ಮಕ್ಕಳಿಗಾಗಿ, ಅವರ ಭವಿಷ್ಯಕ್ಕಾಗಿ ತಂದೆ ಎಂತಹ ತ್ಯಾಗಕ್ಕೂ ಸಿದ್ಧನಾಗುತ್ತಾನೆ, ಎಂತಹ ಸವಾಲುಗಳನ್ನೂ ಎದುರಿಸುತ್ತಾನೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಇದ್ರಿಸ್. ತಾನು ಕ್ಲೀನಿಂಗ್ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ತನ್ನ ಪುತ್ರಿಯರಿಂದ ಮುಚ್ಚಿಡುತ್ತಲೇ ಅವರನ್ನು ವಿದ್ಯಾವಂತರನ್ನಾಗಿಸಿದ ಒರ್ವ ಶ್ರೇಷ್ಠ ತಂದೆ.
ತನ್ನ ಪುತ್ರಿಯರು ಘನತೆಯುತ ಬದುಕನ್ನು ಪಡೆಯಬೇಕು, ಮತ್ತೊಬ್ಬರ ಮುಂದೆ ತಲೆಯೆತ್ತಿ ನಿಲ್ಲುವಂತಾಗಬೇಕು. ಅವರಿಗೆ ನನ್ನಿಂದ ಅವಮಾನ ಆಗಬಾರದು ಎಂಬ ಕಾರಣಕ್ಕಾಗಿ ಇವರು ಮಾಡಿದ ತ್ಯಾಗ, ಪಟ್ಟ ಪರಿಶ್ರಮ ಒಬ್ಬ ತಂದೆಯಾದವನ ಹೃದಯ ಎಂತಹುದ್ದು ಎಂಬುದನ್ನು ಸಾರುತ್ತದೆ.
ತನ್ನ ಮಕ್ಕಳಿಗೆ ನಾನೊಬ್ಬ ಕಾರ್ಮಿಕ ಎಂದು ಹೇಳಿಕೊಂಡಿದ್ದ ಇವರು, ಅನುಮಾನ ಬರಬಾರದು ಎಂಬ ಕಾರಣಕ್ಕೆ ಪ್ರತಿನಿತ್ಯ ಕ್ಲೀನಿಂಗ್ ಕಾರ್ಯ ಮುಗಿದ ಬಳಿಕ ಸಂಜೆ ಸಾರ್ವಜನಿಕ ಶೌಚಾಲಯದಲ್ಲಿ ಸ್ನಾನ ಮಾಡಿ ಮನೆಗೆ ಬರುತ್ತಿದ್ದರು. ಕ್ಲೀನಿಂಗ್ ಕಾರ್ಯ ಮಾಡುತ್ತೇನೆ ಎಂದರೆ ಮಕ್ಕಳಿಗೆ ಎಲ್ಲಿ ಅವಮಾನವಾಗುತ್ತೋ ಎಂಬ ಆತಂಕ ಇವರಿಗಿತ್ತು.
ದಿನನಿತ್ಯ ಮಕ್ಕಳಿಂದ ಸತ್ಯ ಮುಚ್ಚಿಡುತ್ತ ತಾನು ಗಳಿಸಿದ ಒಂದೊಂದು ಪೈಸೆಯನ್ನೂ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಕೂಡಿಡುತ್ತಿದ್ದರು. ಇದರ ಫಲವಾಗಿ ಅವರ ಮಕ್ಕಳು ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.
ಒಂದು ದಿನ ಇದ್ರಿಸ್ ಮಗಳ ಅಡ್ಮಿಷನ್ಗೆ ಹಣ ಕಟ್ಟಲು ಸಾಧ್ಯವಾಗದೇ ಪರಿತಪಿಸುತ್ತಿದ್ದನ್ನು ಅರಿತ ಅವರೊಂದಿಗೆ ಕೆಲಸ ಮಾಡುವ ಇತರರರು ತಮ್ಮ ಒಂದು ದಿನದ ಸಂಬಳವನ್ನು ಅವರಿಗೆ ನೀಡಿದ್ದಾರೆ. ತೆಗದುಕೊಳ್ಳಲು ಹಿಂಜರಿದಾಗ ಅವರೇ ಸಮಧಾನಿಸಿ ಅವರಿಗೆ ಹಣ ನೀಡಿದ್ದಾರೆ. ಆ ದಿನ ಇದ್ರಿಸ್ ಸ್ನಾನ ಮಾಡದೆಯೇ ಮನೆಗೆ ಹೋಗಿದ್ದಾರೆ. ಇದರಿಂದ ಅವರ ಪುತ್ರಿಯರಿಗೆ ಅವರು ಕ್ಲೀನರ್ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿಯಿತು.
ತಂದೆ ತಮಗಾಗಿ ಪಡುತ್ತಿರುವ ಕಷ್ಟ ನೋಡಲಾಗದೆ ಅವರ ಪುತ್ರಿಯರು ಶಿಕ್ಷಣದೊಂದಿಗೆ ಪಾರ್ಟ್ ಟೈಂ ಜಾಬ್ನ್ನೂ ಮಾಡಿ ತಂದೆಗೆ ಸಹಾಯವನ್ನೂ ಮಾಡುತ್ತಿದ್ದಾರೆ. ಮಾತ್ರವಲ್ಲ ತಂದೆಯ ಸಹಾಯಕ್ಕೆ ಬಂದ ಅವರ ಸಹವರ್ತಿಗಳಿಗೂ ಇವರು ಆಹಾರ ನೀಡುವ ಮೂಲಕ ಋಣ ಸಂದಾಯದ ಕಾರ್ಯ ಮಾಡುತ್ತಿದ್ದಾರೆ.
ಇದೀಗ ಇದ್ರಿಸ್ ಅವರ ತ್ಯಾಗ, ಪರಿಶ್ರಮದ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದಂತೆ ಪಸರಿಸುತ್ತಿದೆ. ಅವರಿಗೂ ತಾನು ಪಟ್ಟ ಶ್ರಮಕ್ಕೆ ಸಾರ್ಥಕತೆ ಸಿಗುತ್ತಿದೆ. ಇದೀಗ ನನಗೆ ನಾನೊಬ್ಬ ಬಡವ ಎನಿಸುವುದಿಲ್ಲ. ನನ್ನಂತಹ ಮಕ್ಕಳಿದ್ದವರು ಬಡವರಾಗಲು ಹೇಗೆ ತಾನೆ ಸಾಧ್ಯ ಎಂದು ಇದ್ರಿಸ್ ತುಂಬು ಮನಸ್ಸಿನಿಂದ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.