ಕಾಸರಗೋಡು : ‘ಗೋವಿಂದ ಗೋಮಾತೆಗೆ ‘ ಸಂದೇಶವನ್ನು ಸಾರುವ ಹಾಗೂ ಕಾಸರಗೋಡು ತಳಿ ಗೋವಂಶದ ಸಂರಕ್ಷಣೆ ,ಸಂವರ್ಧನೆ ,ಸಂಶೋಧನೆಗೆ ಮೀಸಲಾಗಿರುವ ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಸುಸಜ್ಜಿತ ಗೋಲೋಕದ ಲೋಕಾರ್ಪಣೆಯ ಪೂರ್ವ ಭಾವಿಯಾಗಿ ಸಂಚರಿಸುವ ಗೋಜ್ಯೋತಿ ರಥಕ್ಕೆ ಪೆರ್ಮುದೆಯಲ್ಲಿ ಭವ್ಯ ಸ್ವಾಗತ ಸಿಕ್ಕಿತು .
ಗೋಮಾತೆ ಮತ್ತು ಶ್ರೀಕೃಷ್ಣನಿಗೆ ದೇಶೀ ತುಪ್ಪ ಬಳಸಿದ ಆರತಿಯನ್ನು ನೂರಾರು ಮಂದಿ ಬೆಳಗಿದರು. ”ಕಾಸರಗೋಡು ತಳಿಯ ಶ್ರೇಷ್ಟತೆಯನ್ನು ಇಂದು ವಿಜ್ಞಾನಿಗಳು ಹಾಗು ಸರಕಾರ ಗಳು ಒಪ್ಪಿವೆ . ಅಳಿವಿನ ಅಂಚಿನಲ್ಲಿರುವ ಈ ತಳಿಯ ಗೋವಿನ ಹಾಲು ಹಾಗು ಸೆಗಣಿ ,ಗೋಮೂತ್ರ ಸರ್ವ ಶ್ರೆಷ್ಟವಾಗಿದೆ . ಅತ್ಯಂತ ಕಡಿಮೆ ಖರ್ಚಿನಯಿಂದ ನಿರ್ವಹಿಸಬಹುದಾಗಿದೆ .ಇಂತಹ ಗೋವನ್ನು ಸಾಕುವುದು ಅಥವಾ ಸಾಕುವಿಕೆಯನ್ನು ಪ್ರೋತ್ಸಾಹಿಸುವುದರಿಂದ ಮಹತ್ವದ ಕೊಡುಗೆಯನ್ನು ನೀಡ ಬಹುದು.
ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಈಗಾಗಲೇ ಮಹತ್ವದ ಕೆಲಸ ಕಾರ್ಯಗಳು ಈ ನಿಟ್ಟಿನಲ್ಲಿ ಆಗಿವೆ ” ಎಂಬುದಾಗಿ ಶ್ರೀ ಚಂದ್ರಶೇಖರ ಏತಡ್ಕ ಪ್ರಾಸ್ತಾವಿಕವಾಗಿ ನುಡಿದರು .ಶ್ರೀ ಸದಾಶಿವ ಕೊಮ್ಮೆಂಗಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು . ರಾಮ ಭಟ್ ಅಮ್ಮಂಕಲ್ಲು ಧನ್ಯವಾದ ಗೈದರು . ಡಾ ವೈ ವಿ ಕೃಷ್ಣಮೂರ್ತಿ ,ಕ್ಯಾಂಪ್ಕೋ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ ,ಶಂಭು ಹೆಬ್ಬಾರ್ ಮುಂತಾದವರು ಉಪಸ್ತಿತರಿದ್ದರು. ಕುಮಾರಿ ಮಾನಸ ಮುನ್ಚಿಕಾನ[ Munchikana] ಗೋವಿನ ಹಾಡುಗಳನ್ನು ಹಾಡಿದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.