವ ಫೇಸ್-ಬುಕ್, ವಾಟ್ಸಾಪ್, ಟ್ವಿಟರ್, ಹಾಗು ಇನ್ನಿತರೆ ಸಾಮಾಜಿಕ ಜಾಲತಾಣಗಳು ಕೇವಲ ನಮ್ಮ ಸಮಯ ಕಳೆಯುವ ಸಾಧನವಾಗಲ್ಲದೇ, ಸಮಾಜದ ಅತೀ ದೊಡ್ಡ ಸಮಸ್ಯೆಗೂ ಕಾರಣವಾಗುತ್ತಿವೆ.
ಜಿಹಾದ್ ಎಂಬ ಪೆಡಂಭೂತಕ್ಕೆ ಬೇಕಾದಂತೆ ಕುಣಿಯಲು ಇಂತಹ ಸಾಮಾಜಿಕ ಜಾಲತಾಣ ದೊಡ್ಡ ರಂಗಮಂಚದ ಹಾಗಾಗಿದೆ.
ನಕಲಿ ಹೆಸರಿನಲ್ಲಿ ಖಾತೆಯನ್ನು ತೆರೆದು, ಹಿಂದೂ ಹುಡುಗಿಯರ ಖಾತೆಗೆ ನುಗ್ಗಿ ಅವರ ಪ್ರತಿಯೊಂದು ವಿಷಯಗಳನ್ನು ಪಡೆದುಕೊಂಡು ಅವರನ್ನು ಮಂಗ ಮಾಡಿ ಮುಂದೆ ನಕಲೀ ಪ್ರೇಮದ ಜಾಲಕ್ಕೆ ಸಿಕ್ಕಿಹಾಕಿಸಲಾಗುತ್ತಿದೆ.
ಪ್ರೀತಿ ಪ್ರೇಮ ಅನ್ನೋದೆಲ್ಲ ಬರಿ ಸುಳ್ಳು….”ಅನ್ನೋ ಮಾತಿಗೆ ಈಗ ಮತ್ತೊಮ್ಮೆ ಜೀವ ಬಂದಿದೆ… ಪ್ರೀತಿಗೆ ವಯಸ್ಸಿನ ಅಂತರವಿಲ್ಲ, ಜಾತಿಯ ಹಂಗಿಲ್ಲ… ಈ ಮಾತುಗಳು ಈಗ ನಿಜಕ್ಕೂ ಭೀಕರ ಅನ್ನಿಸತೊಡಗಿದೆ. ದಿನ ಪೇಪರ್, ಟಿವಿ ನೋಡಿದರೆ ಕೇರಳದಲ್ಲಿ “ಲವ್ ಜಿಹಾದ್” ಎಂಬ ಸಕ್ರಿಯ ಮತಾಂತರ ಯಂತ್ರ ಎಂಬ ಸುದ್ದಿಯನ್ನು ಕೇಳೇ ಕೇಳುತ್ತೇವೆ. ಹಾಗಿದ್ದರೆ ಏನಿದು ಲವ್ ಜಿಹಾದ್…??
ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರನ್ನು “ಲವ್” ಎನ್ನೋ ಹೆಸರಲ್ಲಿ ಬಲೆಗೆ ಬೀಳಿಸಿಕೊಂಡು ಇಸ್ಲಾಂ ಮತಕ್ಕೆ ಬದಲಾಯಿಸುವುದೇ ಈ ಲವ್ ಜಿಹಾದ್ ಕೆಲಸ. ಇದು ಭಯೋತ್ಪಾದನೆಯ ಮತ್ತೊಂದು ಮುಖ ಅಂದರೂ ತಪ್ಪಾಗಲಾರದೇನೋ. ಕೇರಳದಲ್ಲಿ ಸರ್ಕಾರೀ ಅಂಶಗಳು ಹೇಳುವ ಪ್ರಕಾರ ಪ್ರತಿ ದಿನ ಸುಮಾರು ಎಂಟು ಇಸ್ಲಾಮೇತರ ಹುಡುಗಿಯರು ಕಾಣೆಯಾಗುತ್ತಿದ್ದಾರೆ. 2010 ರಲ್ಲಿ ಸುಮಾರು 2167 ಹುಡುಗಿಯರು ಕಾಣೆಯಾಗಿದ್ದಾರೆ. ಈ ಸಂಖ್ಯೆ 2015ರಲ್ಲಿ 2530.ಇದು ಕೇವಲ ಕೇರಳವೊಂದರಲ್ಲಿ ಮಾತ್ರ. ಇನ್ನೂ ದೇಶದಾದ್ಯಂತ ವ್ಯಾಪಕವಾಗಿ ಬೆಳೆದಿದೆ.
