ನೈಸರ್ಗಿಕವಾದ ತಂಪಾದ ಗಾಳಿಯನ್ನು ಹೊಂದಿದ್ದ ಬೆಂಗಳೂರನ್ನು ಒಂದು ಕಾಲದಲ್ಲಿ ಹವಾನಿಯಂತ್ರಿತ ಊರು ಎಂದು ಕರೆಯಲಾಗುತ್ತಿತ್ತು. ಹಸಿರುಗಳಿಂದ ಕಂಗೊಳಿಸುತ್ತಿದ್ದ ಈ ಮಹಾ ನಗರ ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗಿತ್ತು.
ಆದರೆ ಇಂದು ಬೆಂಗಳೂರಿನ ಚಿತ್ರಣವೇ ಬದಲಾಗಿದೆ. ಅದರ ಗಾಳಿ ಮಲಿನಗೊಂಡಿದೆ. ಹಸಿರ ಬದಲು ಸುತ್ತಲೂ ಕಾಂಕ್ರೀಟ್ ಕಾಡುಗಳೇ ಕಾಣುತ್ತಿದೆ. ಶುದ್ಧವಾದ ಕುಡಿಯುವ ನೀರಿಗೂ ಅಲ್ಲಿ ಬರ ಬಂದಿದೆ. ಕೆರೆಗಳು ಕೆಮಿಕಲ್ಗಳಿಂದ ತುಂಬಿ ಹೋಗಿವೆ. ಉತ್ತಮವಾದ ಬೆಳೆಗಳನ್ನು ಅಲ್ಲಿ ಬೆಳೆಯಲಾಗುತ್ತಿಲ್ಲ. ಜನರ ಆರೋಗ್ಯವೂ ಹಾಳಾಗುತ್ತಿದೆ. ರೈತರ ಬದುಕು ನರಕವಾಗಿದೆ. ಇದಕ್ಕೆಲ್ಲಾ ಕಾರಣ ಯೋಜನಾಬದ್ಧವಲ್ಲದ ಅಭಿವೃದ್ಧಿ.
ಬೆಂಗಳೂರಿನ ಈ ದುಸ್ಥಿತಿಗೆ ಮರುಗಿರುವ ಡಾ.ವಿಶ್ವನಾಥ್ ಎಂಬ ಕೀಟಶಾಸ್ತ್ರಜ್ಞ ಗಾರ್ಡನ್ ಸಿಟಿ ಫಾರ್ಮರ್ಸ್ ಎಂಬ ಎನ್ಜಿಓವನ್ನು ಸ್ಥಾಪಿಸಿದ್ದಾರೆ. ಇದರ ಧ್ಯೇಯ ’ತಿನ್ನುವುದನ್ನೇ ನೀವು ಬೆಳೆಯಿರಿ ಮತ್ತು ಏನು ಬೆಳೆಯುತ್ತೀರೋ ಅದನ್ನೇ ತಿನ್ನಿ’ ಎಂಬುದಾಗಿದೆ. 2011ರಲ್ಲಿ ಇದರ ಸ್ಥಾಪನೆಯಾಯಿತು. ಸಾವಯಕ ಕೃಷಿ ಪದ್ಧತಿಯನ್ನು ಮನೆಯಲ್ಲೇ ಮಾಡಿ ಎಂಬುದು ಇದರ ಆಶಯವಾಗಿದೆ.
ಆದರೆ 1990ರಿಂದಲೇ ವಿಶ್ವನಾಥ್ ಅವರ ಸಾವಯಕ ಕೃಷಿಯ ವರ್ಕ್ಶಾಪ್ ಮೂಲಕ ಮನೆ ಮತ್ತು ಟೆರೆಸ್ ಗಾರ್ಡನಿಂಗ್ಗಳ ಬಗ್ಗೆ ಇವರು ಬೆಂಗಳೂರಿಗರಿಗೆ ಮಾಹಿತಿ ನೀಡುತ್ತಾ ಬಂದಿದ್ದಾರೆ. ಆರಂಭದಲ್ಲಿ ಸ್ಪಂದನೆ ಕಡಿಮೆಯಾಗಿತ್ತಾದರೂ ಇದೀಗ ಹೆಚ್ಚು ಹೆಚ್ಚು ಮಂದಿ ಈ ಬಗ್ಗೆ ತಿಳಿದು ಕೊಳ್ಳಲು ವರ್ಕ್ಶಾಪ್ಗಳಿಗೆ ಆಗಮಿಸುತ್ತಾರೆ.
ಮನೆ ಅಂಗಳದಲ್ಲಿ, ಟೆರೆಸ್ ಮೇಲೆ, ಪಾಟ್ಗಳಲ್ಲಿ ಹೇಗೆ ತರಕಾರಿ, ಹಣ್ಣುಗಳನ್ನು ಬೆಳೆಯಬೇಕು, ಅವುಗಳನ್ನು ಹೇಗೆ ಪೋಷಿಸಬೇಕು ಎಂಬುದನ್ನು ಇವರಿಂದ ಹಲವಾರು ಮಂದಿ ತಿಳಿದುಕೊಂಡು ಅದನ್ನು ಅನುಷ್ಠಾನಕ್ಕೆ ತಂದಿದ್ದಾರೆ.
ಅವರ ಗಾರ್ಡನ್ ಸಿಟಿ ಎನ್ಜಿಓ ಮೂಲಕ ಈ ಕಾರ್ಯ ನಿರಂತರ ಸಾಗುತ್ತಿದ್ದು, ತಾವೇ ಬೆಳೆದ ತರಕಾರಿಯನ್ನು ತಿನ್ನುವ ಭಾಗ್ಯವನ್ನು ಹಲವಾರು ಮಂದಿ ಪಡೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.