ಕೇರಳದ ಪತ್ತನಂತಿಟ್ಟ ಕಾಲೇಜಿನ ಇಬ್ಬರು ಎಂಬಿಎ ವಿದ್ಯಾರ್ಥಿನಿಯರು ಇದ್ದಕ್ಕಿದ್ದಂತೆ ನಾಪತ್ತೆ ಆದರು. ಅವರ ಹೆತ್ತವರು ಎಷ್ಟೇ ಪ್ರಯತ್ನಿಸಿದರೂ ಕೂಡ ಪತ್ತೆಮಾಡಲಾಗಲಿಲ್ಲ. ನಂತರ ಕೋರ್ಟ್ ಆಜ್ಞೆಯ ಮೇಲೆ ಪೊಲೀಸರು ಕಾರ್ಯಾಚರಣೆ ಮಾಡಿ ಅವರನ್ನು ಕೋರ್ಟ್ಗೆ ಹಾಜರು ಪಡಿಸಿದಾಗ ಹೊರಬಿದ್ದ ಅಂಶ ನಿಜಕ್ಕೂ ಹೃದಯ ವಿದ್ರಾವಕ. ಅವರನ್ನು ಅಪಹರಿಸಿಕೊಂಡು ಹೋಗಿ ಮಲಪ್ಪುರಂ ಅಲ್ಲಿ ಬಂಧಿಸಿ ಇಸ್ಲಾಂಗೆ ಮತಾಂತರಗೊಳ್ಳಲು ಒತ್ತಾಯಿಸಿದ್ದಾರೆ. ಒಬ್ಬಳನ್ನು ಮದುವೆಯಾಗಿ ಅವಳ ಇಷ್ಟಕ್ಕೆ ವಿರುದ್ಧವಾಗಿ ಮತಾಂತರ ಮಾಡಿದ್ದಾರೆ ಕೂಡ. ಇನ್ನೊಬ್ಬಳನ್ನು ಆತನ ಸ್ನೇಹಿತನನ್ನು ಮದುವೆಯಾಗಿ ಮತಾಂತರಗೊಳ್ಳುವಂತೆ ಹಿಂಸಿಸಿದ್ದಾರೆ. ಇಸ್ಲಾಂ ಧಾರ್ಮಿಕ ಕೃತಿಗಳನ್ನು ಓದುವಂತೆ ಒತ್ತಡ ಹೇರಿದ್ದಾರೆ. ಈ ಎಲ್ಲ ಗೋಳಿನ ಕಥೆಯನ್ನು ಆ ಹೆಣ್ಣುಮಕ್ಕಳು ಕೋರ್ಟ್ ಮುಂದೆ ಬಿಚ್ಚಿಟ್ಟಾಗಲೇ ಲವ್ ಜಿಹಾದ್ ಸತ್ಯ ಬೆಳಕಿಗೆ ಬಂದಿದ್ದು.
ಕೇರಳದ ಮುಸ್ಲಿಂ ಸಂಘಟನೆ ಅವರಲ್ಲಿನ ಸುಂದರ ಹುಡುಗರನ್ನು ಕಾಲೇಜ್ ಕ್ಯಾಂಪಸ್ಗಳಲ್ಲಿ ಈ ಕೆಲಸಕ್ಕಾಗಿಯೇ ಬಿಟ್ಟಿದೆ. ಓದು ಬರಹ ಬಾರದಿದ್ದರೂ ಕೂಡ ಇವರು ಚೆನ್ನಾಗಿ ಡ್ರೆಸ್ ಮಾಡಿಕೊಂಡು ಹಣ ಖರ್ಚು ಮಾಡಿಕೊಂಡು ಓಡಾಡುತ್ತಾರೆ. ಪಿ.ಎಪ್. ಐ. ಎಸ್.ಎಪ್.ಐ. ಎಸ್ಡಿಪಿಐ, ಕೆ.ಎಫ್.ಡಿ ಸೇರಿ ಇತರೇ ಕೆಲವು ಸಮಾಜ ವಿರೋಧೀ ಸಂಘಟನೆಗಳು, ಇತರೇ ಧರ್ಮೀಯ ಹುಡುಗಿಯರ ಸ್ನೇಹ ಬಳಸಿ ಲವ್ ಎಂಬ ಮಾಟ ಮಾಡಿ ಮದುವೆ ಎಂಬ ಆಸೆಯ ಪಂಜರಕ್ಕೆ ನೂಕಿ ಅವರನ್ನು ಬಲವಂತವಾಗಿ ಮತಾಂತರಿಸಿ ನಂತರ ಭಯೋತ್ಪಾದನೆಯಂತಹ ಹೀನ ಕೆಲಸಕ್ಕೆ ಅವರನ್ನು ಬಳಸಿಕೊಳ್ಳುತ್ತಿದ್ದಾರೆ.
ಈ ಭೂತ ಅಲ್ಲಿಯ ಕ್ರಿಶ್ಚಿಯನ್ ಸಮುದಾಯವನ್ನು ಕೂಡಾ ಬಿಟ್ಟಿಲ್ಲ. ಹಾಗಾಗಿ ಈಗ ಕ್ರಿಶ್ಚಿಯನ್ನರು ಕೂಡ ಹಿಂದೂ ಸಂಘಟನೆಯ ಜೊತೆ ಲವ್ ಜಿಹಾದ್ ವಿರುದ್ಧ ಕೈ ಜೋಡಿಸಿದೆ. “ಪ್ರೀತಿ ಪ್ರೇಮಕ್ಕೆ ಜಾತಿ-ಧರ್ಮದ ತಾರತಮ್ಯವೂ ಇಲ್ಲ. ಆದರೆ ಕೆಲವು ಉದ್ದೇಶ, ಗುರಿಗಳನ್ನು ಇಟ್ಟುಕೊಂಡು ಮಾಡುವ “ಪ್ರೀತಿ”, ಪಿತೂರಿಯಾಗಿ ಹೆಣ್ಣುಮಕ್ಕಳ ಬದುಕನ್ನೇ ಭಸ್ಮ ಮಾಡಿಬಿಡುತ್ತದೆ. ವಿವಾಹ ಭರವಸೆ ಕೊಟ್ಟು, ಲೈಂಗಿಕ ಸಂಪರ್ಕ ಬೆಳೆಸಿ ಅದನ್ನು ಚಿತ್ರೀಕರಿಸಿ ಬ್ಲಾಕ್ಮೈಲ್ ಮಾಡಿದ ನಿದರ್ಶನಗಳು ಕೂಡ ಇವೆ. ಈ ಹಿನ್ನೆಲೆಯಲ್ಲಿ “ಹೆಣ್ಣುಮಕ್ಕಳ ಗೆಳೆತನ, ಕಂಪ್ಯೂಟರ್, ಮೊಬೈಲ್ ಮೇಲೆ ಹೆತ್ತವರು ಕಣ್ಣಿಡುವಂತೆ ಕ್ಯಾಥೊಲಿಕ್ ಚರ್ಚ್ ಸುತ್ತೋಲೆ ಹೊರಡಿಸಿದೆ. ಇತ್ತಿಚಿಗೆ ಬೆಳಕಿಗೆ ಬಂದ ಅದೀರಾಳ ಪ್ರಕರಣ ದೇಶದಲ್ಲಿಯೇ ದೊಡ್ಡ ತಲ್ಲಣವಾಗಿಸಿತ್ತು. ನಕಲಿ ಪ್ರೇಮದ ಜಾಲದ ಬಗ್ಗೆ ತಿಳಿದು ಆಕೆ ತನ್ನ ಮಾತೃ ಧರ್ಮಕ್ಕೆ ಮರಳಿದಳು.
ಹುಡುಗಿಯರೇ, ನಿಮ್ಮ ಪ್ರೀತಿ ಹೊತ್ತು-ಹೆತ್ತು, ಸಾಕಿ-ಸಲಹಿ, ಬದುಕು ಕೊಟ್ಟ ಅಪ್ಪ ಅಮ್ಮನನ್ನು ಮಾನಸಿಕವಾಗಿ ಹಿಂಸಿಸಿ ಕೊಲ್ಲದಿರಲಿ. ಪ್ರೀತಿಸುವ ಮುನ್ನ ಒಮ್ಮೆ ಯೋಚಿಸಿ. ಪ್ರೀತಿಸುವ ವ್ಯಕ್ತಿಯ ಬಗ್ಗೆ ತಿಳಿದುಕೊಂಡು ಪ್ರೀತಿಸಿ. ಅವರ ಉದ್ದೇಶ, ಗುರಿಯ ಕಡೆ ಒಂದು ಸಣ್ಣ ಅವಲೋಕನ ಮಾಡಿ ಪ್ರೀತಿಯ ನಿರ್ಧಾರ ಕೈಗೊಳ್ಳಿ. ಅನಾಯಾಸವಾಗಿ ಬಂದ ಈ ಅಮೂಲ್ಯ ಮಾನವ ಜನ್ಮವನ್ನು “ಲವ್ ಜಿಹಾದ್” ಅಂತವರ ಕೈಗೆ ಕೊಟ್ಟು ಹಾಳುಮಾಡಿಕೊಳ್ಳಬೇಡಿ. ಇದು ನಾವೆಲ್ಲರೂ ಎಚ್ಚರಿಕೆಯಿಂದಿರಬೇಕಿರುವ ಸಮಯ. ನಮ್ಮ ಹೆಣ್ಣು ಮಕ್ಕಳ ನಮ್ಮ ಧರ್ಮದ ರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲಿದೆ. ಹೆಣ್ಣು ತಾನು ಅಬಲೆಯಲ್ಲ ಸಬಲೆ ಎಂದು ಸಮಾಜಕ್ಕೆ ತೋರಿಸೋಣ. ಪ್ರತಿ ಸ್ತ್ರೀಯಲ್ಲಿಯೂ ದುರ್ಗೆ ಕಾಳಿ ಇದ್ದಾಳೆ ಆ ಶಕ್ತಿ ಜಾಗೃತವಾದರೆ ಸಮಾಜದಿಂದ ಜಿಹಾದ್ ಎಂಬ ಈ ಪೆಡಂಭೂತವನ್ನು ಓಡಿಸಬಹುದು.
ವಂದೇ ಮಾತರಂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.